ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಸ್ತೆಗಾಗಿ ಪರದಾಡುತ್ತಿರುವ ರೈತರು

ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ವಿವಿಧ ಗ್ರಾಮದ ರೈತರು ನಿನ್ನೆ ಕಾಳಗಿ ತಹಶೀಲ್ದಾರ್ ಕಚೇರಿಯ ಎದುರುಗಡೆ ಪ್ರತಿಭಟನೆ ಮಾಡಿದರು.
ಈ ಪ್ರತಿಭಟನೆಯಲ್ಲಿ ಮಾನ್ಯ ತಹಸಿಲ್ದಾರರು ಕಾಳಗಿ ಇವರ ಮೂಲಕ ಸರ್ಕಾರಕ್ಕೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟರು.
ಈಗಾಗಲೇ ಅರ್ಧ ಭಾಗ ಬೇಸಿಗೆ ಗತಿಸಿ ಹೋಗಿದೆ ಬೆಣ್ಣೆ ತೊರೆ ಯೋಜನೆ ಎಡದಂಡೆ ಕಾಲುವೆಗೆ ಮತ್ತು ಅಲ್ಲಾಪುರ್ ಮುಲ್ಲಾಮಾರಿ ತಹಸಿಲ್ದಾರರು ಮತ್ತು ತಾಲೂಕು ನೀರಾವರಿ ನಿಗಮದ ಅಧಿಕಾರಿಗಳಿಗೆ ಎಷ್ಟೇ ಕೇಳಿಕೊಂಡರೂ ನೀರು ಹರಿಸುತ್ತಿಲ್ಲ. ಜನಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುತ್ತಿವೆ, ಸಾವಿರಾರು ಎಕರೆ ಜಮೀನುಗಳಿಗೆ ರೈತರು ಸಾವಿರಾರು ಎಕರೆ ಜಮೀನುಗಳಿಗೆ ರೈತರು ಹೋಗಲು ರಸ್ತೆಗಳು ಕಂದಾಯ ಇಲಾಖೆ ದಸ್ತಾವೀನಲ್ಲಿ ದಾಖಲಿ ದಾಖಲೆಗಳಿದ್ದರೂ ರಸ್ತೆ ಸುಧಾರಣೆ ಮಾಡುವವರು ಇಲ್ಲ ರೈತರು ತಮ್ಮ ಜಮೀನುಗಳು ಸರ್ವೇ ನಕಾಶೆ ಕ್ರಯ ವಿಭಾಗ ತತ್ಕಾಲ್ಕುಡಿ ಲವಣಿ ನಕ್ಷೆಗಾಗಿ ಅರ್ಜಿ ಸಲ್ಲಿಸಿದ್ದು ಎಷ್ಟೇ ಅಲೆದಾಡಿದರು ಕೆಲಸಗಳು ಆಗುತ್ತಿಲ್ಲ. ಬರೀ ಕುಂಟು ನೆಪ ಹೇಳುತ್ತಾರೆ ಅಂದರೆ ಪಹಣಿ ಆಕಾರ ಬಂತು ಇಲ್ಲ ಜಿಆ‌ರ್ ಬಂದಿರುತ್ತದೆ ಹೀಗೆ ನೂರಾರು ಕುಂಟು ನೆಪ ಹೇಳಿದ್ದಾರೆ. ನಾವು ಎಲ್ಲಾ ಕಾಳಗಿ ತಾಲೂಕಿನ ಕಾಳಗಿ, ರಟಕಲ್, ರಾಯ್ ಕೋಡ್, ಕೋಲ್ಡ್, ಚಿಂಚೋಳಿ, ಹೆಬ್ಬಾಳ್, ಹಲ್ವೇರ, ಹೊಳಗೇರಾ, ಹೇಗೆ ಹಲವಾರು, ಗ್ರಾಮದ ಮತ್ತು ಒಳಗಿನ ಗ್ರಾಮದ ಹೆಬ್ಬಾಳ ಗ್ರಾಮದ ಕೋಡ್ಲಿ ಗ್ರಾಮದ ರುದನೂ‌ರ್ ಎಲ್ಲಾ ತಾಲೂಕಿನ ಸುತ್ತಮುತ್ತ ಇರುವ ಎಲ್ಲಾ ಜನರು ತಮ್ಮಲ್ಲಿ ಇದೆಲ್ಲ ಸರಕಾರಿ ಅಧಿಕಾರಿಗಳ ಮತ್ತು ತಾಲೂಕು ಆಡಳಿತದ ನಿರ್ಲಕ್ಷದಿಂದ ರೈತರಿಗೆ ಬೀಳುತ್ತಿರುವ ಪೆಟ್ಟು, ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಹಾಗೂ ಬೆಣ್ಣೆತರ ಯೋಜನಾಧಿಕಾರಿಗಳಿಗೆ ಆದೇಶಿಸಿ ನೀರು ಹರಿಸಲು ಆದೇಶ ನೀಡಬೇಕು ಮತ್ತು ತಯಾರಿಸಲು ಭೂ ಮಾಪಕರು, ತಾಲೂಕು ಭೂಮಾಪಕರು ಚಿತ್ತಾಪುರ ಅವರಿಗೆ ಆದೇಶಿಸಬೇಕು. ಸಂಬಂಧ ಪಟ್ಟ ಅರ್ಜಿಗಳ ವಿಲೇವಾರಿಗೊಳಿಸಿ ತಕ್ಷಣ ರೈತರಿಗೆ ಅನುವು ಮಾಡಿಕೊಡಬೇಕು. ಹೀಗಾಗಿ ನಾವು ಎಲ್ಲಾ ರೈತರು ಇಂದು ಕಾಳಗಿ ತಾಲೂಕಿನ ತಹಶೀಲ್ದಾರ್ ಕಚೇರಿಯ ಮುಂದೆ ಹಲವಾರು ರೈತರು ಸೇರಿ, ಮಾನ್ಯ ತಸೀಲ್ದಾರರು ಕಾಳಗಿ ರವರಿಗೆ ಮನವಿ ಸಲ್ಲಿಸಿ ಇವರ ಮುಖಾಂತರ ತಮಗೆ ಮನೆ ಮನವಿ ಸಲ್ಲಿಸುತ್ತೇವೆ. ತಾವುಗಳು ನಮ್ಮ ಈ ಮನವಿಯನ್ನು ಗಣನೆಗೆ ತೆಗೆದುಕೊಂಡು ಅತಿ ಜರೂರು ಎಂದು ಭಾವಿಸಿ ನಮಗೆ ನಮ್ಮ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸಿ ನಮ್ಮ ರೈತರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಜನ ಜಾನುವಾರುಗಳಿಗೆ ಬದುಕಲು ಅನುವು ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಮ್ರತಾ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಶ್ರೀ ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ರೈತ ಸಂಘ ಕೋರಿದರು.
ಈ ಸಂದರ್ಭದಲ್ಲಿ ಮಶಾಕ್ ಪಟೇಲ್ ರೈತ,ಸುಭಾಷ್ ಹುಳಗೇರಾ ರೈತ, ,ಕಪಿಲ್ ದೊಡ್ಮನಿ, ರಮೇಶ್ ಹೆಬ್ಬಾಳ್, ರವಿ ಸಿಗಿ, ಸೇರಿದಂತೆ ಕಾಳಗಿ ತಾಲೂಕಿನ ವಿವಿಧ ಗ್ರಾಮದ ರೈತ ಮುಖಂಡರು ಹಾಗೂ ಇತರರು ಭಾಗವಹಿಸಿದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!