ಸಿರುಗುಪ್ಪ-ನಗರದ ತುಂಗಭದ್ರಾ ನದಿ ತೀರದ ಆದಿ ದೈವ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉಂತಗಲ್ ವೀರೇಶಪ್ಪ ನಗರಸಭೆ ಮಾಜಿ ಅಧ್ಯಕ್ಷರು ಉಂತಗಲ್ ಅಮರೇಶಪ್ಪ ನವರ ನೇತೃತ್ವದಲ್ಲಿ ಅದ್ದೂರಿಯಾಗಿ ಮಹಾ ರಥೋತ್ಸವದ ಮಲ್ಲಿಗೆ ಹೂವಿನಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶಂಭುಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕೂಡಿಸಿ ಪ್ರದಕ್ಷಣೆ ಮಾಡಿ ರಥದಲ್ಲಿ ಉತ್ಸಹಮೂರ್ತಿ ಕೂಡಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಾತ್ರೆಯಲ್ಲಿ ಸಿರುಗುಪ್ಪ ತಾಲೂಕಿನ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಮತ್ತು ವಿವಿಧ ಜಿಲ್ಲೆಗಳ ಭಕ್ತರು ಭಾಗವಹಿಸಿ ಭಕ್ತರು ಹೂ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು ಐತಿಹಾಸಿಕ ಶಂಭುಲಿಂಗೇಶ್ವರ ಸ್ವಾಮಿ ಜಾತ್ರೆಯ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಮಹಾರುದ್ರ ಅಭಿಷೇಕ ವಿಶೇಷ ಮಹಾಮಂಗಳಾರತಿ ಅಲಂಕಾರ ಮಾಡಲಾಯಿತು. ತಿಮ್ಮಾಪುರ ಶ್ರೀ ಬಸಯ್ಯಸ್ವಾಮಿ ವೀರಗಾಸೆ ಒಡಪು ತೆಕ್ಕಲಕೋಟೆ ಶ್ರೀ ರಾಚಯ್ಯ ಸ್ವಾಮಿ ಸಮಳದೊಂದಿಗೆ ಅಗ್ನಿಕುಂಡ ಪುಟರಾಧನೆ ಕಾರ್ಯಕ್ರಮ ನಡೆದವು ಅಗ್ನಿ ಕುಂಡದಲ್ಲಿ ಶಂಭುಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಆರ್ಚಕರು ನಡೆದು ಬಂದ ನಂತರ ಹರಕೆ ಹೊತ್ತ ನೂರಾರು ಭಕ್ತರು ಅಗ್ನಿಕುಂಡದಲ್ಲಿ ನಡೆದು ತಮ್ಮ ಹರಕೆ ತೀರಿಸಿದರು ಶಂಭುಲಿಂಗೇಶ್ವರ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನದವರೆಗೆ ಮರಿ ತೇರು ಉಚ್ಚಾಯ ಕಾರ್ಯಕ್ರಮ ನಡೆದವು. ಸಿರುಗುಪ್ಪ ದೇಶನೂರು ಗಡ್ಡೆ ವಿರುಪಾಪುರ ವಿನಾಯಕ ನಗರ ಇಬ್ರಾಹಿಂಪುರ್ ಚಾಣಕನೂರು ಬಗ್ಗೂರು ಅರಳಿಗನೂರು ಹಳೆಕೋಟೆ ಸುತ್ತಮುತ್ತ ಗ್ರಾಮಸ್ಥರು ಭಕ್ತರು ಶಂಭುಲಿಂಗೇಶ್ವರ ಸ್ವಾಮಿ ಸನ್ನಿಧಿಗೆ ಬಂದು ಕಾಯಿ ಕರ್ಪೂರ ಸಮರ್ಪಿಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















