ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ವಂತ ದುಡಿಯಿಂದ ಸಮಾಜಕ್ಕೆ ಮಾದರಿಯಾದ ಮಂಗಳಮುಖಿ ರಾಮಕ್ಕ

ಬಳ್ಳಾರಿ / ಕಂಪ್ಲಿ : ಮಂಗಳಮುಖಿಯರ ಆಶೀರ್ವಾದ ಶುಭವೆಂದೂ, ಶಾಪ ಪ್ರಭಾವಶಾಲಿಯೆಂದೂ ನಂಬಿರುವ ಭಾರತೀಯರು ಇನ್ನು
ಪೌರಾಣಿಕ ಹಿನ್ನೆಲೆಯನ್ನು ನೋಡಿದಾಗ ಮಹಾಭಾರತದಲ್ಲಿ ಅರ್ಜುನನು ಕೂಡಾ ಕೆಲವು ಸಮಯ ಮಂಗಳಮುಖಿಯಾಗಿದ್ದನು ಅಲ್ಲವೇ, ಸಮಾಜದ ಕಡೆಗಣನೆ, ಕುಟುಂಬದಿಂದ ದೂರಾಗುವುದು ಮತ್ತು ಉದ್ಯೋಗದ ಅವಕಾಶಗಳ ಕೊರತೆಯಿಂದಾಗಿ ಕೆಲವರು ಭಿಕ್ಷಾಟನೆ ಅಥವಾ ಲೈಂಗಿಕ ವೃತ್ತಿಯಲ್ಲಿ ತೊಡಗಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ ಇದಕ್ಕೆಲ್ಲಾ ಅಪವಾದವೇನ್ನುವಂತೆ
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರದ ಮಂಗಳಮುಖಿ ಸ್ವಾವಲಂಬನೆ ಜೀವನ ನಡೆಸಿ ಇಡೀ ಕುಟುಂಬವನ್ನು ಸಲಹುತ್ತಿದ್ದಾಳೆ. ಅವರ ಹೆಸರು ಸಂಗೈ ರಾಮಕ್ಕ.
ಯಾರ ಮುಂದೆಯೂ ಕೈಯೊಡ್ಡಿ ಬೇಡಿ ಬದುಕುವುದಿಲ್ಲ. ಹಾಲು, ಹೈನುಗಾರಿಕೆ, ತರಕಾರಿ ಮಾರಾಟ ಮಾಡಿ ಬರುವ ಹಣದಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತಂದೆ, ತಾಯಿ, ಸಹೋದರರ ಜತೆ ಅವಿಭಕ್ತ ಕುಟಂಬದಲ್ಲಿ ಜೀವಿಸುತ್ತ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಗೋವಿಂದಪ್ಪ ಮತ್ತು ದುರುಗಮ್ಮ ದಂಪತಿಗೆ ಇಬ್ಬರು ಪುತ್ರಿಯರು, ಮೂವರು ಮತ್ರರು. ಇವರಲ್ಲಿ ರಾಮಕ್ಕ ಮತ್ತು ಲಕ್ಷ್ಮಣ ಅವಳಿ ಜವಳಿ. ರಾಮಕ್ಕ ತನ್ನ 15ನೇ ವಯಸ್ಸಿನಲ್ಲಿ ಮಂಗಳಮುಖಿಯಾದರು. 7ನೇ ತರಗತಿವರೆಗಷ್ಟೇ ಕಲಿತಿದ್ದಾರೆ. ಒಂದು 15 ಎಮ್ಮೆಗಳ ಸಾಕಣೆ ಮಾಡಿದ್ದಾರೆ. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಗ್ರಾಮದ ಕೆಲವು ಮನೆ ಮತ್ತು ಹೋಟೆಲ್‌ಗಳಿಗೆ ಹಾಲು ಹಾಕುತ್ತಾರೆ. ತರಕಾರಿ, ಸೊಪ್ಪುಗಳನ್ನು ಖರೀದಿಸಿ ತಂದು ಸೈಕಲ್ ತುಳಿಯುತ್ತ ಮನೆ. ಹಸು, ಮನೆಗೆ ತೆರಳಿ ಮಾರಾಟ ಮಾಡುತ್ತ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ.

ಸ್ವಂತ ನಿವೇಶನ ಖರೀದಿ:
ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರ ದುಡಿಮೆಯಲ್ಲೇ ಕಾಲ ಕಳೆಯುವ ರಾಮಕ್ಕನವರು ಸ್ವಂತ ದುಡಿಯಿಂದ ಒಂದಷ್ಟು ಜಾಗೆಯನ್ನೂ ಖರೀದಿಸಿದ್ದಾರೆ. ಸರಕಾರ ಮಾಶಾಸನ ಮಂಜೂರು ಮಾಡಿದೆ. 2016ರಲ್ಲಿ ಕುರಿ ಸಾಕಣೆಗಾಗಿ ಬ್ಯಾಂಕ್ ಸಾಲ ಸೌಲಭ್ಯವೂ ದೊರಕಿದೆ.ಜೋಗತಿ ರಾಮಕ್ಕ ತಮ್ಮ ವೈಯಕ್ತಿಕ, ಕೌಟುಂಬಿಕ ಜೀವನ ಸಾಗಿಸಲು ಹೈನುಗಾರಿಕೆ, ತರಕಾರಿ ಮಾರಾಟಮಾಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಸಮಾಜ, ಎಲ್ಲಾ ಲಿಂಗ ಅಲ್ಪಸಂಖ್ಯಾತರನ್ನು ಸಮಾನ ಮನಸ್ಸಿನಿಂದ ಕಂಡರೆ ಎಲ್ಲರೂ ಸ್ವಾಭಿಮಾನಿ ಬದುಕು ನಡೆಸುತ್ತಾರೆ. ಬಾಬಾ ಸಾಹೇಬರ ಸಮಾನತೆ ಕನಸು ನನಸಾಗುತ್ತದೆ ಎಂದು ನಂಬಿದ್ದಾರೆ.

ಮಂಗಳಮುಖಿಯರು ಯಾರಿಗಿಂತ ಕಡಿಮೆಯಲ್ಲ, ಅವರೂ ಇತರ ಮನುಷ್ಯರತಂತೆ ಆತ್ಮಗೌರವದಿಂದ ಬದುಕಲು ಕಲಿಯಬೇಕು. ಸರಕಾರದ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬೇಕು. ಸಮಾಜದಲ್ಲಿ ಉತ್ತಮ ಹೆಸರು ಪಡೆಯಬೇಕು ಎಂಬುದು ಸಂಗೈ ರಾಮಕ್ಕ ಧ್ಯೇಯವಾಗಿದೆ.

ಕಿರಿಯರ ಶಿಕ್ಷಣಕ್ಕಾಗಿ ಠೇವಣಿ :
ಸಂಗೈ ಕುಟುಂಬದ ಮನೆಯಲ್ಲಿ ತಂದೆ, ತಾಯಿ, ಸಹೋದರರರು, ಸೊಸೆಯಂದಿರು ಹಾಗೂ ಮಕ್ಕಳು ಸೇರಿ ಒಟ್ಟು 21 ಜನ ಸದಸ್ಯರಿದ್ದಾರೆ. ರಾಮಕ್ಕೆ ಅವರು ಹಾಲು, ತರಕಾರಿ ಮಾರಾಟದಿಂದ ಬಂದ ಹಣವನ್ನೇ ಜೋಡಿಸಿ, ಸಹೋದರರ ಮದುವೆ, ಸಹೋದರಿಯರ ವಿದ್ಯಾಭ್ಯಾಸಕ್ಕೆ ಉದಾರವಾಗಿ ನೆರವು ನೀಡಿರುವುದು ವಿಶೇಷ.
ಎಮ್ಮೆ ಹಾಕಿದ ಕೋಣದ ಕರುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಸಹೋದರಿಯರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವುದು ಶೈಕ್ಷಣಿಕ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಅವರ ದುಡಿಮೆಗೆ ಕುಟುಂಬದ ಎಲ್ಲಾ ಸದಸ್ಯರು ಮುಕ್ತ ಮನಸ್ಸಿನಿಂದ ಸಹಾಯ, ಸಹಕಾರ ನೀಡುತ್ತಿರುವುದು ಗಮನಾರ್ಹವಾಗಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!