ಬಳ್ಳಾರಿ / ಕಂಪ್ಲಿ: ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ದಿವಂಗತ ಸಜ್ಜನ್ ವೀರಭದ್ರಪ್ಪ ಕುಟುಂಬವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪರಮಪೂಜ್ಯ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪದ್ಮಭೂಷಣ ಸಿದ್ದಗಂಗಾಮಠದ ಡಾ. ಶಿವುಕುಮಾರ ಮಹಾಸ್ವಾಮಿ ಅವರ 119ನೇ ಜಯಂತ್ಯೋತ್ಸವ ಸಂಭ್ರಮದಿಂದ ದ ಬುಧವಾರ ಆಚರಿಸಿದರು. ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಮಾತನಾಡಿ, ಶ್ರೀಗಳು ವೈಯಕ್ತಿವಾಗಿ ಏನನ್ನೂ ಬಯಸದೆ ಸಮಾಜಕ್ಕಾಗಿ ದುಡಿದರು. ಸಮಾಜಕ್ಕೆ ಬದುಕನ್ನು ಮುಡುಪಾಗಿಟ್ಟರು. ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಸ್ವಾಮೀಜಿ, ಲಕ್ಷಾಂತರ ಮಕ್ಕಳ ಬದುಕು ಹಸನು ಮಾಡಿದ್ದಾರೆ. ಶಿವಕುಮಾರ ಸ್ವಾಮೀಜಿಯವರ ಕಾಯಕ ಶ್ರದ್ಧೆ ನಮ್ಮ ಬದುಕಿನ ದಾರಿಯಾದಾಗ ಮಾತ್ರ ಅವರ ತತ್ವಗಳ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ. ಪೂಜ್ಯರ ಕಾಲಘಟ್ಟದಲ್ಲಿ ಇದ್ದು, ಅವರ ಸೇವೆ ಮಾಡಿದ ನಾವೆಲ್ಲರೂ ಅವರ ಜೀವನ ಸಂದೇಶಗಳನ್ನು ಜಗತ್ತಿಗೆ ಸಾರುವ ಜವಾಬ್ದಾರಿಯನ್ನೂ ಹೊತ್ತು, ನಿಷ್ಠೆಯಿಂದ ಪೂರೈಸಬೇಕು ಎಂದರು. ಮೊದಲಿಗೆ ಶಿವುಕುಮಾರ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ, ಮಹಾಮಂಗಳಾರತಿ ಸಲ್ಲಿಸಿದ ನಂತರ ಜಯಂತಿ ಆಚರಿಸಿದರು. ತದನಂತರ ಸಿಹಿ ಮತ್ತು ಮಜ್ಜಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ವೀರಪ್ಪ, ಕಂಪ್ಲಿ ಜೆಸಿಐ ಅಧ್ಯಕ್ಷ ಡಾ.ಭರತ್ ಪದ್ಮಸಾಲಿ, ಮುಖಂಡರಾದ ಸಜ್ಜನ್ ಶರಣಪ್ಪ, ಸಜ್ಜನ್ ವಿಶ್ವನಾಥ, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವಾಲಿಕೊಟ್ರಪ್ಪ, ಜಿ.ಚಂದ್ರೇಶಖರಹಗೌಡ, ಬಿ.ವಿ.ಗೌಡ, ಎಸ್.ಎಂ.ಗುರುಪ್ರಸನ್ನ, ಅರವಿ ಅಮರೇಶಗೌಡ, ಗಡಾದ್ ಪ್ರಸಾದ್, ಇಂದ್ರಜಿತ್ ಸಿಂಗ್, ಸಂತೋಷ್, ರಾಕೇಶ ಬಾಗ್ರಾಚಾ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















