ಭಾಲ್ಕಿ ತಾಲ್ಲೂಕಿನ ನಾಗರಾಳ್ ಗ್ರಾಮದಲ್ಲಿ ಏಪ್ರಿಲ್ 29, 2026ರಂದು Dr. B. R. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವು ಗ್ರಾಮಸ್ಥರ ಏಕತೆ, ಶಿಸ್ತು ಮತ್ತು ಸಮಾಜಮುಖಿ ಚಿಂತನೆಗೆ ಉತ್ತಮ ಉದಾಹರಣೆಯಾಯಿತು. ಗ್ರಾಮದಲ್ಲಿನ ಜನರು ಶಿಕ್ಷಣ, ಸಮಾನತೆ ಹಾಗೂ ಸಹಕಾರದ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಸಾಗುತ್ತಿರುವುದು ಕಾರ್ಯಕ್ರಮದ ಮೂಲಕ ಸ್ಪಷ್ಟವಾಯಿತು.
ಕಾರ್ಯಕ್ರಮದಲ್ಲಿ ಸಮಾನತೆ, ಶಿಕ್ಷಣ ಮತ್ತು ನ್ಯಾಯದ ಮಹತ್ವವನ್ನು ವಿವರಿಸಲಾಗಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಇಂತಹ ಆಚರಣೆಗಳು ಗ್ರಾಮದಲ್ಲಿ ಸೌಹಾರ್ದತೆ, ಅಭಿವೃದ್ಧಿ ಹಾಗೂ ಸಾಮಾಜಿಕ ಅರಿವು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಾಗರಾಳ್ ಗ್ರಾಮವು ಮಾದರಿ ಗ್ರಾಮದಾಗಿ ಹೊರ ಹೊಮ್ಮುತ್ತಿರುವುದು ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಎಎಸ್ಐ ಲಕ್ಷ್ಮಣ್ ರೆಡ್ಡಿ, ಶರಣು ಸರ್, ಆಕಾಶ್ ಸಿಂಧೆ, ಉಮಾಕಾಂತ್ ಶಿಂದೆ, ರಾಹುಲ್ ಶಿಂಧೆ, ಪ್ರಮೋದ್ ಬಿರಾದಾರ್, ಆಕಾಶ್ ಪಾಟೀಲ್, ದಸರತ್ ಮಹೇಶ್, ಅಂಕೋಶ್ ಕೈಲಾಸ, ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















