ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೈಲುಕುಪ್ಪೆಯ ಟಿಬೇಟ್ ಕ್ಯಾಂಪಿನ ಗುರುಗಳು ಕರ್ಮಲಾಮಪ್ಪನಿಂದ ದುಷ್ಕೃತ್ಯ :ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ಅವರ ಹೆಸರಿನಲ್ಲಿ ರವಿಯೆಂಬುವವನಿಂದ ಹಲ್ಲೆ

ಮೈಸೂರು : ಬೈಲುಕುಪ್ಪೆಯ ಮೊದಲನೇ ಟಿಬೆಟ್ ಕ್ಯಾಂಪಿನಲ್ಲಿ (ಕರ್ಮಟೆಂಪಲ್) ನಡೆದ ಘಟನೆಯಿದು.

ಬ್ರೋಕರ್ ಒಬ್ಬರು ಪೂವಣ್ಣ ಎಂಬುವವರನ್ನು ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಸಿದ್ದರು‌‌. ಕರ್ಮಲಾಮಪ್ಪ ಎಂಬುವವನಿಗೆ ಆ ಟ್ರಸ್ಟ್ ಸೇರಿತ್ತು . ಅಲ್ಲಿನ ನಿರ್ವಹಣೆ ಸರಿಯಿಲ್ಲ ತುಂಬಾ ಕೆಲಸ ಮುಂಚಿನಿಂದಲೂ ಬಾಕಿ ಉಳಿದಿದೆ ಎಂಬ ಸತ್ಯ ವಿಚಾರವನ್ನು ಮಾಲೀಕನ ಗಮನಕ್ಕೆ ತಂದಿದ್ದು ಆತನ ಕೆಂಗಣ್ಣಿಗೆ ಮೊದಲ ದಿನದಿಂದಲೇ ಗುರಿಯಾದ. ಏಕೆಂದರೆ ಮಾಲೀಕನಾದ ಗುರುಗಳು ಕೆಲಸ ಮಾಡುವ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಎಸುಗುತ್ತಿದ್ದ ಗುಲಾಮರಂತೆ ಕೆಲಸ ಮಾಡಿಸುತ್ತಿದ್ದ ಎಲ್ಲರೂ ಆತನ ಬಗ್ಗೆ ತುಂಬಾ ಋಣಾತ್ಮಕವಾಗಿಯೇ ಮಾತನಾಡುತ್ತಿದ್ದರು. ಮೇಲ್ನೋಟಕ್ಕೆ ಅವನಿಗೆ ಹೆದರಿ ಏನನ್ನು ಮಾತನಾಡದೆ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದರು. ಹಿಂದೆ ಕೆಲಸ ಮಾಡಿದ್ದ ಸಿಬ್ಬಂದಿಗಳಿಗೂ ಇದೇ ರೀತಿಯ ತೊಂದರೆಯನ್ನು ಕೊಟ್ಟಿದ್ದ ಎಂಬುದು ಬಲ್ಲ ಮಾಹಿತಿಗಳಿಂದ ತಿಳಿದು ಬಂದಿದೆ. ಅಲ್ಲದೇ ಅವರದೇ ಧರ್ಮದ ವಿಚಾರವಾಗಿ ಅವರನ್ನು ದ್ವೇಷಿಸುತ್ತಿದ್ದರಂತೆ . ಗುರುಗಳಾಗಿ ಮದುವೆಯಾಗಬಾರದೆಂಬ ಷರತ್ತನ್ನು ಸಹ ಆತ ಮುರಿದಿದ್ದ. ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೮ ಗಂಟೆಯವರೆಗೆ ಸಮಯದ ಪರಿವೆಯಿಲ್ಲದಂತೆ ಕೆಲಸ ಮಾಡಿಸುತ್ತಿದ್ದ. ಆದರೆ ಕಾರ್ಮಿಕ ಸಂಘಟನೆಯ ಪ್ರಕಾರ ಕೇವಲ ಎಂಟು ಗಂಟೆಯ ಕೆಲಸ ಎಂಬುದು ಸರ್ಕಾರಿ ನಿಯಮವಿದೆ. ಅಲ್ಲದೆ ಓದಲು ಹೊರ ರಾಜ್ಯಗಳಿಂದ ಬರುವ ಮಕ್ಕಳನ್ನು ಕಿಂಚಿತ್ತೂ ಕರುಣೆ ಇಲ್ಲದೆ ಕೂಲಿ ಕಾರ್ಮಿಕರಂತೆ ದುಡಿಸುತ್ತಿದ್ದ ಅದಕ್ಕಾಗಿ ಅವನು ಬೇರೆ ಸಿಬ್ಬಂದಿಗಳನ್ನು ಇಟ್ಟುಕೊಂಡಿರಲಿಲ್ಲ. ಕೇವಲ ರೋಹಿತ್ ಎಂಬ ಒಬ್ಬ ಬಿಹಾರಿಯವನನ್ನು ಇಟ್ಟುಕೊಂಡು ಆತನಿಂದಲೇ ಪ್ರತಿಯೊಂದು ಕೆಲಸವನ್ನು ಮಾಡಿಸುತ್ತಿದ್ದ ಹಾಗೂ ಅವನು ಕೆಲಸ ಬಿಟ್ಟು ಹೋಗದಂತೆ ಅವನ ಸಂಬಳವನ್ನು ಸಹ ಹಿಡಿದಿಟ್ಟುಕೊಂಡಿದ್ದ. ಅವನು ತನಗೆ ಬೇರೆ ಯಾವುದೇ ವಿಧಿ ಇಲ್ಲ ಎಂಬಂತೆ ಜೀತದ ಆಳಾಗಿ ಅಲ್ಲಿ ಕೆಲಸ ಮಾಡಿಕೊಂಡಿದ್ದ .ಆದರೂ ಸಹ ಹೊಸದಾಗಿ ಕೆಲಸಕ್ಕೆ ಸೇರಿದ ಪೂವಣ್ಣನಿಗೆ ತನ್ನ ಅಳಲನ್ನು ತೋಡಿಕೊಂಡಿದ್ದ .
ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಪೂವಣ್ಣನ ಮೇಲೆ ಕೆಟ್ಟ ಪದಗಳಿಂದ ನಿಂದಿಸುವುದು ಮತ್ತು ಕಿರುಚಿ ಮಾತನಾಡುವುದು, ಆತನ ಜಾತಿಯ ಬಗ್ಗೆ ಕೀಳಾಗಿ ಮಾತನಾಡುವುದು ,ಕನ್ನಡಿಗರು ನನ್ನ ಕಾಲ ದೂಳಿಗೆ ಸಮ ಜೀತದ ಆಳು ಎಂಬಂತೆ ವರ್ತಿಸುತ್ತಿದ್ದ.

ಭಾನುವಾರದಂದು ಬೆಳಿಗ್ಗೆ ೫ ಗಂಟೆಗೆ ಎದ್ದು ಬಂದು ಬಂದು ನೀರು ಬರುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬೆಳ್ಳಂಬೆಳಗ್ಗೆಯೇ ರೋಹಿತ್ ಎಂಬ ಕಾರ್ಮಿಕರನ್ನು ಬೈದು ಹೊಡೆಯಲು ಮತ್ತು ಕಾಲುಗಳಿಂದ ಒದೆಯಲು ಹೋಗಿದ್ದ ಅದನ್ನು ನೋಡಿದ ಪೂವಣ್ಣ ಇದು ತಪ್ಪು ಸರ್ ಈ ರೀತಿ ಕೆಲಸಗಾರರಿಗೆ ತೊಂದರೆ ಕೊಡಬಾರದು ಎಂದು ತಿಳಿ ಹೇಳಲು ಹೋದಾಗ ಆತನನ್ನು ಬೈದು ಆತನ ಮೇಲೆ ಆಕ್ರಮಣ ಮಾಡಲು ಹೋದ ಆ ಸಂದರ್ಭದಲ್ಲಿ ಇಬ್ಬರು ವಿಡಿಯೋ ಮಾಡಿಕೊಳ್ಳಲು ಹೋದಾಗ ಅವನು ಇಬ್ಬರ ಮೊಬೈಲನ್ನು ಕಸಿದುಕೊಂಡು ತನ್ನ ವಶದಲ್ಲಿಟ್ಟುಕೊಂಡ.
ಈ ಘಟನೆ ನಂತರವೂ ಇಬ್ಬರು ಧೃತಿಗೆಡದೆ ಕೆಲಸ ಮಾಡುತ್ತಿದ್ದರು. ನಂತರ ಆತ ಕೆಲಸದ ಮೇಲೆ ಹೊರಗಡೆ ಹೋದ ಸಂದರ್ಭದಲ್ಲಿ ರೋಹಿತ್ ಎಂಬುವನು ಬೆಳಗ್ಗಿನಿಂದಲೇ ಮನಸ್ಸಿನ ಮೇಲೆ ನಿಯಂತ್ರಣ ಕಳೆದುಕೊಂಡು ಜೋರಾಗಿ ಅಳತೊಡಗಿದ , ನಾನು ಕೆಲಸ ಮಾಡುವುದಿಲ್ಲವೆಂದು ಕರ್ಮಲಾಮನ ಮೇಲಿನ ಬೇಸರದಿಂದ ಹೋಗಿ ರೂಮಿನಲ್ಲಿ ಮಲಗಿಬಿಟ್ಟ.

ಸ್ವಲ್ಪ ಸಮಯದ ನಂತರ ಲಾಮನು ಸೆಕ್ಯೂರಿಟಿಯ ಫೋನಿಗೆ ಕರೆ ಮಾಡಿ ಕೆಲಸದ ವಿಚಾರವಾಗಿ ನನ್ನ ಬಳಿ ಮಾತನಾಡಲು ಹೇಳಿದ. ಅಷ್ಟರಲ್ಲಿ ಆರುಷ್ ಎಂಬ ಸಣ್ಣ ಬಾಲಕ ಮೋಟರ್ ರಿಪೇರಿ ಮಾಡತೊಡಗಿದ್ದ‌ ಅವನು ಗುರೂಜಿಯ ಬಳಿ ಫೋನಿನಲ್ಲಿ ಮಾತನಾಡುವಾಗ ಆತನಿಗೂ ಕೆಟ್ಟದಾಗಿ ಬೈದು ನಂತರ ಪೂವಣ್ಣನಿಗೆ ಹಲೋ ಎಂದ ತಕ್ಷಣ ಕೆಟ್ಟದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈದು ಜೋರಾಗಿ ಕಿರುಚಿ ಪ್ರಚೋದನೆಗೆ ಕಾರಣ ಮಾಡಿದ್ದರು. ಅಷ್ಟರಲ್ಲಿ ತಾಳ್ಮೆ ಕಳೆದುಕೊಂಡಿದ್ದ ಪೂವಣ್ಣ ನೀವು ದೊಡ್ಡವರು ಎಂದು ಇಷ್ಟು ದಿನ ನಿಮಗೆ ಗೌರವ ಕೊಡುತ್ತಿದ್ದೆ ಆದರೆ ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಆತನಿಗೆ ತಿರುಗಿ ಬೈದನು.
ನಂತರ ಅವನು ಏನನ್ನು ಹೇಳದೆ ಫೋನ್ ಕಟ್ ಮಾಡಿ ಕೆಲ ಸಮಯದ ನಂತರ ಒಬ್ಬ ದಾಂಡಿಗನನ್ನು ಕರೆದುಕೊಂಡು ಬಂದು ಏನನ್ನು ಮಾತನಾಡದೆ ಅವನು ಮನಬಂದಂತೆ ಥಳಿಸಿದ ಕೆಳಗೆ ಬಿದ್ದರು ಬಿಡದೆ ಮಾನವೀಯವಿಲ್ಲದಂತೆ ಬಿದ್ದಲ್ಲಿಗೆ ಎಲ್ಲರ ಕಣ್ಮುಂದೆ ಒದ್ದನು. ನಂತರ ಎಲ್ಲಾ ಮುಗಿದ ನಂತರ ಪೂವಣ್ಣ ನೀನು ಯಾರು ಎಂದು ಕೇಳಿದಾಗ ” ನಾನು ಬೈಲುಕೊಪ್ಪೆ ಠಾಣೆಯ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಎಂದು ಹೇಳಿದ.ಆಗ ಪೂವಣ್ಣ ನನಗೂ ಕಾನೂನು ತಿಳಿದಿದೆ ನೀವು ಸಿವಿಲ್ ಡ್ರೆಸ್ ನಲ್ಲಿ ಬರುವ ಹಾಗಿಲ್ಲ ಮತ್ತು ಯಾವ ಆಧಾರದ ಮೇಲೆ ಕೈ ಮಾಡಿದಿರಿ ಎಂದು ಪ್ರಶ್ನಿಸಿದಾಗ ಆತ ಸುಮ್ಮನಾದ “. ಅಷ್ಟರಲ್ಲಿ ಗುರೂಜಿ ಬಂದು ಮತ್ತೆ ಬಂದು ತಳ್ಳಾಡಿ ಕೈಮಾಡಿದನು. ” ನಾನು ಯಾರಿಗೆ ಬೇಕಾದರೂ ಹೊಡೆಯುತ್ತೇನೆ ನಿನಗೆ ಕೇಳುವಂತಹ ಅಧಿಕಾರವಿಲ್ಲ ಎಂದು ಹೇಳಿದ‌. ಕೊಡಗು ಮತ್ತು ಮೈಸೂರು ನನ್ನ ಕೈ ಕೆಳಗಿದೆ ನಾನು ಹೇಳಿದಂತೆ ಎಲ್ಲಾ ಅಧಿಕಾರಿಗಳು ಕೇಳುತ್ತಾರೆ , ಒಂದು ಕರೆ ಮಾಡಿದರೆ ಸಾಕು ಯಾರು ನನ್ನನ್ನು ಇದುವರೆಗೆ ಪ್ರಶ್ನಿಸಿಲ್ಲ. ಸಂಬಳವನ್ನು ಸಹಾ ಕೊಡುವುದಿಲ್ಲ ಬಾಲಕ ನೀನೇನು ಮಾಡಲು ಸಾಧ್ಯ ” ಎಂದು ಅಹಂಕಾರದಿಂದ ದುರ್ವರ್ತನೆ ತೋರಿದ . ನಂತರ ನಂತರ ಪೂವಣ್ಣ ಅಲ್ಲಿಂದ ಕಣ್ಣೀರು ಹಾಕಿಕೊಂಡು ಹೊರಟು ಸೀದಾ ಬೈಲುಕೊಪ್ಪ ಠಾಣೆಗೆ ಹೋದ.

ನಂತರ ಪೂವಣ್ಣ ಅವರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ (ರಿ.) ಸಮ್ಮುಖದಲ್ಲಿ ಠಾಣೆಗೆ ಧಾವಿಸಿ ದೂರು ನೀಡಿದರು.
ದೂರು ನೀಡಿ ಐದು ದಿನಗಳಾದರೂ ಆತನನ್ನು ಇನ್ನೂ ಠಾಣೆಗೆ ಕರೆಸಿ ವಿಚಾರಿಸಿರಲಿಲ್ಲ. ಗುರೂಜಿಯು ಏನೋ ಕ್ಷುಲ್ಲಕ ಕಾರಣ ಹೇಳಿಕೊಂಡು ನಾನು ಊರಲಿಲ್ಲ ಎಂದು ತಿರುಗಾಡುತ್ತಿದ್ದ. ನಂತರ ಪೂವಣ್ಣ ಅವರ ಕಡೆಯಿಂದ ಡಿವೈಎಸ್ಪಿ ಸರ್ ಹಾಗೂ ಪ್ರಭಾವಿ ರಾಜಕೀಯ ವ್ಯಕ್ತಿಗಳು ನಮ್ಮ ಹುಡುಗನಿಗೆ ಅನ್ಯಾಯವಾಗಿದೆ ಆತನಿಗೆ ನ್ಯಾಯ ಕೊಡಿಸದಿದ್ದಲ್ಲಿ ಸರಿ ಇರುವುದಿಲ್ಲ ಎಂದು ಠಾಣೆಗೆ ಕರೆ ಮಾಡಿ ಆದೇಶ ನೀಡಿದರು. ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ನೀವು ಅವರನ್ನು ಕರೆಸದಿದ್ದರೆ ನಾವು ಶಾಂತಿಯುತವಾಗಿ ಕಚೇರಿಯ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಮನವಿ ಪತ್ರವನ್ನು ನೀಡಿದರು. ಇಷ್ಟು ಹೇಳಿಯೂ ಅವರನ್ನು ಕರೆಸಲಿಲ್ಲ ಕೊನೆಯದಾಗಿ ಪೂವಣ್ಣ ಸಂಸದರ ಮೊರೆ ಹೋದರು. ಅವರು ದಾಖಲೆಯನ್ನು ಪರಿಶೀಲಿಸಿ ಸಬ್ ಇನ್ಸ್ ಪೆಕ್ಟರ್ ರವರಿಗೆ ಕಟ್ಟು ನಿಟ್ಟಿನ ಆದೇಶವನ್ನಿತ್ತರು. ಈ ಎಲ್ಲ ಒತ್ತಡಗಳಿಂದ ಮಣಿದಂತಹ ಪೊಲೀಸರು ಆತನನ್ನು ಅರ್ಧ ಗಂಟೆಯಲ್ಲಿ ಕರೆಸಿದರು.

ಆರೋಪಿತ ಮತ್ತು ಹಲ್ಲೆಕೋರ ಕಚೇರಿಗೆ ಧಾವಿಸುತ್ತಿದ್ದಂತೆ ಕ.ರ.ವೇ ಅಧ್ಯಕ್ಷರಾದ ಪ್ರಾನ್ಸಿಸ್ ಡಿಸೋಜಾ ಅವರು “ನಿನಗೆ ತಾಕತ್ತಿದ್ದರೆ ಈಗ ನನ್ನ ಹುಡುಗನನ್ನು ಮುಟ್ಟೋ ,ಹೊಡಿ ನೋಡೋಣ ಎಂದು ಏರು ಧ್ವನಿಯಲ್ಲಿ ಎಲ್ಲರ ಸಮ್ಮುಖದಲ್ಲಿ ಗುಡುಗಿದರು”.
ನಂತರ ಪೂವಣ್ಣ ಮತ್ತು ಮಹಿಳಾ ಅಧ್ಯಕ್ಷೆ ಜಯಶ್ರೀ ಅವರು” ನಿಮ್ಮ ಹೆಸರು ಹೇಳಿಕೊಂಡು ನಾನು ಬೇರೆಯವರಿಗೆ ಹೊಡೆಯುತ್ತೇನೆ ಅದು ಅಪರಾಧವಲ್ಲವೆ ಎಂದು ಪೋಲಿಸರನ್ನು ಕೇಳಿದರು.
ಕ.ರ.ವೇ ಕಾರ್ಯಕರ್ತರು ನಮ್ಮ ಕುಟುಂಬದ ಯಾವುದೇ ಸದಸ್ಯರನ್ನು ಮುಟ್ಟಿದರೂ ಅದು ಯಾರೇ ಆಗಿರಲಿ ನಾವು ಸುಮ್ಮನಿರುವುದಿಲ್ಲವೆಂದು ಪೋಲಿಸರ ಮುಂದೆ ಎಚ್ಚರಿಕೆ ನೀಡಿದರು.
“ಪೂವಣ್ಣ ಎಲ್ಲರ ಸಮ್ಮಖದಲ್ಲಿ ನಡೆದ ನೈಜ ಘಟನೆಗಳನ್ನು ಆಧಾರ ಸಹಿತ ವಿವರಿಸಿದನು.
ಆಗ ಹೆದರಿಕೊಂಡಂತಹ ಆರೋಪಿತ ರವಿಯು ಇಲ್ಲ ನಾನು ಅವನನ್ನು ಹೊಡೆಯಲಿಲ್ಲ ಎಂದು ಮೊದಲು ಸುಳ್ಳು ಹೇಳಿದನು. ನಂತರ ವಾದವಿವಾದ ಬೆಳೆದು , ಪೂವಣ್ಣ ಸಣ್ಣ ಮಕ್ಕಳಿಂದ ಅಪಾಯಕಾರಿ ಕೆಲಸ ಮಾಡಿಸುತ್ತಿದ್ದದ್ದನ್ನು ಸೂಕ್ತ ಸಾಕ್ಷಾಧಾರಗಳಿಂದ ಪೋಲಿಸರಿಗೆ ಒಪ್ಪಿಸಿದನು. ನಂತರ ಆರೋಪಿ ರವಿಯು ಎಲ್ಲರ ಸಮ್ಮುಖದಲ್ಲಿ
” ನಾನು ಮಾಡಿದ್ದು ತಪ್ಪಾಯಿತು ನಾನು ಗುರೂಜಿಯ ಮಾತು ಕೇಳಿಕೊಂಡು ಆತನ ಮೇಲೆ ಬೈಲುಕೊಪ್ಪ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ರವಿಕುಮಾರ್ ಎಂಬ ಹೆಸರಿನಿಂದ ಹಲ್ಲೆ ಮಾಡಿದೆ. ” ಎಂದು ಬಹಿರಂಗವಾಗಿ ಕ್ಷಮೆ ಯಾಚಿಸಿ ತಪ್ಪನ್ನು ಒಪ್ಪಿಕೊಂಡು ಹಿರಿತನ ಮೆರೆದರು. ಇನ್ನು ಮುಂದೆ ಇಂತಹ ಘಟನೆ ಯಾವ ಸಿಬ್ಬಂದಿಗೂ ಮರುಕಳಿಸುವುದಿಲ್ಲ ಎಂದು ಹೇಳಿಕೆ ಕೊಟ್ಟ ಗುರೂಜಿ ಬರದಿದ್ದರೂ ಆತನ ಕಡೆಯಿಂದ ಟಿಬೇಟಿಯನ್ನರ ಧರ್ಮ ಗುರುಗಳ ಮುಖಂಡ ಬಂದಿದ್ದರು ಅವರು ಸಹ ತುಂಬಾ ಸಭ್ಯಸ್ತರಂತೆ ಮಾತನಾಡಿದರು.
” ಕರ್ಮಲಾಮಪ್ಪನಿಂದ ದೊಡ್ಡ ಅಪರಾಧವಾಗಿದೆ ಆತನ ಮೇಲೆ ತುಂಬಾ ಆರೋಪವಿದೆ. ಆತನ ವಿರುಧ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅವನ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ತಪ್ಪೊಪ್ಪಿಕೊಂಡರು.” ಮತ್ತು ಖರ್ಚು ವೆಚ್ಚ ಬರಿಸಿದರು. ಹಾಗೂ ಎಸ್ಐ ರವಿಕುಮಾರ್ ಸರ್ ಕೂಡ ತುಂಬಾ ತಾಳ್ಮೆಯಿಂದ ನ್ಯಾಯ ಒದಗಿಸಿದರು‌. ಆದರೆ ವೆಂಕಟೇಶ್ ಸರ್ ಮಾತ್ರ ಠಾಣೆ ಒಳಗಡೆ ವಿಡಿಯೋ ಮಾಡಿಕೊಳ್ಳಬಾರದು ಎಂದು ಹೇಳಿದರು. ಸಿಸಿ ಕ್ಯಾಮೆರಾ ಪೂಟೇಜ್ ಕೇಳಿದರೆ ಕೊಡಿಸುತ್ತೇವೆ ಎಂದು ನಂಬಿಸಿದರು .ಅದಕ್ಕೆ ಪೂವಣ್ಣ ಇವತ್ತು ಕರೆಂಟ್ ಇಲ್ಲ ನಾವು ವೀಡಿಯೋ ಮಾಡುತ್ತೇವೆ ಎಂದರು. ಪೊಲೀಸರಿಗೆ ಆರೋಪಿತರ ಕಡೆಯಿಂದ ಒತ್ತಡದ ಕರೆ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಅಲ್ಲದೆ ಕಂಪ್ಲೇಂಟ್ ಕಾಪಿಯನ್ನು ಕೊಡಿ ಎಂದಾಗ ಅದನ್ನು ನಾವು ಕೊಡುವ ಹಾಗಿಲ್ಲ ಎಂದು ಹೇಳುತ್ತಾರೆ. ಆದರೂ ಸಹ ಎಲ್ಲರ ಮುಂದೆ ಕೆಲವೊಂದು ವಿಡಿಯೋಗಳನ್ನು ಚಿತ್ರೀಕರಿಸಿದ್ದೇವೆ. ಅದರಲ್ಲಿಯೇ ಗೊತ್ತಾಯಿತು ಪೊಲೀಸರ ಕರಾಮತ್ತು ಎಷ್ಟಿದೆಯೆಂದು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಗೌರವಾಧ್ಯಕ್ಷ ಚಂದ್ರು, ಕುಶಾಲನಗರ ತಾಲೂಕು ಅಧ್ಯಕ್ಷ ಶಿವಣ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ್, ತಾಲೂಕು ಸಂಚಾಲಕ ಜಯರಾಜ್, ಕಾರ್ಯಕರ್ತರಾದ ಭವ್ಯ ಮತ್ತು ಚಂದ್ರಶೇಖರ್ ರವರು ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷ ಪ್ರಿತುನ್ ಪೂವಣ್ಣ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ತಮ್ಮ ಪದಾಧಿಕಾರಿಗೆ ನ್ಯಾಯ ಕೊಡಿಸುವಲ್ಲಿ ಕರವೇ ಸ್ವಾಭಿಮಾನಿ ಬಣ ಯಶಸ್ವಿಯಾಗುವ ಮೂಲಕ ತನ್ನ ಸಂಘಟನಾ ಶಕ್ತಿಯನ್ನು ರಾಜ್ಯವ್ಯಾಪಿ ಪ್ರದರ್ಶಿಸಿದೆ.

ವರದಿ: ಪ್ರಿತುನ್ ಪೂವಣ್ಣ ಅಯ್ಯನೆರವಂಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!