ಕಲ್ಬುರ್ಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪುರದಲ್ಲಿ ರೈತರ ನ್ಯಾಯಕ್ಕಾಗಿ ನಿರಂತರ ಧರಣಿ ಮತ್ತು ಉಪವಾಸ 21 ದಿನಗಳಿಂದ ಸತ್ಯಾಗ್ರಹ ನಡೆಯುತ್ತಿದೆ. 21 ದಿನಗಳಾದರೂ ಅಧಿಕಾರಿಗಳು ಸ್ಪಂದಿಸದೇ ಭ್ರಷ್ಟ ಮತ್ತು ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದ್ದಾರೆ.
ಶಾದಿಪುರ ಮಣ್ಣು ಹಗರಣದಲ್ಲಿ ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಅರ್ಧಸತ್ಯ ಮತ್ತು ಕಾನೂನು ಬಾಹಿರವಾಗಿದೆ. ಕಳೆದ 22 ದಿನಗಳಿಂದ ರೈತರು ಕಣ್ಣೀರು ಹಾಕುತ್ತಾ ಧರಣಿ ಕುಳಿತಿದ್ದರೂ, ಡಿಡಿ (DD) ಅವರು ಮಾಫಿಯಾವನ್ನು ರಕ್ಷಿಸಲು ಸುಳ್ಳು ವರದಿ ಸೃಷ್ಟಿಸಿದ್ದಾರೆ.
ನಮ್ಮ ತಾಂತ್ರಿಕ ಮತ್ತು ಕಾನೂನುಬದ್ಧ ಪ್ರಶ್ನೆಗಳು:
ಕಾನೂನಿನ ದುರ್ಬಳಕೆ: ಡಿಡಿ ಅವರು ತಮ್ಮ ಪತ್ರದಲ್ಲಿ ಕೇವಲ KMMC Rule 43 ರ ಅಡಿಯಲ್ಲಿ ದಂಡ (Penalty) ಹಾಕಿ ಕೈತೊಳೆದುಕೊಂಡಿದ್ದಾರೆ. ಆದರೆ ಅಕ್ರಮ ಗಣಿಗಾರಿಕೆ ನಡೆದಾಗ MMDR Act 1957 Section 21 ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ವಾಹನಗಳನ್ನು ಮುಟ್ಟುಗೋಲು (Seize) ಹಾಕಿಕೊಂಡು FIR ದಾಖಲಿಸಬೇಕಿತ್ತು. ಕೇವಲ ದಂಡ ಹಾಕಿರುವುದು ಕಾನೂನುಬಾಹಿರ.
ಪಂಚನಾಮೆಯೇ ನಡೆದಿಲ್ಲ: ಮೈನಿಂಗ್ ಸ್ಥಳದಲ್ಲಿದ್ದ ವಾಹನಗಳ ಬಗ್ಗೆ ಯಾವುದೇ ಸ್ಪಾಟ್ ಇನ್ಸ್‌ಪೆಕ್ಷನ್ ರಿಪೋರ್ಟ್ ಅಥವಾ ಪಂಚನಾಮೆ ನಡೆಸದೆ, ಕಚೇರಿಯಲ್ಲಿ ಕುಳಿತು ಬಿಡುಗಡೆ ಆದೇಶ ನೀಡಲಾಗಿದೆ. ಇದು ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ.
ತಪ್ಪು ಮಾಹಿತಿ: ಪತ್ರದಲ್ಲಿ 9 ಟಿಪ್ಪರ್‌ಗಳು ಠಾಣೆಯಲ್ಲಿವೆ ಎಂದು ಬರೆಯಲಾಗಿದೆ. ಆದರೆ ವಾಸ್ತವದಲ್ಲಿ ಠಾಣೆಯಲ್ಲಿ ಕೇವಲ 3 ಗಾಡಿಗಳು ಮಾತ್ರ ಇದ್ದವು. ಉಳಿದ ಗಾಡಿಗಳನ್ನು ಮೈನಿಂಗ್ ಸ್ಥಳದಿಂದಲೇ ರಹಸ್ಯವಾಗಿ ಬಿಡಲಾಗಿದೆ.
ರೈತರ ಆಕ್ರೋಶ 22 ದಿನಗಳಿಂದ ರೈತರು ಸರಿಯಾದ ಊಟ, ನಿದ್ರೆಯಿಲ್ಲದೆ ಹೋರಾಡುತ್ತಿದ್ದರೆ, ಅಧಿಕಾರಿಗಳು ಮಾಫಿಯಾದಿಂದ ಲಂಚ ಪಡೆದು ಈ ರೀತಿ ಮಾಡುತ್ತಿರುವುದು ನಮ್ಮ ಹೊಟ್ಟೆಯ ಮೇಲೆ ಹೊಡೆದಂತೆ.
ದಯವಿಟ್ಟು ಎಸಿ ರೂಮಿನಲ್ಲಿ ಕುಳಿತ ಅಧಿಕಾರಿಗಳ ಮಾತು ಕೇಳಬೇಡಿ. ಒಮ್ಮೆ ಘಟನಾ ಸ್ಥಳಕ್ಕೆ (Spot) ಭೇಟಿ ನೀಡಿ. ಅಲ್ಲಿ ಮಾಫಿಯಾ ಮಾಡಿರುವ ದರೋಡೆಯನ್ನು ಕಣ್ಣಾರೆ ನೋಡಿ ನಮ್ಮ ನೋವಿಗೆ ಸ್ಪಂದಿಸಿ. ಈ ಶುಕ್ರವಾರ ನಾವು ಸಲ್ಲಿಸಲಿರುವ 105 ಅಂಶಗಳ ಮಹಾ ಚಾರ್ಜ್‌ಶೀಟ್‌ನಲ್ಲಿ ಈ ಎಲ್ಲಾ ಅಧಿಕಾರಿಗಳ ಬಣ್ಣ ಬಯಲು ಮಾಡಲಿದ್ದೇವೆ.
ಶಂಕರ್ ಪವಾರ್ ಮತ್ತು ಶಾದಿಪುರ ಗ್ರಾಮದ 54 ರೈತ ಕುಟುಂಬಗಳು.
ವರದಿ ಚಂದ್ರಶೇಖರ ಆರ್. ಪಾಟೀಲ್




















