ನಗುತಿರಲು ನಡುವೆ ತ್ರಿದಳ ಗುಲಾಬಿಯು
ರಕ್ಷಣೆಗಾಗಿ ಟೊಮೆಟೊ ತುಣುಕುಗಳ ಬೇಲಿಯು
ಬಲಗೊಳಿಸಿವೆ ಸುಗಂಧ ಪುಷ್ಪದ ಪಕಳೆಯು
ಸಿಂಗಾರದಿ ಚಿಮ್ಮಿದೆ ಹಾಗಲ ಬೀಜದ ಒರತೆಯು
ಇದುವೇ ಇಂದಿನ ಸುಲಲಿತೆಯ ಚಿತ್ತಾರವು
ಜೊತೆಯಲಿ ಉಗಮಿಸಿದೆ ಸುಗಮದ ಕಾವ್ಯವು
ಶುಭ ಬೆಳಗಿಗೆ ತರುತಿದೆ ನವೋಲ್ಲಾಸವು
ಆಸ್ವಾದಕರಿಗೆ ತುಂಬುತಿದೆ ನವ ಚೈತನ್ಯವು
- ಲಲಿತಾ ಕೆ ಆಚಾರ್, ಬೆಂಗಳೂರು



















