ಸಿರುಗುಪ್ಪ- ತಾಲೂಕು ಸಿರಿಗೇರಿ ಗ್ರಾಮದ ಸುನ್ನೀ ಜಾಮಿಯಾ ಮಸ್ಜಿದ್ ಕಮೀಟಿ ಮಜೀದ್ ಆವರಣದಲ್ಲಿ ಗ್ರಾಮೀಣ ಮಕ್ಕಳ ಇಸ್ಲಾಮಿಕ್ ಬೇಸಿಗೆ ಶಿಬಿರ 2026 ಶಮಾ ಪರಿವೀನ್ ಮೂಅಲ್ಲಿಮ್ ಎಸ್ ಚಾಂದ್ ಬಾಷಾ ಇವರು ಶಿಬಿರ ಸಂಯೋಜಕರಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುವುದಕ್ಕಾಗಿ ಸುನ್ನೀ ಜಾಮಿಯಾ ಮಜೀದ್ ಕಮಿಟಿಯಿಂದ ಹೃತ್ಪೂರ್ವಕ ಸವಿ ನೆನಪಿನ ಸ್ಮರಣಿಕೆ ಅಭಿನಂದನೆ ಸಲ್ಲಿಸಲಾಯಿತು. ಮೌಲಾನ ಆಸಿಫ್ ರಿಫಾಯಿ ಬೆನ್ನೂರ್ ಇಸ್ಮಾಯಿಲ್ ಸಾಬ್ ಇವರಿಗೂ ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷರು ಸೌಕಾರ್ ಜಮೀನ್ದಾರ್ ಸೈಯದ್ ಷಾ ಮೋಹಿಯುದ್ದೀನ್ ಖಾದ್ರಿ ಅವರು ಗೌರವಿಸಿ ಶುಭ ಹಾರೈಸಿದರು.
ಮಸೀದಿಯ ಅಧ್ಯಕ್ಷರು ಎಸ್. ಖಾದರ್ ಬಾಷಾ, ಮೊಹಮ್ಮದ್ ರಫಿ, ಮುರ್ಷಿದ್ ಸಾಹೇಬ್, ಅಲ್ಹಾಜ್ ಕೊಲ್ಮಿ ನಬಿ ಸಾಬ್, ಚಾಂದ್ ಬಾಷಾ, ಟೀಚರ್ ಶಕ್ಷಾವಲಿ, ರಫೀಕ್, ಸಮುದಾಯದ ಮುಖಂಡರ ಸಮ್ಮುಖದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೆನಪಿನ ಕಾಣಿಕೆ ಸಮಾರೋಪ ಸಮಾರಂಭದಲ್ಲಿ ವಿತರಿಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















