
ಬಸವಣ್ಣನವರು ಜಾಗತಿಕ ಸಂಸದೀಯ ವ್ಯವಸ್ಥೆಯ ರೂವಾರಿ ,ಮನುಕುಲದ ಮಾನವತಾವಾದಿ ವಿಶ್ವಗುರು ಬಸವಣ್ಣನವರು : ಡಾ.ಅರುಣಕುಮಾರ ಗಾಳಿ
ಬಾಗಲಕೋಟೆ- ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಎಲ್ಲಾ ವರ್ಗದವರ ಧ್ವನಿಯಾಗಲು ಜಾಗತಿಕ ಮಟ್ಟದಲ್ಲಿ ಸಂಸದೀಯ ವ್ಯವಸ್ಥೆಯನ್ನು ರೂಪಿಸಿ, ಮನುಕುಲದ ಮಾನವತಾವಾದಿ ಬಸವಣ್ಣನವರು ವಿಶ್ವಗುರುವಾಗಿದ್ದಾರೆ ಎಂದು ಪ್ರಾಂಶುಪಾಲರಾದ ಡಾ.ಅರುಣಕುಮಾರ ಗಾಳಿ ಅವರು ಹೇಳಿದರು.
ಅವರು ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿ ಬಸವಣ್ಣನವರು ಸರ್ವ ಜನಾಂಗದವರಿಗೆ ಕಾಯಕ ತತ್ವ, ದಾಸೋಹ ತತ್ವ, ಸಾಮಾಜಿಕ ಸಮಾನತೆಯ ಪರಿಕಲ್ಪನೆಯನ್ನು ನೀಡಿ ಜಗಜ್ಯೋತಿಯಾಗಿದ್ದಾರೆ ಸಾಮಾಜಿಕ ಸಮಾನತೆಯ ಸುಧಾರಣೆಗಾಗಿ ಕನ್ನಡ ನಾಡಿನ ಶರಣ ಚಳುವಳಿಯ ಹರಿಕಾರರಾಗಿ, ಸಾಮಾಜಿಕ ಹಾಗೂ ವೈಚಾರಿಕ ನೆಲೆಗಟ್ಟಿನ ಮೇಲೆ ಸಮ ಸಮಾಜವನ್ನು ಕಟ್ಟುವುದು ಮತ್ತು ವಚನ ಕ್ರಾಂತಿಯ ಮೂಲಕ ಸರ್ವಸಮಾಜದ ಸುಧಾರಣೆಯ ಸಂಕಲ್ಪವನ್ನು ಮಾಡಿದವರು ಮಹಾಮಾನವತಾವಾದಿ, ಸಾಂಸ್ಕೃತಿಕ ನಾಯಕರಾದವರು ಬಸವಣ್ಣನವರು. ಅವರ ವಚನದಲ್ಲಿ ನೀಡಿರುವ ಸಮಾನತೆ, ಮಾನವೀಯ ಮೌಲ್ಯಗಳನ್ನು ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರೊ.ಸಂಪತ್ ಲಮಾಣಿ, ಪ್ರೊ.ಚಂದ್ರಶೇಖರ ಕಾಳನ್ನವರ, ಪ್ರೊ.ಪರಸಪ್ಪ ತಳವಾರ, ಪ್ರೊ.ಶಿವಶಂಕರ ಪ್ರಸಾದ, ಪ್ರೊ.ಭಾಗೀರತಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
- ಕರುನಾಡ ಕಂದ ಪತ್ರಿಕೆ




















