ಬೀದರ್: ತಾಲ್ಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2006ರ ಎಸ್‍ಎಸ್‍ಎಲ್‍ಸಿ ಬ್ಯಾಚ್‍ನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾಡವಾದ ಸಮೀಪದ ವಿಂಟೇಜ್ ರಿಟ್ರೀಟ್ ಸಭಾಂಗಣದಲ್ಲಿ ಬುಧವಾರ ನಡೆಯಿತು.
20 ವರ್ಷಗಳ ಬಳಿಕ ಹಳೆಯ ವಿದ್ಯಾರ್ಥಿಗಳು ಸಮ್ಮಿಲನಗೊಂಡರು. ಶಾಲಾ ದಿನಗಳು ಹಾಗೂ ಸ್ನೇಹದ ಮಧುರ ಕ್ಷಣಗಳನ್ನು ಪರಸ್ಪರ ಹಂಚಿಕೊಂಡರು.
ಆಟಗಳು, ಮನೋರಂಜನಾ ಚಟುವಟಿಕೆಗಳು ಹಾಗೂ ಫೋಟೊ ಸೆಷನ್ ಸಂಭ್ರಮ ಇಮ್ಮಡಿಗೊಳಿಸಿದವು.
ಸ್ನೇಹ ಅಮೂಲ್ಯ ಸಂಪತ್ತು. ಕಾಲ, ಪರಿಸ್ಥಿತಿಗಳು ಬದಲಾಗಬಹುದು. ಆದರೆ, ನಿಜವಾದ ಸ್ನೇಹ ಎಂದೂ ಬದಲಾಗುವುದಿಲ್ಲ. ಎರಡು ದಶಕಗಳ ನಂತರವೂ ಹಳೆಯ ವಿದ್ಯಾರ್ಥಿಗಳು ಗಾಢ ಗೆಳೆತನ, ಪರಸ್ಪರ ಪ್ರೀತಿ, ವಿಶ್ವಾಸ ಉಳಿಸಿಕೊಂಡಿರುವುದು ಇದಕ್ಕೆ ನಿದರ್ಶನ ಎಂದು ಹಳೆಯ ವಿದ್ಯಾರ್ಥಿ ಸಾಗರ್ ಪಡಸಲೆ ಹೇಳಿದರು.
ಯಶಸ್ಸು ಎಂದರೆ ವೈಯಕ್ತಿಕ ಸಾಧನೆಯಲ್ಲ. ನಮ್ಮೊಂದಿಗೆ ಬಂದ ಸ್ನೇಹಿತರೊಂದಿಗೆ ಸಂತೋಷ ಹಂಚಿಕೊಳ್ಳುವುದಾಗಿದೆ ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳಾದ ಮನ್ಮಥ್ ಮಡಿವಾಳ, ದೇವಿದಾಸ ಢೋಣೆ, ದಿಲೀಪ್ ರಾಜಕುಮಾರ ರಾಯಗೊಂಡೆ, ಪ್ರಕಾಶ್ ಮಾಳೆ, ಅನಿಲ್ ಜ್ಯಾಂತೆ, ಗಣೇಶ್, ಶಿವಕುಮಾರ ಕಪಲಾಪುರೆ, ಭಗವಾನ್, ರಾಜಕುಮಾರ ಜಮಗೆ, ಭಗವಂತ ಸಾಗೈ, ಸತೀಶ್, ಬಸಪ್ಪ ಬಸ್ತೆ, ನರಸಪ್ಪ ಹೊನ್ನಿಕೇರೆ, ನೋಹನ್ ಮುಗನೂರೆ, ಓಂಕಾರ, ಘುಡುಸಾಬ್, ಆನಂದ ಮಡಿವಾಳ, ವಿಜಯಕುಮಾರ, ತುಕಾರಾಮ, ಭಗವಂತ ರಾಯಗೊಂಡ, ಸೋಮನಾಥ ಸಾಗೈ, ದತ್ತಾತ್ರಿ, ಪೇತ್ರಪ್ಪ, ಮೀನಾಕ್ಷಿ ಉಪ್ಪೆ, ಸುಧಾರಾಣಿ ಔರಾದೆ, ನಾಗಮ್ಮ, ಜೈಶ್ರೀ ಖಂಡ್ರೆ, ಜೈಶ್ರೀ ಶಿವಶೆಟ್ಟೆ, ಸುಮಿತ್ರಾ, ರೇಣುಕಾ, ಲಕ್ಷ್ಮಿ, ಬಬಿತಾ, ಅಂಬಿಕಾ ಮತ್ತಿತರರು ಇದ್ದರು.
- ಕರುನಾಡ ಕಂದ ಪತ್ರಿಕೆ




















