ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
ಸಂಗೀತ ಕೇಳುವುದು ಹಾಗೂ ಹಾಡುಗಳನ್ನು ಆಲಿಸುವುದು ನಮ್ಮ ತಂದೆಯವರ ಪ್ರಿಯ ಹವ್ಯಾಸವಾಗಿತ್ತು– 1955-60 ರಲ್ಲಿ ಅವರು ಮುಧೋಳದಲ್ಲಿ ( ಜಿಲ್ಲೆ ಬಾಗಲಕೋಟೆ ) ಕೆಲಸ ಮಾಡುತ್ತಿರುವಾಗ ರೇಡಿಯೋ ಸೆಟ್ ಗಳು ಕೇವಲ ಶ್ರೀಮಂತರ ಹತ್ತಿರ ಮಾತ್ರ ಇರುತ್ತಿದ್ದವು. ಹೈಸ್ಕೂಲ್ ನಲ್ಲಿ ಟೀಚರ್ ಕೆಲಸ ಮಾಡುತ್ತಿದ್ದ ಶ್ರೀ ಪಾಟೀಲ್ ಎನ್ನುವವರು ನಮ್ಮ ತಂದೆಯ ಮನೆಯ ಎದುರುಗಡೆ ವಾಸಿಸುತ್ತಿದ್ದರು. ಪಾಟೀಲರ ಹೆಂಡತಿ ಸರಕಾರಿ ಉದ್ಯೋಗಿಯಾಗಿದ್ದು ಅವರು ತಕ್ಕಮಟ್ಟಿಗೆ ಅನುಕೂಲಸ್ಥರಾಗಿ ಇದ್ದರು ಮತ್ತು ಅವರ ಮನೆಯಲ್ಲಿ ಒಂದು ರೇಡಿಯೋ ಸೆಟ್ ಇತ್ತು.
ನಮ್ಮ ತಂದೆಯವರು ಈ ವಿಷಯದಲ್ಲಿ ಸುಮ್ಮನೆ ಕೂಡಲಿಲ್ಲ. ಅವರು ಒಂದು ಅಸೆಂಬೆಲ್ಡ್ ಸೆಟ್ಟನ್ನು ( ದೆಹಲಿಯಲ್ಲಿ ತಯಾರಾದದ್ದು) ನೂರು ರೂಪಾಯಿ ಗೆ ಖರೀದಿಸಿದರು( ಹಣವನ್ನು ಕಂತಿನಲ್ಲಿ ಕೊಡಲಾಯಿತು). ಅವರು ಅದಕ್ಕೆ ಒಂದು ಬ್ಯಾಟರಿಯನ್ನು ಬಾಗಲಕೋಟೆಯಿಂದ 56 ರೂಪಾಯಿಗೆ ಖರೀದಿಸಿ ತಂದರು ಹಾಗೂ ಅದರ ಪ್ರಾರಂಭೋತ್ಸವ ವನ್ನು ಮನೆಯಲ್ಲಿ ಮಾಡಿದರು. ಪೋಸ್ಟ್ ಆಫೀಸಿನ ಎಲ್ಲಾ ಸಿಬ್ಬಂದಿ ಪ್ರಾರಂಭೋತ್ಸವಕ್ಕೆ ಬಂದಿದ್ದರು ಹಾಗೂ ಅವರಿಗೆ ಚಹಾವನ್ನು ಕೊಡಲಾಯಿತು. ಧಾರವಾಡ ಹಾಗೂ ಪುಣೆ ಬಾನುಲಿ ಕೇಂದ್ರಗಳು ಅದರಲ್ಲಿ ಬಿತ್ತರಗೊಳ್ಳುತ್ತಿದ್ದವು . ಶ್ರೀ ಪಾಟೀಲ್, ಶಿಕ್ಷಕರು, ಆ ದಿನ ನಮ್ಮ ಮನೆಗೆ ಬಂದು, ಒಂದು ಮಧುರವಾದ ಧ್ವನಿ ಹೊರಡುವ ರೇಡಿಯೋ ಸೆಟ್ ಕೊಂಡದ್ದಕ್ಕಾಗಿ ನಮ್ಮ ತಂದೆಯವರನ್ನು ಅಭಿನಂದಿಸಿದರು.
ಒಂದು ವರ್ಷದ ನಂತರ ಅವರು ಆ ರೇಡಿಯೋ ಸೆಟ್ಟನ್ನು ಮಾರಿ, ಫಿಲಿಪ್ಸ್ ಕಂಪನಿಯ ರೇಡಿಯೋ ಒಂದನ್ನು ರೂಪಾಯಿ ಎರಡು ನೂರು ಕೊಟ್ಟು ಖರೀದಿಸಿದರು( 12 ಕಂತುಗಳ ಕರಾರಿನ ಮೇರೆಗೆ) ಅವರ ನಿವೃತ್ತಿಯ ನಂತರವೂ ಆ ರೇಡಿಯೋ ಸೆಟ್ ( 12 ಇಂಚು,9 ಇಂಚು,9 ಇಂಚು) (ಉದ್ದ, ಅಗಲ, ಎತ್ತರ) ನಮ್ಮ ಮನೆಯಲ್ಲಿ ಇತ್ತು ಹಾಗೂ ಅವರ ಪ್ರೀತಿಯ ಬಾನುಲಿ ಕೇಂದ್ರವಾದ ಸಾಂಗ್ಲಿ ಸ್ಟೇಷನ್ ನ್ನು ಸರಿಯಾಗಿ ಬೆಳಗಿನ ಆರು ಗಂಟೆಗೆ ಹಚ್ಚುತ್ತಿದ್ದರು. ಮನೆಯ ಎಲ್ಲಾ ಸದಸ್ಯರಿಗೂ ಮರಾಠಿಯ ಗೀತೆಗಳನ್ನು ( ಭಕ್ತಿ ಸಂಗೀತ) ಕೇಳುವುದು ಅಭ್ಯಾಸವಾಗಿತ್ತು. ಅವರ ಸಂಗೀತದ ಪ್ರೀತಿ ಹಾಗೂ ಆಸ್ಥೆ ಅವರು ಎಲ್ಲ ಮಕ್ಕಳಿಗೂ ಕೊಟ್ಟ ಕಣ್ಣಿಗೆ ಕಾಣದ ಆಸ್ತಿಯಾಗಿದೆ.
Asset 6
ನಮ್ಮ ಅಜ್ಜಿ ಅಂದರೆ ತಂದೆಯ ತಾಯಿ ಅವರು ದಾಸಕೂಟದವರು ತಂದೆ ತಾಯಿಗಳ ಪ್ರೋತ್ಸಾಹ ಪೂರಕವಾಗಿತ್ತು.
ಅಜ್ಜಿ ಸುಮಾರು 3000 ಹಾಡು ಹಾಗೂ ಇಡೀ ಹರಿಕಥಾಮೃತಸಾರ ಕಂಠಸ್ಥ ಹೇಳುತ್ತಿದ್ದರು. ಮನೆಯಲ್ಲಿ ನಿತ್ಯ ಭಜನೆ ನಡೆಯುತ್ತಿತ್ತು… ಹೀಗೆ ಹತ್ತು ಹಲವು ಕಾರಣಗಳು ಸರ್.
- Mr. Sheshgiridas. Raichur
ಸುಸಂಸ್ಕೃತ ಮನೆಯ ಹಿಂದಿನ ತಂದೆ ತಾಯಿಗಳೆಲ್ಲ(ಆಸ್ತಿವಂತ ಶ್ರೀಮಂತರನ್ನು ಹೊರತುಪಡಿಸಿ) ಮಕ್ಕಳಿಗೆ ಶಾಶ್ವತವಾಗಿ ಕೊಡುವ ಬಿಟ್ಟುಹೋಗುವ ಆಸ್ತಿ ಇವುಗಳೇ.
- Smt. Ratnamurthy
ಈ ಆಸ್ತಿಯ ಮೂಲಕ ಅವರು ಸಾಧಿಸುವ ಛಲವನ್ನು ತೋರಿಸಿ ಕೊಟ್ಟಿದ್ದಾರೆ. ಹಾಗೂ ಸಂಗೀತದ ಅಭಿಮಾನ ಮೆರೆದಿದ್ದಾರೆ. ಅಂದು ಕೆಲವೊಂದು ವಸ್ತುಗಳು ಕೇವಲ ಶ್ರೀಮಂತರಿಗೆ ಮಾತ್ರ ಕೈಗೆಟುಕುವ ಕಾಲದಲ್ಲಿ ಅವರು ಮನಸ್ಸು ಮಾಡಿ ತಾನೂ ಏಕೆ ಅದನ್ನು ಪಡೆಯಬಾರದು ಎಂಬ ಛಲದಿಂದ ರೇಡಿಯೋ ಖರೀದಿಸಿ ತಂದು ಆ ಸಮಯವನ್ನು ಸದುಪಯೋಗ ಪಡಿಸಿಕೊಂಡು ನೆಮ್ಮದಿಯ ಜೀವನ ನಡೆಸಿದ್ದಾರೆ. ಮನಸ್ಸು ಮಾಡಿದರೆ ಖಂಡಿತಾ ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಬದುಕಬಹುದು ಎಂದು ಸಾಬೀತು ಮಾಡಿದ್ದಾರೆ..
ಇಂತಹ ಉತ್ತಮ ವಿಚಾರಗಳು ಎಲ್ಲರಿಗೂ ಮಾರ್ಗದರ್ಶನ ನೀಡುವಂತಾಗಲಿ ಎಂದು ಆಶಿಸುತ್ತೇನೆ…
- Mr. Mahendra Kurdi
Asset 6 ಓದಿ ಖುಷಿಯಾಯಿತು.
ಏಳು ನೂರು ಸಂಗೀತ ಪ್ರಿಯರಿಗೆ ಈ ಸಂದೇಶ ನಿಮ್ಮ ಹೆಸರಿನೊಂದಿಗೆ ರವಾನಿಸಿದ್ದೇನೆ.
- Sharad Deshpande, Hubballi
- ಪ್ರಮೋದ್ ಕುಲಕರ್ಣಿ




















