ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವರ್ಷಗಳಾದರೂ ದುರಸ್ತಿ ಇಲ್ಲ!ಹೊನ್ನಾವರ ಮಧ್ಯದಲ್ಲೇ ‘ಮರಣ ಬಲೆ’ ರಸ್ತೆ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಜೀವ ಪಣಕ್ಕಾ?

ಹೊನ್ನಾವರ : ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದಿಂದ ಕಿಂತಾಲ್ ಕೇರಿ ಮಾರ್ಗವಾಗಿ ಸಾಗುವ ಸಿ.ಸಿ. ರಸ್ತೆ ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಕುಸಿದು, ಇದೀಗ ನೇರವಾಗಿ ಸಾರ್ವಜನಿಕರ ಜೀವ ಕಸಿಯುವ ‘ಮರಣ ಬಲೆ’ಯಾಗಿ ಪರಿಣಮಿಸಿದೆ. ಕುಸಿದ ಮೇಲ್ಮೈ, ಇವುಗಳೆಲ್ಲವೂ ದಿನನಿತ್ಯ ಅಪಘಾತಗಳಿಗೆ ಕಾರಣವಾಗುತ್ತಿದ್ದು, ಬೈಕ್ ಸವಾರರು ಮತ್ತು ಪಾದಚಾರಿಗಳು ಪ್ರತಿ ಕ್ಷಣವೂ ಜೀವಭಯದಲ್ಲಿ ಸಂಚರಿಸುವಂತಾಗಿದೆ.

ಸಮಸ್ಯೆ ಗಂಭೀರತೆಯ ತುದಿಗೆ ತಲುಪಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ‘ನೋಡಿದಂತೆ ಕಾಣಿಸಿ, ಮಾಡದಂತೆ ಇರುವ’ ಧೋರಣೆ ಮುಂದುವರಿಸಿರುವುದು ಜನರ ಕೋಪವನ್ನು ಉಕ್ಕಿಸಿಸಿದೆ. 2022ರಲ್ಲಿ ಸಲ್ಲಿಸಿದ ಮನವಿ ಬಳಿಕವೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ. ತಾಲೂಕು ದಂಡಾಧಿಕಾರಿಗಳಾದ ಪ್ರವೀಣ್ ಕಾರಂಡೆ ಸ್ಥಳಕ್ಕೆ ಭೇಟಿ ನೀಡಿ ಸೂಚನೆ ನೀಡಿದರೂ, ಆ ಆದೇಶಗಳು ಕಡತಗಳ ಗುಂಡಿಯಲ್ಲಿ ಹೂತು ಹೋಗಿ, ನೆಲಮಟ್ಟದಲ್ಲಿ ಶೂನ್ಯ ಕಾರ್ಯವೇ ಕಂಡುಬಂದಿದೆ.

ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಸೇರಿದಂತೆ ಸ್ಥಳೀಯರು ಅನೇಕ ಬಾರಿ ಅಧಿಕಾರಿಗಳ ಕಚೇರಿ ಬಾಗಿಲು ತಟ್ಟಿದರೂ, ಪ್ರತಿಕ್ರಿಯೆಯಿಲ್ಲದ ಆಡಳಿತ ಜನರನ್ನು ನಿರಾಶೆಯ ಅಂಚಿಗೆ ತಳ್ಳಿದೆ.

“ಎಷ್ಟು ಅಪಘಾತಗಳು ಆಗಬೇಕು? ಎಷ್ಟು ಜೀವ ಹೋದರೆ ತೃಪ್ತಿ?”

“ಶೀಘ್ರದಲ್ಲೇ ದುರಸ್ತಿ” ಎಂಬ ಖಾಲಿ ಭರವಸೆಯನ್ನು ಹಳೆಯ ಕ್ಯಾಸೆಟ್‌ನಂತೆ ಮತ್ತೆ ಮತ್ತೆ ಹೇಳುತ್ತಾ ಕಾಲಹರಣ ಮಾಡುತ್ತಿರುವ ತಾಲೂಕು ದಂಡಾಧಿಕಾರಿಗಳು ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡಿದೆ.

ಪಟ್ಟಣದ ಮಧ್ಯದಲ್ಲೇ ಮರಣ ಬಲೆ ನಿರ್ಮಾಣವಾಗಿದ್ದರೂ ಕ್ರಮ ಕೈಗೊಳ್ಳದಿರುವುದು—ಇದು ಕೇವಲ ನಿರ್ಲಕ್ಷ್ಯವಲ್ಲ, ಜನರ ಜೀವದ ಮೇಲೆ ನಡೆಸುತ್ತಿರುವ ನಿರ್ದಯ ಪ್ರಯೋಗ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಾಹುತವಾದ ಬಳಿಕ ‘ಜಾಗೃತ’ ಎನ್ನುವ ನಾಟಕ ಆಡುವುದು ಅಧಿಕಾರಿಗಳ ಪದ್ಧತಿ ಆಗಿಬಿಟ್ಟಿದೆ ಎಂಬ ಟೀಕೆ ಕೇಳಿಬರುತ್ತಿದೆ. ಇನ್ನೂ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ಅನಾಹುತಗಳಿಗೆ ನೇರ ಹೊಣೆ ಅಧಿಕಾರಿಗಳದ್ದೇ ಆಗಲಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ವರದಿ: ವಿನಾಯಕ ಆಚಾರಿ, ಹೊನ್ನಾವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!