ಬಳ್ಳಾರಿ / ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಶತಮಾನದ ಶಾಲೆಯಲ್ಲಿ ಜೈನ ಸಮಾಜದ ತೀರ್ಥಂಕರರಾದ ಭಗವಾನ್ ಮಹಾವೀರರ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕ ರವಿಕುಮಾರ ಮಾತನಾಡಿ, ಸತ್ಯ, ಅಹಿಂಸೆ, ಉಪವಾಸ, ಅಪರಿಗ್ರಹ ಮೊದಲಾದ ಮೌಲ್ಯಗಳನ್ನು ಬೋಧಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಮಹಾನ್ ಚೇತನ ಭಗವಾನ್ ಮಹಾವೀರರಾಗಿದ್ದಾರೆ. ಇಂತಹ ಮಹಾನೀಯರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸಬೇಕೆಂದರು. ಇದಕ್ಕೂ ಮುನ್ನ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುಷ್ಪಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಎಸ್.ಸದ್ಯೋಜಾತಪ್ಪ, ಶಿಕ್ಷಕರಾದ ಶಿವನೇಗೌಡರ ರಾಮಪ್ಪ, ಮಂಜುನಾಥ್, ಧನಂಜಯ ರೆಡ್ಡಿ, ದೇವರಾಜ, ಮಾರೇಸ್ ಸೇರಿದಂತೆ ಇತರೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















