ಸಿರುಗುಪ್ಪ – ಕಾರ್ಮಿಕರ ಪರಿಶ್ರಮ ಸಮಾಜದ ಪ್ರಗತಿಗೆ ಅಪಾರ ಕಾರ್ಮಿಕರ ಆಶಯ ಈಡೇರಿಸಬೇಕು ಎಂದು ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ ದೇವದಾಸ್ ಅವರ ನೇತೃತ್ವದಲ್ಲಿ 140ನೇ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು ಸರ್ಕಾರ ವಿನೂತನ ಮಾದರಿಯಲ್ಲಿ ಅಧಿಕೃತವಾಗಿ ರಾಜ್ಯಾದದ್ಯಾಂತ ವ್ಯಾಪಕ ಸ್ವರೂಪದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಬೇಕು ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ರಾಷ್ಟ್ರೀಯ ಸಾಕ್ಷರತಾ ಶಾಂತಿ ಸಭೆ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಿರುಗುಪ್ಪ ನಗರದ ಡಾ ಬಿ ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ಅವರು ಕಾರ್ಮಿಕ ದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ದೇಶ ಹಾಗೂ ರಾಜ್ಯದ ಬಹು ಸಂಖ್ಯಾತ ವರ್ಗಕ್ಕೆ ಸೇರಿದ ಕಾರ್ಮಿಕರ ದಿನದ ಬಗ್ಗೆ ಅವರು ಮಾತನಾಡುತ್ತ ಕಾರ್ಮಿಕರು ಹಗಲಿರಳು ಶ್ರಮ ವಹಿಸುತ್ತಾರೆ ಅವರಿಗೆ ಅಗತ್ಯ ಸಾಮಾಜಿಕ ಭದ್ರತೆ ಮತ್ತು ಸೌಲಭ್ಯ ಸಮರ್ಪಕವಾಗಿ ದೊರೆಯಬೇಕು ಜಾಗತಿಕ ಮಟ್ಟದಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿ ನೀತಿಗಳ ವಿರುದ್ಧ ಜನರ ಪ್ರತಿರೋಧ ಹೆಚ್ಚುತ್ತಿರುವುದು ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಅಂತರರಾಷ್ಟ್ರೀಯ ನಿಯಮಗಳನ್ನು ನಿರ್ಲಕ್ಷಿಸಿ ವಿವಿಧ ದೇಶಗಳ ಮೇಲೆ ರಾಜಕೀಯ ಮತ್ತು ಸೈನಿಕ ಒತ್ತಡ ಹೇರಲಾಗುತ್ತಿದೆ ಎಂಬುದು ಕಾರ್ಮಿಕರ ಆರೋಪವಾಗಿದೆ ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿರುವ ಹೋರಾಟವು ಬಂಡವಾಳ ಶಾಹಿ ವ್ಯವಸ್ಥೆಯ ಸಂಕಷ್ಟದ ಸೂಚಕವಾಗಿದೆ ಡಾಲರ್ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹಾಗೂ ಚೀನಾ ಸೇರಿದಂತೆ ಮತ್ತಿತರ ರಾಷ್ಟ್ರಗಳ ಬೆಳವಣಿಗೆಯನ್ನು ನಿಯಂತ್ರಿಸಲು ಅಮೇರಿಕಾ ಕೈಗೊಳ್ಳುತ್ತಿದೆ ಇರಾನ್ ಮೇಲೆ ನಡೆದ ದಾಳಿಗಳಲ್ಲಿ ನಿರೀಕ್ಷಿತ ಫಲಿತಾಂಶ ದೊರಕದಿದ್ದರೂ ಸ್ಥಳೀಯ ಜನರ ಪ್ರತಿರೋಧವು ಸಾಮ್ರಾಜ್ಯ ಶಾಹಿ ಶಕ್ತಿಗಳಿಗೆ ಸವಾಲಾಗಿದೆ ಯುದ್ಧಗಳಿಂದ ಇಂಧನ ಕೊರತೆ ಉಂಟಾಗಿ ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಇದರ ಭಾರವನ್ನು ಬಡವರು ಮತ್ತು ಕಾರ್ಮಿಕ ವರ್ಗವೇ ಹೋರುತ್ತಿದ್ದಾರೆ ಭಾರತದಲ್ಲಿಯೂ ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಕಾರ್ಮಿಕರ ಪರಿಶ್ರಮ ಸಮಾಜದ ಪ್ರಗತಿಗೆ ಅಪಾರ ಕೊಡುಗೆ ಎಂದು ಸಾಮಾಜಿಕ ಕಾರ್ಯಕರ್ತರ ಅಬ್ದುಲ್ ನಬಿ ಅವರು ವಿವರಿಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















