
ಗಂಗಾವತಿ: ತಾಲೂಕಿನ ಮರಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಉಪಾಧ್ಯಕ್ಷರ ಪದಗ್ರಹಣವನ್ನು ಮಂಗಳವಾರ ಸಂಘದ ಆವರಣದಲ್ಲಿ ಆಯೋಜಿಸಲಾಯಿತು.
ಅಧ್ಯಕ್ಷರಾಗಿ ಶ್ರೀ ದೊಡ್ಡ ಬಸನಗೌಡ, ಉಪಾಧ್ಯಕ್ಷರಾದ ಮಾರೇಪ್ಪ ಕುಂಟೋಜಿ, ಅಧ್ಯಕ್ಷತೆಯನ್ನು ವಹಿಸಿದ ಶ್ರೀದೊಡ್ಡ ಬಸನಗೌಡ, ಮಾತನಾಡಿ ಗ್ರಾಮದ ಗುರು ಹಿರಿಯರು , ಗ್ರಾಮದ ಸರ್ವ ಜನಾಂಗದವರು, ಸೌಹಾರ್ದತೆಯಿಂದ ಸಂಘದ ಅಧ್ಯಕ್ಷರಾಗಿ ಮಾಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕದ ಅಭಿನಂದನೆಳು ತಿಳಿಸಿ ಮಾತನಾಡಿ ಗ್ರಾಮಕ್ಕೆ ಒಂದು ಪಂಚಾಯಿತಿ, ಒಂದು ಸಹಕಾರ ಸಂಘ ಅತ್ಯಗತ್ಯ, ಜನರಿಗೆ ನೇರವಾಗಿ ಸರಳವಾಗಿ ಕುಂದು ಕೊರತೆಗಳನ್ನು ನಿಭಾಯಿಸಬಹುದು, ಎಲ್ಲರ ಸಹಕಾರದಿಂದ ಸಂಘಗಳ ಬೆಳವಣಿಗೆಯನ್ನು ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯವರು ತಾಲೂಕಿನ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಕಾರ್ಯದರ್ಶಿಗಳು, ಆರ್ ಡಿ ಸಿ ಸಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರು, ಸಂಘದ ಸಿಬ್ಬಂದಿ ವರ್ಗದವರು, ಯುವಕರು ಭಾಗಿಯಾಗಿದ್ದರು.
ವರದಿ ಯಮನೂರ ಎಂ. ಸಿಂಗನಾಳ




















