ಶಿವಮೊಗ್ಗ/ಕೂಡಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಪತ್ರಿಕಾ ವರದಿಗಳ ಮೂಲಕ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಶ್ರೀ ಶಾರದಾ ಪೀಠಮ್ ಕುರಿತು ಅನವಶ್ಯಕ ಗೊಂದಲಕಾರಿ ಮಾಹಿತಿಗಳು ಹರಡುತ್ತಿರುವುದು ಗಮನಕ್ಕೆ ಬಂದ್ದು, ಭಕ್ತವೃಂದದವರು ಯಾವುದೇ ಗೊಂದಲಕ್ಕೆ ಒಳಗಾಗದೇ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಕೂಡಲಿ ಶೃಂಗೇರಿ ಮಠದ ಆಡಳಿತಾಧಿಕಾರಿ ಹರ್ಷ ಪಂತರ್ ಸ್ಪಷ್ಟೀಕರಣ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶ್ರೀಮದ್ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು ಪ್ರಸ್ತುತ ಶ್ರೀಮಠದ ಶಾಖಾ ಮಠವಾದ ದಾವಣಗೆರೆಯಲ್ಲಿ ವಾಸ್ತವ್ಯದಲ್ಲಿದ್ದು, ಅಲ್ಲಿ ಭಕ್ತರಿಗೆ ನಿತ್ಯವೂ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಜಗದ್ಗುರುಗಳು ಶೃಂಗೇರಿಗೆ ತೆರಳಿರುವುದು ಕೇವಲ ದರ್ಶನ ಹಾಗೂ ಬಾಂಧವ್ಯ ಸಂಬoಧಿತ ಉದ್ದೇಶಗಳಿಗೆ ಮಾತ್ರವಾಗಿದ್ದು, ಇತರೆ ಯಾವುದೇ ಚರ್ಚೆಗಳು ಅಥವಾ ಆಡಳಿತಾತ್ಮಕ ವಿಷಯಗಳಿಗೆ ಸಂಬoಧಪಟ್ಟುದಲ್ಲ. ಹಾಗೂ ಶ್ರೀಮಠದ ಆಡಳಿತಾಧಿಕಾರಿಗಳಾದ ಹರ್ಷ ಪಂತರ್ ಹಾಗೂ ಧಾರ್ಮಿಕ ಸೇವೆಗಳ ನಿರ್ವಹಣೆಗೆ ಶ್ರೀ ಪ್ರದೀಪ್ ಅಗ್ನಿಹೋತ್ರಿ ಅವರನ್ನು ಜಗದ್ಗುರುಗಳೇ ಸ್ವತಃ ಪರಿಶೀಲಿಸಿ ನಿಯೋಜಿಸಿರುವುದು ಸ್ಪಷ್ಟಪಡಿಸಲಾಗುತ್ತದೆ ಎಂದಿದ್ದಾರೆ.
ಆದ್ದರಿಂದ, ಭಕ್ತಾದಿಗಳು ಯಾವುದೇ ವದಂತಿಗಳು ಅಥವಾ ಅಪ್ರಮಾಣಿತ ಮಾಹಿತಿಗಳಿಗೆ ಕಿವಿಗೊಡದೆ, ಶ್ರೀಮಠದ ಅಧಿಕೃತ ಪ್ರಕಟಣೆಗಳನ್ನೇ ನಂಬಿ ಸಹಕರಿಸುವಂತೆ ವಿನಂತಿಸಿಕೊಳ್ಳಲಾಗುತ್ತದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.




















