ಕಲಬುರಗಿ/ ಕಾಳಗಿ : ತಾಲೂಕಿನ ದಲಿತ ಸೇನೆ ತಾಲೂಕ ಸಮಿತಿ ವತಿಯಿಂದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ಮಹಾಪುರುಷರ ಭಾವಚಿತ್ರಗಳಾದ ಡಾ ll ಬಿ ಆರ್ ಅಂಬೇಡ್ಕರ್, ವಿಶ್ವ ಗುರು ಬಸವಣ್ಣ, ಬಾಬು ಜಗನ್ ಜೀವನ್ ರಾಂ, ಪೆರಿಯಾರ್, ಶಾವು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಯೋತಿಬಾಪುಲೆ, ಸಾವಿತ್ರಿಬಾಯಿ ಪುಲೆ, ಗೌತಮ ಬುದ್ಧ, ಇವರ ಭಾವಚಿತ್ರಗಳಿಗೆ ದಿ. 16-04-26 ರಂದು ಬೆಳಗಿನ ಜಾವ ಕಿಡಗೇಡಿಗಳು ಸಗಣಿ ಬಳಿದು ( ಹೊಡೆದು ) ಅವಮಾನಿಸಿರುತ್ತಾರೆ. ಕೂಡಲೇ ಅವಮಾನಿಸಿದ ಕಿಡಗೇಡಿಗಳನ್ನು ಕೂಡಲೇ ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ದಲಿತ ಸೇನೆ ತಾಲೂಕು ಸಮಿತಿ ಕಾಳಗಿ ತಾಲೂಕ ವತಿಯಿಂದ ಒತ್ತಾಯಿಸಿದರು. ಮಾನ್ಯರು ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಮುಂದಿನ ಕ್ರಮಕ್ಕಾಗಿ ಮಾನ್ಯ ಗ್ರೇಡ್ -2 ರಾಜೇಶ್ವರಿ ಮೇಡಂ ತಹಶೀಲ್ದಾರರು ಕಾಳಗಿ ರವರ ಮುಖಂತರ ಮಾನ್ಯ ಮುಖ್ಯಮಂತ್ರಿ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಖತಲಪ್ಪ ಅಂಕನ ದಲಿತ ಸೇನೆ . ಕಾ ಅಧ್ಯಕ್ಷರು, ಜೈ ಭೀಮ್ ಹೊಳ್ಕರ ಪ್ರ . ಕಾ. ಕಾಳಗಿ, ರಮೇಶ್ ಕುಡ್ದಹಳ್ಳಿ ಸಮಾಜ ಜಾಲತಾಣ ಅಧ್ಯಕ್ಷರು , ಮಾರುತಿ ತೆಗಲತಿಪ್ಪಿ ಕಾರ್ಯಾಧ್ಯಕ್ಷರು, ಅನಿಲ್ ಗಂಜಗೆರಾ ವಿ. ಒ. ಅಧ್ಯಕ್ಷರು, ತುಕಾರಾಂ ಗಂಜಗೇರಾ ಖಜಾಂಚಿ, ಖಾಲೀದ ಖುರೇಷಿ ನ. ಘ. ಅಧ್ಯಕ್ಷರು, ಖತಲಪ್ಪ ವಜ್ಜರ್ ಗಾವ್ ದ. ಸೇ. ಮುಖಂಡರು, ರಾಮಚಂದ್ರ ಹೊಸಳ್ಳಿ ಪ್ರ. ಕಾರ್ಯದರ್ಶಿ ಸೇರಿದಂತೆ ಇತರರು ಭಾಗವಹಿಸಿದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















