ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುರುಷವಾದ ವಿಮರ್ಶೆ.

ಲೇಖಕರು : ರಾಮಕೃಷ್ಣ. ಎನ್

ಇದುವರೆಗೂ ಯಾವ ಭಾಷೆಯಲ್ಲಿಯೂ ಮತ್ತು ಯಾವ ದೇಶದಲ್ಲಿಯೂ ಪುರುಷವಾದ ಬಂದಿಲ್ಲ. ಮೊತ್ತ ಮೊದಲು ಕನ್ನಡದಲ್ಲಿ ಬಂದಿದೆ. ಇಂತಹ ಹೊಸ ಚಿಂತನೆಯ ಪುಸ್ತಕವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ರಾಮಕೃಷ್ಣ ಅವರಿಗೆ ಧನ್ಯವಾದಗಳು. ಸ್ತ್ರೀಯಂತೆ ಪುರುಷನು ತನ್ನದೇಯಾದ ಯಾತನೆಗಳನ್ನು ಸಹಿಸುತ್ತಿರುವುದು ಈ ಬರಹ ತಿಳಿಸುತ್ತದೆ. ಪುರುಷವಾದ ವಿಮರ್ಶೆ ಇದು ಸುದ್ದಿಯಾಗದ ಗಂಡು ಧ್ವನಿ.
ಈ ಬರಹ ಪ್ರಸ್ತುತ ಪುರುಷನಿಗೆ ಆಗುತ್ತಿರುವ ಭಾವನಾತ್ಮಕ, ಸಾಮಾಜಿಕ, ಮಾನಸಿಕ ಯಾತನೆಗಳನ್ನು ಬಿಡಿಬಿಡಿಯಾಗಿ ವಿವರಿಸುತ್ತದೆ. ಹೇಗೆ ಪುರುಷನ ಮೇಲೆ ಈ ಸಮಾಜ ಹೊರೆ ಒರಿಸಿದೆ ಮತ್ತು ಸ್ತ್ರೀಯರಿಂದ ಯಾವೆಲ್ಲಾ ಸಮಸ್ಯೆಗಳಿಗೆ ಪುರುಷ ತನ್ನ ತಪ್ಪಿಲ್ಲದೇ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂಬೆಲ್ಲಾ ವಿಷಯವನ್ನು ಕವಿಯು ಸವಿವರವಾಗಿ ಕೆಲವು ವೃತಾಂತಗಳ ಮೂಲಕ ನಮ್ಮ ಮುಂದಿಟ್ಟಿದ್ದಾರೆ.

ಸ್ತ್ರೀಯರ ಆಸೆಗಳಿಗಾಗಿ ಪುರುಷ ಬಲಿ ಆಗುತ್ತಿರುವುದು ಇತ್ತೀಚಿಗೆ ಬಹಳ ಗಂಭೀರ ಸಂಗತಿಯಾಗಿದೆ. ಸ್ತ್ರೀ ತನ್ನ ಆಸೆಗೆ ಗಂಡನ್ನು ಬಲಿ ನೀಡುತ್ತಿರುವುದು ಕಾಣಬಹುದು. ಅವಳಿಗೆ ಚಂಚಲತೆ ಇದ್ದರೆ ಪುರುಷ ಕಾರಣವಿಲ್ಲದೆಯೇ ಬಲಿಯಾಗುತ್ತಾನೆ. ಯುವಜನತೆ ಪ್ರೀತಿ ಎಂಬ ಚಕ್ರವೂಹ್ಯದಲ್ಲಿ ಅಭಿಮನ್ಯುವಿನಂತೆ ಸಿಲುಕಿಕೊಂಡು ತಮ್ಮ ಕೊನೆಯ ಉಸಿರು ಇರುವವರೆಗೂ ನೋವನ್ನು ಸಹಿಸುವುದು ಈ ಬರಹ ತಿಳಿಸುತ್ತದೆ. ಅನಾದಿ ಕಾಲದಿಂದಲೂ ಪ್ರಖ್ಯಾತವಾಗಿರುವ :“ಉದ್ಯೋಗo ಪುರುಷ ಲಕ್ಷಣಂ.” ಸಂದೇಶ ಆ ಕಾಲಕ್ಕೆ ಸರಿ ಇರಬಹುದು ಆದರೆ ಪ್ರಸ್ತುತ ಯುಗಕ್ಕೆ ಇದು ಅನ್ವಯ ಆಗದು, ಆದರೂ ಪುರುಷ ತನ್ನ ಮನೆಯವರಿಗಾಗಿ ದುಡಿಯುತ್ತಿರುವನು. ಇಂತಹ ಪುರುಷನನ್ನು ಯಂತ್ರದಂತೆ ದುಡಿಮೆಯ ಹೆಸರಲ್ಲಿ ಬಳಸಬೇಡಿ ಅವನಿಗೂ ಭಾವನೆಗಳಿವೆ ಎಂದು ಈ ಬರಹ ತಿಳಿಸುತ್ತದೆ.

ಪ್ರಸ್ತುತ ಯುಗದಲ್ಲಿ ಯುವಕರು ಓದಿ ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುತ್ತಿರುವುದು ಕಾಣಬಹುದು. ಈ ರಾಜಕೀಯ ವ್ಯಕ್ತಿಗಳು ಪಗಡೆ ಆಟಕ್ಕೆ ಸಿಕ್ಕ ದಾಳದಂತೆ ಸರಿಯಾಗಿ ಉದ್ಯೋಗ ಭರ್ತಿ ಮಾಡದೆ ಯುವಜನತೆ ಅದರಲ್ಲೂ ಯುವಕರು ಮನೆಯ ಹಲವಾರು ಜವಾಬ್ದಾರಿ ಹೊತ್ತು ಸಾಧಿಸಲು ಬಂದು ಸೋಲುತ್ತಿದ್ದಾರೆ. ಬಹುತೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಾಣಬಹುದು. ಈಗಿನ ಕಾಲದಲ್ಲಿ ಯುವಕ ವಿವಾಹವಾಗಲು ಎಷ್ಟು ಕಷ್ಟಪಡುತ್ತಾನೆ ಮತ್ತು ಮಹಿಳೆ ಎಷ್ಟೆಲ್ಲ ಅಪೇಕ್ಷೆ ಇಡುತ್ತಾಳೆ ಅಂದರೆ ಅವಳ ಆಸೆಗೆ ಪುರುಷ ಬಲಿಯಾಗುತ್ತಿದ್ದಾನೆ. ಸ್ತ್ರೀ ತಾನು ಏನೂ ಸಾಧನೆ ಮಾಡದಿದ್ದರೂ ತನ್ನನ್ನು ಕೈ ಹಿಡಿಯುವವನು ಸಾಧಿಸಿರಬೇಕು ಅಂತ ಬಯಸುತ್ತಾಳೆ. ಅವಳನ್ನು ಮನಸಾರೆ ಪ್ರೀತಿಸಿ ಅರ್ಥ ಮಾಡಿಕೊಳ್ಳುವವರಿಗಿಂತ ಹಣ ಇರುವವರನ್ನು ಹುಡುಕುತ್ತಿದ್ದಾಳೆ. ಇಲ್ಲಿ ಸ್ತ್ರೀ ಭೋಗದ ವಸ್ತುವಲ್ಲ ಆದ್ರೆ ಅವಳೇ ತನ್ನ ಆಸೆಗಳಿಗಾಗಿ ತಾನೇ ಭೋಗದ ವಸ್ತುವಾಗುತ್ತಿದ್ದಾಳೆ.

ಮದುವೆ ಅನ್ನುವುದು ಎರಡು ಮನಸ್ಸುಗಳು ಇಷ್ಟಪಟ್ಟು ಆಗಬೇಕು. ವಿವಾಹ ಎಂದರೆ ಸ್ಪರ್ಧೆಯಲ್ಲ ಜೀವನದ ಮಹತ್ವವಾದ ಗಟ್ಟವಾಗಿದೆ. ಆದರೆ ಬಹುತೇಕ ಸ್ತ್ರೀಯರು ಇದನ್ನು ಅತಿಯುವಲ್ಲಿ ಸೋಲುತ್ತಿದ್ದಾಳೆ. ನನ್ನನ್ನು ವಿವಾಹವಾಗುವ ಗಂಡಿಗೆ ಉನ್ನತ ಕೆಲಸ ಇರಬೇಕು, ಆರ್ಥಿಕವಾಗಿ ಗಟ್ಟಿ ಇರಬೇಕು, ಮನೆಗೆ ಒಬ್ಬನೇ ಮಗನಾಗಿರಬೇಕು, ನನ್ನ ಎಲ್ಲಾ ಆಸೆಗಳನ್ನು ಪೂರೈಸುವ ಶಕ್ತಿ ಅವನಿಗೆ ಇರಬೇಕು ಅಂತ ಬಯಸುತ್ತಾಳೆ. ಆದರೆ ನನ್ನನ್ನು ಮನಸಾರೆ ಅರ್ಥ ಮಾಡಿಕೊಂಡು ಜೊತೆಗೆ ಬಾಳಬೇಕು ಅಂತ ಬಯಸಲ್ಲ. ಸ್ತ್ರೀಯ ಅತಿಯಾದ ಆಸೆ, ನಿರೀಕ್ಷೆಗಳು ಮುಂದೆ ಸಮಾಜದ ಪಿಡುಗಾಗುತ್ತೆ.

ನೀನು ಪುರುಷ ಅಳಬಾರದು, ನೀನು ಪುರುಷ ಗಟ್ಟಿ ಅಂತ ಹೇಳಿದ್ದು ಅವನನ್ನು ರೂಪಿಸಿದ್ದು ಈ ಸಮಾಜವೇ ವಿನಹ ಅವನಾಗಿ ರೂಪುಗೊಂಡಿಲ್ಲ. ಗಂಡು ಎಂದರೆ ಕಲ್ಲಲ್ಲ, ಕಟುಕನು ಅಲ್ಲ. ಅವನೊಂತರ ತಾಯಿಯ ಸ್ಥಾನದಲ್ಲಿ ನಿಲ್ಲುವಂತಹ ತ್ಯಾಗಮಯಿ ಎಂದು ಈ ಬರಹ ಹೇಳುತ್ತದೆ. ಇಂತಹ ಹಲವಾರು ವಿಷಯಗಳು ಈ ಗಂಡಿನ ಗಂದುಗೆಯ ಹೃದಯದಲ್ಲಿ ಧ್ವನಿಯಾಗದೆ ಉಳಿದಿರುವ ಸತ್ಯವನ್ನು ಈ ಬರಹ ಚಿತ್ರಿಸುತ್ತದೆ.

ಪುಸ್ತಕಕ್ಕಾಗಿ ಕದಂಬ ಪ್ರಕಾಶನ – 7795506693.

ವಿಮರ್ಶಕರು : ನಾಗರಾಜ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!