
ಬೆಳಗಾವಿ: ರಾಯಭಾಗ ಪಟ್ಟಣದ ತಹಸೀಲ್ದಾರ್ ಕಚೇರಿ ಸಮೀಪದ ನಿಡೋನಿ ಕಾಂಪ್ಲೆಕ್ಸ್‌ನಲ್ಲಿ ಇಂದು (03/05/2026) ನಿವೇದಿತಾ ಚಿಟ್ಸ್ ಫಂಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವು ಸ್ಥಳೀಯ ಗಣ್ಯರು, ವ್ಯಾಪಾರಿಗಳು ಹಾಗೂ ನಾಗರಿಕರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಉದ್ಘಾಟನಾ ಸಮಾರಂಭವು ಸರಳವಾಗಿಯೇ ನಡೆದರೂ, ಸಂಸ್ಥೆಯ ಭವಿಷ್ಯದ ದಿಟ್ಟ ಹೆಜ್ಜೆಗಳಿಗೆ ಇದು ಭರವಸೆಯ ಆರಂಭವಾಗಿ ಕಂಡುಬಂತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ನವೀನ್ ಕಾಂಬಳೆ ಅವರು, “ನಿವೇದಿತಾ ಚೀಟ್ಸ್ ಕಂಪನಿ ಸರ್ಕಾರದಿಂದ ಅನುಮೋದನೆ ಪಡೆದಿದ್ದು, ಗ್ರಾಹಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಪಾರದರ್ಶಕ ಹಣಕಾಸು ಸೇವೆಗಳನ್ನು ಒದಗಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ. ಪ್ರಾಮಾಣಿಕತೆ ಹಾಗೂ ನಿಷ್ಠೆಯೇ ನಮ್ಮ ಸಂಸ್ಥೆಯ ಬಲವಾಗಿದ್ದು, ಗ್ರಾಹಕರ ವಿಶ್ವಾಸ ಗೆಲ್ಲುವುದು ನಮ್ಮ ಪ್ರಮುಖ ಗುರಿಯಾಗಿದೆ” ಎಂದು ತಿಳಿಸಿದರು.
ಇದೇ ವೇಳೆ ಸಂಸ್ಥೆಯ ಸೌಲಭ್ಯಗಳು ಮತ್ತು ಕಾರ್ಯಪದ್ಧತಿ ಕುರಿತು ವಿವರಿಸಿದ ಅವರು, “ನಮ್ಮಲ್ಲಿ ಕನಿಷ್ಠ 5%ರಿಂದ ಗರಿಷ್ಠ 25%ರವರೆಗೆ ಬೀಡ್ ವ್ಯವಸ್ಥೆ ಇರುತ್ತದೆ. ಎಲ್ಲಾ ಸದಸ್ಯರಿಗೆ ಸಮಾನವಾಗಿ ಡಿವಿಡೆಂಟ್ ಹಂಚಿಕೆ ಮಾಡಲಾಗುತ್ತದೆ. ಚೀಟಿ ಮೊತ್ತದ ಮೇಲೆ 5% ಕಂಪನಿ ಕಮಿಷನ್ ನಿಗದಿಪಡಿಸಲಾಗಿದೆ. ಗ್ರಾಹಕರ ಸೌಲಭ್ಯಕ್ಕಾಗಿ ದಿನನಿತ್ಯ, ವಾರದ ಹಾಗೂ ಮಾಸಿಕ ಕಲೆಕ್ಷನ್ ವ್ಯವಸ್ಥೆಗಳನ್ನು ರೂಪಿಸಲಾಗಿದೆ.
ಇದರಿಂದ ಎಲ್ಲಾ ವರ್ಗದ ಜನರು ಸುಲಭವಾಗಿ ಉಳಿತಾಯ ಮತ್ತು ಹೂಡಿಕೆ ಮಾಡಬಹುದು” ಎಂದರು.
ಚೀಟ್ಸ್ ಫಂಡ್‌ನ ಮಹತ್ವವನ್ನು ವಿವರಿಸಿದ ಅವರು, “ಚೀಟ್ಸ್ ಫಂಡ್ ಒಂದು ವಿಶಿಷ್ಟ ಹಣಕಾಸು ವ್ಯವಸ್ಥೆಯಾಗಿದ್ದು, ಇದರಿಂದ ಸದಸ್ಯರು ಒಂದೇ ಸಮಯದಲ್ಲಿ ಹಣವನ್ನು ಬಳಸಿಕೊಳ್ಳುವ ಹಾಗೂ ಅಗತ್ಯವಿದ್ದಾಗ ಸಾಲ ಪಡೆಯುವ ಅವಕಾಶ ಪಡೆಯುತ್ತಾರೆ. ಇದು ನಿಯಮಿತ ಉಳಿತಾಯದ ಅಭ್ಯಾಸವನ್ನು ಬೆಳೆಸುವುದರ ಜೊತೆಗೆ, ತುರ್ತು ಅವಶ್ಯಕತೆಗಳಿಗೆ ಆರ್ಥಿಕ ನೆರವು ಒದಗಿಸುವಲ್ಲಿ ಸಹಾಯಕವಾಗುತ್ತದೆ.
ಸಾಮಾನ್ಯ ಜನರ ಆರ್ಥಿಕ ಸ್ಥಿರತೆಗೆ ಇದು ಉತ್ತಮ ಮಾರ್ಗವಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಲವಾರು ಗಣ್ಯರು ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿ, ಸ್ಥಳೀಯರಿಗೆ ಉತ್ತಮ ಹಣಕಾಸು ಸೇವೆಗಳನ್ನು ನೀಡುವಲ್ಲಿ ಸಂಸ್ಥೆ ಯಶಸ್ವಿಯಾಗಲಿ ಎಂದು ಆಶಿಸಿದರು. ಉದ್ಘಾಟನಾ ಸಮಾರಂಭದಲ್ಲಿ ವ್ಯಾಪಾರ ವಲಯದ ಪ್ರತಿನಿಧಿಗಳು, ಸ್ನೇಹಿತರು, ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಂಗೊಳ ನೀಡಿದರು.
ವರದಿ ವಿಠ್ಠಲ ಖೋಕಾಟೆ




















