ಸಿರುಗುಪ್ಪ-ಬಾಗಲಕೋಟೆ ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ಕೇರಳ ರಾಜ್ಯ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅಭೂತಪೂರ್ವವಾಗಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಅಭಿಮಾನಿಗಳು ಮಹಾತ್ಮ ಗಾಂಧೀಜಿ ಸರ್ಕಲ್ ನಲ್ಲಿ ಹರ್ಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮ ಆಚರಣೆ ಮಾಡಿದರು ನಂತರ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಿ ಎಂ ನಾಗರಾಜ ಅವರ ಗೃಹ ಕಚೇರಿಗೆ ತೆರಳಿ ಗೆಲುವಿನ ಮಹತ್ವದ ಪಾತ್ರ ವಹಿಸಿದುದಕ್ಕೆ ಸಂತಸ ವ್ಯಕ್ತಪಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಿ ಎಂ ನಾಗರಾಜ ಅವರು ಚುನಾಯಿತರಾದ ನೂತನ ಶಾಸಕರಿಗೆ ಅಭಿನಂದಿಸಿ ಅವರಿಗೆ ದೊರೆತಿರುವ ಗೌರವಕ್ಕೆ ಅವರ ಯಶಸ್ಸಿಗೆ ಶುಭ ಹಾರೈಸಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಯುವ ಕಾಂಗ್ರೆಸ್ ಅಧ್ಯಕ್ಷರು ಪದಾಧಿಕಾರಿಗಳು ಬಿ ಎಂ ನಾಗರಾಜ ರವರ ಅಭಿಮಾನಿಗಳು ಬಿ ಎಂ ಮನ ಸ್ವೀತ್ ಅಪ್ಪಿ, ಬಿ.ವೆಂಕಟೇಶ್, ಎಚ್. ಗಣೇಶ್, ಪವನ್ ದೇಸಾಯಿ, ಡಿ. ನಾಗರಾಜ, ಮೀರ್ ಹುಸೇನ್, ಮೋದಿನ್, ಮುಲ್ಲಾ ದಾದಾ ಖಲಂದರ್, ಅನ್ಸಾರಿ ಇಸಾಕ್, ಸಲ್ವಾತ್ ಉದ್ದೀನ್, ಡೊಳ್ಳಿ ವಲಿ ರಜಾ, ಗೌಸೇ ರಬ್ಬಾನಿ, ಫ್ರೂಟ್ ರಹೀಂ, ಕೋಟಿ ಜಿಲಾನ್ ಸಂಭ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















