ಗರಿಗೆದರಿ ನಗುತಿವೆ ಪಚ್ಚೆ ಗರಿಗಳು ನಡುವಿನಲ್ಲಿ
ಅಪ್ಪಿಕೊಂಡಿವೆ ಕೆಂಪು ದಾಸವಾಳಗಳು ಜೊತೆಯಲ್ಲಿ
ಮನ ಸೆಳೆದಿವೆ ಹಾಗಲ ಬೀಜಗಳು ರೇಖೆಗಳಲ್ಲಿ
ಸುಲಲಿತ ಕಾವ್ಯ ಚಿತ್ತಾರವಾಗಿದೆ ಸುಪ್ರಭಾತದಲ್ಲಿ
ಬರುತಿದೆ ನಿತ್ಯ ಸುಮನಗಳ ಅಂಗಳಕ್ಕಿಂದು
ಉಲಿಯುತಿದೆ ಆಸ್ವಾದಿಸುತ ಸಂಭ್ರಮಿಸಿರೆಂದು
ಪ್ರೇರೇಪಿಸುತಿದೆ ತಾವೂ ಕ್ರಿಯಾಶೀಲರಾಗಿರೆಂದು
ಅಭಿನಂದಿಸುತ ಹರಸಿರೆನ್ನುತಿದೆ ಖುಷಿಯಲಿ ಎಂದೆಂದೂ
- ಲಲಿತಾ ಕೆ ಆಚಾರ್, ಬೆಂಗಳೂರು




















