ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೇವಲಾಪುರಕ್ಕೆ ಪಿ.ಯು ಕಾಲೇಜು ತರುವ ಭರವಸೆ ನೀಡಿದ ಶಾಸಕ ಗಣೇಶ

ಬಳ್ಳಾರಿ / ಕಂಪ್ಲಿ : ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಉನ್ನತ ಮಟ್ಟದ ಶಿಕ್ಷಣದ ಹಿತದೃಷ್ಠಿಯಿಂದ ಮುಂದಿನ ದಿನದಲ್ಲಿ ಶಕ್ತಿ ಮೀರಿ ದೇವಲಾಪುರಕ್ಕೆ ಪಿಯು ಕಾಲೇಜು ತರಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಭರವಸೆ ನೀಡಿದರು.
ತಾಲೂಕಿನ ದೇವಲಾಪುರ ಗ್ರಾಮದ ಕಣವಿಮಾರೆಮ್ಮ ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಮಂಗಳವಾರ ಉದ್ಘಾಟಿಸಿದ ನಂತರ ಸಮಾರಂಭದಲ್ಲಿ ಮಾತನಾಡಿ, ಪರಿಸರ, ಆರೋಗ್ಯದ ನಿಟ್ಟಿನಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ದೇವಲಾಪುರ ಅಭಿವೃದ್ಧಿಗೆ ಪ್ರತಿ ಹಂತದಲ್ಲಿ ಮೊದಲ ಆಧ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಕ್ಕಳು ಬಡತನದಲ್ಲೇ ಬಂದಿದ್ದಾರೆ. ಪೋಷಕರ ಕಷ್ಟಗಳನ್ನು ಅರಿತಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಹುದ್ದೆಗಳನ್ನು ಪಡೆಯಬೇಕು. ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಳ್ಮೆ, ಸಹನೆಯಿಂದ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕು ಎಂದರು.
ಸರ್ಕಾರಿ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ದೇವರಮನೆ ಪಂಪಾಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ನಿರ್ಮಾಣಗೊಂಡಿದ್ದು, ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದರು.
ನಂತರ ಮುಖ್ಯಗುರು ಎಚ್.ಪಿ.ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ ಸುಸಜ್ಜಿತ ಪ್ರೌಢಶಾಲಾ ಕಟ್ಟಡ ನಿರ್ಮಾಣದಿಂದಾಗಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಹತ್ತನೇ ತರಗತಿ ಮುಗಿಸಿದ ನಂತರ ವಿದ್ಯಾರ್ಥಿನಿಯರು ದೂರದ ಕಾಲೇಜುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಶಾಸಕರು ಮುಂದಿನ ಅಧಿವೇಶನದಲ್ಲಿ ದೇವಲಾಪುರ ಪ್ರೌಢಶಾಲೆಯನ್ನು ಪಿಯು ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿಸಬೇಕು. ಕಾಂಪೌಂಡ್ ಗೋಡೆ, ಹೈಮಾಸ್ ಲೈಟ್ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು.
ನಂತರ ಬೂದಾಳ್ ರವಿ ನೇತೃತ್ವದಲ್ಲಿ ಉಚಿತ ನೋಟ್ ಬುಕ್ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಮಾಜಿ ಅಧ್ಯಕ್ಷೆ ಪೂಜಾರಿ ಈರಮ್ಮ, ಮಾಜಿ ಉಪಾಧ್ಯಕ್ಷ ನಾಗರಾಜ, ಸೊಸೈಟಿ ಅಧ್ಯಕ್ಷ ಹನುಮಂತ, ಬಿಆರ್‌ಸಿ ಮನೋಹರ, ಬಿಸಿ ಊಟ ಸಹಾಯಕ ನಿರ್ದೇಶಕ ಶಿವನಾಯ್ಕ, ಪ್ರೌಢಶಾಲಾ ನಂದ ಕಿಶೋರ, ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಿವರಾಜಕುಮಾರ, ವಿಎಸ್‌ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ.ಶಿವಕುಮಾರ, ಮುಖಂಡರಾದ ಜಿ.ಮರೇಗೌಡ, ಸುರೇಶಗೌಡ, ಉಮೇಶಗೌಡ, ಗೌಡ್ರು ಸಿದ್ದಯ್ಯ, ಭಾವಿಕಟ್ಟೆ ಉಮೇಶ, ಗಂಗಾಧರ, ದೇವರಮನೆ ಮಲ್ಲಿಕಾರ್ಜುನ, ಕೆ.ಬಸಪ್ಪ, ಉಪ್ಪಾರಹಳ್ಳಿ ಸತ್ಯಣ್ಣ, ಕುರಿ ಕರಿಬಸಪ್ಪ, ವಡ್ರು ಜಡೆಪ್ಪ, ಒಡೆಯರಸ್ವಾಮಿ, ಕುಂಬಾರ ವಿರುಪಾಕ್ಷಪ್ಪ, ಟಿ.ಎ.ರಮೇಶ, ಮಾರೇಶ, ಕಾಮಾಕ್ಷಿ, ಕುರಿ ಹನುಮಂತಮ್ಮ, ಗೊಲ್ಲರ ವೆಂಕಟೇಶ, ಎಸ್.ಅಂಜಿನಪ್ಪ, ಒಡೆಯರ್ ಕಲಾವತಿ, ನಾಗೇಶ್ವರಿ, ಪೂಜಪ್ಪ, ಚಂದ್ರಪ್ಪ, ಕೆ.ಮಂಜುನಾಥ, ಜನಪ್ರತಿನಿಧಿಗಳು, ಪೋಷಕರು, ಶಾಲೆಯ ಸಿಬ್ಬಂದಿಗಳು, ಮಕ್ಕಳು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!