ತಾಳಿಕೋಟೆ: ವಿಜಯಪುರ ಜಿಲ್ಲೆಯ ತಾಳಿಕೋಟೆ ನಗರದಲ್ಲಿ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದ (ರಿ.) ವತಿಯಿಂದ ಶ್ರೀ ಹುಲಿಗೆಮ್ಮದೇವಿ ಮತ್ತು ಶ್ರೀ ಗದ್ಯಮ್ಮದೇವಿ ಜಾತ್ರಾ ಮಹೋತ್ಸವವು ಮೇ 11 ಮತ್ತು 12 ರಂದು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.
ಮೇ 11: ಪದಗ್ರಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
ಮೇ 11, 2026ರ ಸೋಮವಾರ ಸಾಯಂಕಾಲ 6:00 ಗಂಟೆಗೆ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಮತ್ತು ಈ ಕಾರ್ಯಕ್ರಮದಲ್ಲಿ ನರಸಿಂಹ ನಾಯಕರ ರಾಜುಗೌಡ ಮಾಜಿ ಶಾಸಕರು ಸುರಪುರ ಇವರು ಕೂಡ ಭಾಗವಹಿಸಲಿದ್ದಾರೆ ಅನೇಕ ರಾಜಕೀಯ ಮುಖಂಡರು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕ ಅನ್ನಪ್ರಸಾದ ಸೇವೆ ಇರಲಿದ್ದು, ರಾತ್ರಿ 9:00 ಗಂಟೆಗೆ ರಸಮಂಜರಿ ಕಾರ್ಯಕ್ರಮ ಭಕ್ತರ ಮನರಂಜಿಸಲಿವೆ.
ಮೇ 12: ಭವ್ಯ ರಥೋತ್ಸವ ಮತ್ತು ಮೆರವಣಿಗೆ
ಮೇ 12, 2026ರ ಮಂಗಳವಾರ ಮುಂಜಾನೆ 11:00 ಗಂಟೆಯಿಂದ ಶ್ರೀ ದೇವಿಯ ಭವ್ಯ ಮೆರವಣಿಗೆ ಆರಂಭವಾಗಲಿದೆ.
ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಹೊರಡುವ ದೇವಿಯ ರಥೋತ್ಸವವು ವಾದ್ಯ ವೈಭವದೊಂದಿಗೆ ಕತ್ತಿಬಜಾರ, ರಾಜವಾಡ (ಪಂಜಸೈಯದ್ ದರ್ಗಾ) ಮಾರ್ಗವಾಗಿ ಸಾಗಿ ಭೋವಿ ಸಮಾಜದ ಶ್ರೀ ದೇವಿಯ ಗರ್ಭಗುಡಿಯನ್ನು ಪ್ರವೇಶಿಸಲಿದೆ.
ಸಮಾಜದ ಮುಖಂಡರ ಉಪಸ್ಥಿತಿ:
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷರಾದ ಶ್ರೀ ದ್ಯಾವಪ್ಪ ಎಚ್ . ಕೂಚಬಾಳ ಅಧ್ಯಕ್ಷರಾದ ಶ್ರೀ ಶ್ರೀನಿವಾಸ.ಡಿ ಕುಲಕರ್ಣಿ ವಹಿಸಲಿದ್ದಾರೆ. ಉಪಾಧ್ಯಕ್ಷರಾದ ಶ್ರೀ ಶ್ರೀಕಾಂತ ಚಿಂಚೋಳಿ, ಕಾರ್ಯದರ್ಶಿ ಶ್ರೀ ಪ್ರಕಾಶ ಡಿ. ಕೂಚಬಾಳ ಸಂಚಾಲಕರಾದ ಶ್ರೀ ಶಿವರಾಜ ಬಳಬಾಟ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಭೀಮಶಿ, ಕಾರಕೂನ ದೇವಪ್ಪ ಕಟ್ಟಿಮನಿ ಸೇರಿದಂತೆ ಸಮಾಜದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿರಲಿದ್ದಾರೆ.
ಭೋವಿ ವಡ್ಡರ ಸಮಾಜದ ಬಾಂಧವರು ಹಾಗೂ ಸರ್ವ ಭಕ್ತಾದಿಗಳು ಈ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















