ಕಂಪ್ಲಿ: ತಾಲೂಕಿನ ನಂ 10 ಮುದ್ದಾಪುರ ಗ್ರಾಮದ ಮೂಲಕ ಕೆ.ಎಸ್ ಆರ್ ಟಿಸಿ ಬಸ್ಸು ಹಾದು ಹೋಗಬೇಕು ಮತ್ತು ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಕಿ ರಸ್ತೆ ಸಂಪೂರ್ಣ ಹಾಳಗಿದೆ ಅದನ್ನು ಡಾಂಬರಿಕರಣ ಗೊಳಿಸಬೇಕೆಂದು ಒತ್ತಾಯಿಸಿ ವಿಜಯ ಕರುನಾಡು ರಕ್ಷಣಾ ವೇದಿಕೆಯಿಂದ ತಹಶೀಲ್ದಾರ ಜೂಗಲ್ ಮಂಜುನಾಥ ರವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ವಿಜಯ ಕರುನಾಡು ರಕ್ಷಣಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಮಾತನಾಡಿ ಕುರುಗೋಡು ಡಿಪೋದ ಬಸ್ಸುಗಳು ನಂ 10 ಮುದ್ದಾಪುರ ಹೂರ ವಲಯದ ಮೂಲಕ ಸಂಚರಿಸುತ್ತವೆ ಇದರಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಮತ್ತು ಹಿರಿಯ ನಾಗರಿಕರಿಗೆ ಸಾರ್ವಜನಿಕರಿಗೆ ದೂರದ ಊರುಗಳಿಗೆ ತೆರೆಳಲು ಬಹಳ ತೊಂದರೆಯಾಗುತ್ತದೆ ಅದಷ್ಟು ಬೇಗನೆ ಮುದ್ದಾಪುರ ಮೂಲಕ ಬಸ್ಸುಗಳು ಓಡಾಡುವ ವ್ಯವಸ್ಥೆ ಮಾಡಬೇಕು ಹಾಗೂ 4 ಸ್ಥಳಗಳಲ್ಲಿ ವೇಗ ತಡೆ ಮತ್ತು ಸೂಚನಾ ಫಲಕ ಅಳವಡಿಸಿ ನಂ 10 ಮುದ್ದಾಪುರದಿಂದ ಶಿವಮೂರ್ತಿ ಕ್ರಾಸ್ವರೆಗೆ ರಸ್ತೆ ಸಂಪೂರ್ಣ ಹಾಳಾಗಿದೆ ಶೀಘ್ರದಲ್ಲಿ ರಸ್ತೆಯನ್ನು ಡಾಂಬರೀಕರಣಗೊಳಿಸಬೇಕು ರಸ್ತೆ ಮೇಲೆ ಓಡಾಡುವ ಅವಕಾಶ ಮಾಡಿ ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಎಸ್. ಗೋಪಾಲ, ತಾಲೂಕು ಅಧ್ಯಕ್ಷ ಶಿವಕುಮಾರ, ನಗರ ಘಟಕ ಅಧ್ಯಕ್ಷ ಕೆ.ಶಬ್ಬಿರ್ ಉಪಾಧ್ಯಕ್ಷ ವೈ. ಯಲ್ಲಪ್ಪ, ಪದಾಧಿಕಾರಿಗಳಾದ ಬಿ. ದೊಡ್ಡಬಸಪ್ಪ, ಅನಿಕುಮಾರ, ಎ.ಮಂಜುನಾಥ, ನಾಗರಾಜ, ಪ್ರವೀಣಾ, ಈರಮ್ಮ ಕೆ, ರೇಣುಕಮ್ಮ, ಯಲ್ಲಮ್ಮ ಕವಿತಮ್ಮ ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















