
ಬಾಗಲಕೋಟೆ : ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ನೆಲೆಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ವ್ಯಾಯಾಮ, ಯೋಗ, ಧ್ಯಾನ ವ್ಯಕ್ತಿಯ ಸ್ವಾಸ್ಥ್ಯ ಬದುಕಿಗೆ ಅವಶ್ಯಕ ಅಂಶಗಳಾಗಿವೆ ಎಂದು ಆದರ್ಶ ವಿದ್ಯಾವರ್ಧಕ ಸಂಘದ ಸದಸ್ಯರಾದ ಎಸ್.ಎಮ್. ಹೊಟ್ಟಿಗೌಡರ ಹೇಳಿದರು.
ತಾಲೂಕಿನ ಬಿಲ್‌ಕೆರೂರಿನಲ್ಲಿ ಜರುಗಿದ ಬೇವೂರಿನ ಪಿ.ಎಸ್.ಸಜ್ಜನ ಕಲಾ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರೂ ಶಿಬಿರದಲ್ಲಿ ರೂಢಿಸಿಕೊಂಡ ಜೀವನಮೌಲ್ಯಗಳನ್ನು ಸಮಾಜದ ಒಳಿತಿಗೆ ಬಳಸಬೇಕೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅರ್ಥಶಾಸ್ತ್ರ ಉಪನ್ಯಾಸಕ ಎಸ್.ಎಸ್.ಆದಾಪೂರ ಶಿಬಿರಾರ್ಥಿಗಳು ಸಮಾಜದ ಒಳಿತಿಗೆ ಸೇವಾ ಮನೋಭಾವ ಬೆಳಸಿಕೊಂಡು ಮುನ್ನಡೆಯಬೇಕು. ತ್ಯಾಗ, ಹೊಂದಾಣಿಕೆ, ನಾಯಕತ್ವಗುಣ, ಭಾವೈಕ್ಯತೆಯ ಚಿಂತನೆಗಳನ್ನು ರೂಪಿಸುವ ಎನ್.ಎಸ್.ಎಸ್. ಚಟುವಟಿಕೆಗಳು ಗ್ರಾಮ ಸಂಸ್ಕೃತಿಯನ್ನು ಪರಿಚಯಿಸಿ ಸ್ವಾವಲಂಭನೆಯನ್ನು ಮೂಡಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಜಗದೀಶ ಗು ಭೈರಮಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಬದುಕಿನುದ್ದಕ್ಕೂ ಅನುಸರಿಸಿ ಸಮಾಜದ ಸೇವೆಗೆ ಎಲ್ಲರೂ ಸಿದ್ದರಾಗಬೇಕು ಎಂದು ಹೇಳಿದರು. ಸಮಾರಂಭದ ವೇದಿಕೆಯಲ್ಲಿದ್ದ ವಿಶ್ರಾಂತ ಪ್ರಾಚಾರ್ಯ ಬಿ.ಬಿ. ಬೇವೂರ ವಚನ ಪ್ರಾರ್ಥನೆ ನೆರವೇರಿಸಿದರು. ಗ್ರಾಮದ ಹಿರಿಯರಾದ ದಾವಲಸಾಬ ಹಳ್ಳೂರ, ಬಸನಗೌಡ ಪಾಟೀಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕನ್ನಡ ಉಪನ್ಯಾಸಕ ಡಾ.ಎಸ್.ಬಿ.ಹಂಚಿನಾಳ ಕಾರ್ಯಕ್ರಮ ನಿರೂಪಿಸಿ ನಡೆಸಿಕೊಟ್ಟರು. ಡಾ. ಎ.ಎಮ್. ಗೊರಚಿಕ್ಕನವರ ಅತಿಥಿಗಳ ಪರಿಚಯ ನಡಸಿಕೊಟ್ಟರು. ಶ್ರೀಮತಿ ಶ್ವೇತಾ ಕಾಗಿಯವರ ಮಾಲಾರ್ಪಣೆ ನಡೆಸಿಕೊಟ್ಟರು. ಶಿಬಿರದ ಯೋಜನಾಧಿಕಾರಿ ಜಿ.ಎಸ್ ಗೌಡರ ವಂದಿಸಿದರು. ಶಿಬಿರದ ನಾಯಕ ಅಭಿಷೇಕ ಪೂಜಾರಿ, ಶಿಬಿರದ ನಾಯಕಿ ಭಾಗಿರಥಿ ಭಾರಕೇರ ಸೇರಿದಂತೆ ಐದು ತಂಡಗಳ ಶಿಬಿರಾರ್ಥಿಗಳು, ಬೋಧಕೇತರ ಸಿಬ್ಬಂದಿ ಶಿವು ಕಟಗಿ ಮುಂತಾದವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
- ಕರುನಾಡ ಕಂದ ಪತ್ರಿಕೆ




















