ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಪ್ರಿಯ ಜನನಾಯಕ, ಯುವಕರ ಕಣ್ಮಣಿ, ಕ್ರೀಡಾಪಟುಗಳ ಆಶಾಕಿರಣ, ಯುವಕರ ಮಾರ್ಗದರ್ಶಕರು , ಲಕ್ಷಾಂತರ ಅಭಿಮಾನಿಗಳ ಬಳಗವನ್ನು ಹೊಂದಿರುವ ಪಿ.ಎನ್.ಕೆ.

ಕೊರಟಗೆರೆ ತಾಲ್ಲೂಕು ಚಂದರಾಯನ ದುರ್ಗ ಹೋಬಳಿಯ ಬುಕ್ಕಪಟ್ಟಣ ಗ್ರಾಮದಲ್ಲಿ ಗ್ರಾಮೀಣ ಪ್ರತಿಭೆಗಳಿಂದ ಅದ್ದೂರಿಯಾಗಿ ನಡೆದ ಕ್ರಿಕೆಟ್ ಪಂದ್ಯಗಳು. ಡೈಮಂಡ್ ಕ್ರಿಕೆಟರ್ಸ್ ಆಯೋಜನೆ ಮಾಡಿದ್ದ ಎರಡು ದಿನಗಳ ಟೆನ್ನಿಸ್ ಬಾಲ್ ಟೂರ್ನಿಮೆಂಟ್.

ಯುವ ಪ್ರತಿಭೆಗಳಿಗೆ ಅವಕಾಶ ಸಿಗುವುದರಿಂದ ಇದು ಗ್ರಾಮೀಣ ಭಾಗದ ಕ್ರಿಕೆಟ್ ಸಂಸ್ಕೃತಿಯನ್ನು ಎತ್ತಿ ತೋರಿಸುತದೇ.
ಕ್ರಿಕೆಟರ್ಸ್ ಆಯೋಜನೆ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲು ಕ್ರಿಕೆಟ್ ಪಂದ್ಯವಳಿಯನ್ನು ಮಾಡಿದ್ದು. ಪಂದ್ಯಗಳು ಹೆಚ್ಚು ರೋಚಕತೆಯಿಂದ ಕೂಡಿದ್ದು ಎಲ್ಲರ ಗಮನಸೆಳೆದವು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿಎನ್ ಕೃಷ್ಣಮೂರ್ತಿಯವರು ಈ ಟೂರ್ನಿಮೆಂಟಿನಲ್ಲಿ ಭಾಗವಹಿಸಿದ ಯುವಕರು ಎಲ್ಲಾ ಪಂದ್ಯಗಳು ರೋಚಕವಾಗಿದ್ದು ಉತ್ತಮ ಪ್ರದರ್ಶನವನ್ನು ನೀಡಿದೀರ ಇದರಿಂದ ಎರಡು ತಂಡಗಳ ನಡುವೆ ಸ್ನೇಹ ಪ್ರೀತಿ ಬಾಂಧವ್ಯ ಬೆಳೆದು ಉತ್ತಮ ಕ್ರೀಡಾ ರೂಪಿಸಿಕೊಳ್ಳುತ್ತಾರೆ ಎಂದರು. ಕ್ರಿಕೆಟ್ ಕೇವಲ ಆಟವಲ್ಲ ಇದು ಸಾವಿರಾರು ಲಕ್ಷಾಂತರ ಅಭಿಮಾನಿಗಳ ಜೀವ ಭಾವನೆಯಾಗಿದೆ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು ನಾನು ಸಹ ಕ್ರಿಕೆಟ್ ಕ್ರೀಡಾಪಟುವಾಗಿ ರಾಜ್ಯಮಟ್ಟದ ತಂಡಗಳಲ್ಲಿ ಭಾಗಿಯಾಗಿದ್ದು ನನ್ನ ಜೊತೆಯ ದೊಡ್ಡ ಗಣೇಶ್,ಚಿಕ್ಕ ಗಣೇಶ, ರಾಬಿನ್ಸನ್ ಅವರೆಲ್ಲರೂ ನ್ಯಾಷನಲ್ ಮಟ್ಟದಲ್ಲಿ ಆಡಿದ ನನ್ನ ಕ್ರಿಕೆಟ್ ಸ್ನೇಹಿತರು. ಕ್ರಿಕೆಟ್ ಪಂದ್ಯಗಳನ್ನು ಆಯೋಜನೆ ಮಾಡಿದ್ದ ಕ್ರಿಕೆಟರ್ಸ್ ಗೆ
25000ಗಳ ನಗದು ನೀಡಿ ಅವರ ಪ್ರೀತಿಯಲ್ಲಿ ಭಾಗಿಯಾಗಿ ಕ್ರಿಕೆಟ್ ಪ್ರೇಮಿ ಎಂದು ನಿರೂಪಿಸಿದರು.

ಕ್ಷೇತ್ರದ ಕ್ರೀಡಾರತ್ನ, ಸಮಾಜ ಸೇವಕರು,ಯುವಕರ ಉತ್ತಮ ಮಾರ್ಗದರ್ಶಕರು ದೇವರು ನಿಮಗೆ ಅರೋಗ್ಯ ಕೊಟ್ಟು ಕಾಪಾಡಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರಲಿ ಎಂದು ಹಾರೈಸುತ್ತೇವೆ ಎಂದ ಬುಕ್ಕಪಟ್ಟಣ ಗ್ರಾಮದ ಕ್ರಿಕೆಟ್ ಕ್ರೀಡಾಪಟುಗಳು ಮತ್ತು ಗ್ರಾಮದ ಜನರ ಆಶೀರ್ವಾದವಾಗಿತ್ತು.

ಈ ಸಂದರ್ಭದಲ್ಲಿ ಲಂಬು ರಾಜಣ್ಣ, ಲಕ್ಷ್ಮಣ್, ಗಂಗರಾಜು, ನವೀನ್, ಲಕ್ಕಿ
ಹನುಮಂತು ಮೆಡಿಕಲ್ ರಂಗಣ್ಣ ಅನೇಕರು ಉಪಸ್ಥಿತರಿದ್ದರು.

ವರದಿ ಪ್ರಸನ್ನ ಕುಮಾರ್ ಎಸ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!