
ಇಂದು ದಾವಣಗೆರೆ ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ಥಕ ಜನಸೇವೆಯ ಅಂಗವಾಗಿ ಮೇ 9 – 2026 ರಂದು ಚಿತ್ರದುರ್ಗದಲ್ಲಿ ಜರುಗಲಿರುವ BSY ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು.

ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಮಾಜಿ ಸಂಸದರಾದ ಡಾ||ಜಿ. ಎಂ. ಸಿದ್ದೇಶ್ವರ ರವರು, ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿ. ವೈ. ರಾಘವೇಂದ್ರ ರವರು, ಲೋಕಸಭಾ ಪರಾರ್ಜಿತ ಅಭ್ಯರ್ಥಿ ಗಾಯಿತ್ರಿಸಿದ್ದೇಶ್ವರ, ಮಾಜಿ ಸಚಿವರು ಎಸ್, ಎ. ರವೀಂದ್ರನಾಥ್, ಬಿಜೆಪಿ ಜಿಲ್ಲಾ ಅಧ್ಯಕ್ಷರು ರಾಜಶೇಖರ್ ನಾಗಪ್ಪ, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ಯುವ ಮುಖಂಡರು ಜಿ. ಎಸ್. ಅನಿತ್ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಅಣ್ಣೀಶ್ ಐರಣಿ, ಗ್ರಾಮಾಂತರ ಅಧ್ಯಕ್ಷರು ಎಂ. ಪಿ. ಲಿಂಗರಾಜ್, ರಾಜ್ಯ ಎಸ್. ತಿ. ಮೋರ್ಚಾ ಉಪಾಧ್ಯಕ್ಷರು ಶ್ರೀನಿವಾಸ್ ತಿ. ದಾಸ್ ಕರಿಯಪ್ಪ, ಹಾಗೂ ಅನೇಕ ಮುಖಂಡರು, ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಪಕ್ಷದ ಮುಖಂಡರು ,ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ ಭರ್ಮಪ್ಪ ಮಾಗಳದ




















