ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚಿಂಚೋಳಿ: ಮೇ 25 ರಂದು ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ ಮತ್ತು ಮಹಾತ್ಮ ಬಸವೇಶ್ವರ ಜಯಂತಿ

ಚಿಂಚೋಳಿ : ಪಟ್ಟಣದ ಹೊರ ವಲಯದಲ್ಲಿರುವ ಬೊಮ್ಮನಹಳ್ಳಿಯ ಶ್ರೀ ಮೌನೇಶ್ವರ ಮಂದಿರದಲ್ಲಿ ಶನಿವಾರದಂದು ನಿಡಗುಂದ ಕಂಚಾಳಕುಂಠಿ ನಂದೀಶ್ವರ ಮಠದ ಷ. ಬ್ರ. ಶ್ರೀ ಕರುಣೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ರೇಣುಕಾಚಾರ್ಯ ಯುಗಮಾನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಸಂಗಯ್ಯ ಸ್ವಾಮಿ ಅಣವಾರ ಮಾತನಾಡಿ ಕರಪತ್ರ ಬಿಡುಗಡೆಗೊಳಿಸಿದರು.
ಈ ವೇಳೆ ನಿಡಗುಂದಾ ಕಂಚಾಳಕುಂಠಿ ನಂದೀಶ್ವರ ಮಠದ ಷ.ಬ್ರ. ಶ್ರೀ ಕರುಣೇಶ್ವರ ಶಿವಾಚಾರ್ಯ, ವೀರಣ್ಣ ಗಂಗಾಣಿ, ವಿರೇಶ ಯಂಪಳ್ಳಿ, ಶಿವಕುಮಾರ ಸ್ವಾಮಿ, ರೇವಣಸಿದ್ದ ಮೋಘಾ, ಸಿದ್ದಯ್ಯ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಉಡಪಿ, ಗುಂಡಯ್ಯ ಸ್ವಾಮಿ, ವೀರಶೆಟ್ಟಿ ಪಾಟೀಲ್, ಕಾಶಿನಾಥ ಸ್ವಾಮಿ, ಬಸಯ್ಯ ಸ್ವಾಮಿ, ಸಂಕೇತ ಬಬಲಾದಿ, ಸಂತೋಷ ಕಡಗದ ಇತರರು ಇದ್ದರು.

ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಅರ್ಥ ಪೂರ್ಣ ಆಚರಣೆಗೆ ನಿರ್ಧಾರ.

ಚಿಂಚೋಳಿ: ಅವಳಿ ಪಟ್ಟಣದಲ್ಲಿರುವ ಶ್ರೀ ರೇವಣಸಿದ್ದೇಶ್ವರ ( ಪಾದಗಟ್ಟಿ) ದೇವಾಲಯದಲ್ಲಿ ಇದೆ 25 ರಂದು ಬೆಳಗ್ಗೆ 10 ಕ್ಕೆ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ಪಂಚಾಚಾರ್ಯರ ಯುಗಮಾನೋತ್ಸ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಆಚರಿಸಲಾಗುತ್ತಿದೆ ಎಂದು ರೇಣುಕಾಚಾರ್ಯ ಯುಗಮಾನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಸಂಗಯ್ಯ ಸ್ವಾಮಿ ಅಣುವರ
ಪಟ್ಟಣದ ಹೊರ ವಲಯದಲ್ಲಿರುವ ಬೊಮ್ಮನಹಳ್ಳಿಯ ಶ್ರೀ ಮೌನೇಶ್ವರ ಮಂದಿರದಲ್ಲಿ ಶನಿವಾರದಂದು ನಿಡಗುಂದಾ ಕಂಚಾಳಕುಂಠಿ ನಂದೀಶ್ವರ ಮಠದ ಷ. ಬ್ರ ಶ್ರೀ ಕರುಣೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ಶ್ರೀ ರೇವಣಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಇತರೆ ಕಾರ್ಯಕ್ರಮ ನೆರವೇರಲಿವೆ.
ನಂತರ ಧಾರ್ಮಿಕ ಸಭೆಯಲ್ಲಿ ಉಜ್ಜಯಿನಿ ಮಹಾಪೀಠದ ಪೂಜ್ಯ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ, ಶ್ರೀಶೈಲ ಮಹಾಪೀಠದ ಜಗದ್ಗುರು ಪೂಜ್ಯ ಶ್ರೀ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು.
ಷ.ಬ್ರ ಶ್ರೀ ಕೆಂಚವೃಷಬೇಂದ್ರ ಶಿವಾಚಾರ್ಯ, ಷ.ಬ್ರ ತಪೋರತ್ವ ದ್ವಿತೀಯ ಸಾಂಬ ಶಿವಾಚಾರ್ಯ, ಷ.ಬ್ರ ಕರುಣೇಶ್ವರ ಶಿವಾಚಾರ್ಯ, ಷ.ಬ್ರ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು, ನಾಡಿನ ಹರಗುರು ಚರಮೂರ್ತಿಗಳು ಸಮ್ಮುಖ ವಹಿಸುವರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಅರಣ್ಯ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸುವರು.
ಶಾಸಕ ಡಾ. ಅವಿನಾಶ ಜಾಧವ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಬೀದರ ಸಂಸದ ಸಾಗರ ಖಂಡ್ರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ಅನೀಲ ಜಮಾದಾರ, ಕೈಲಾಸನಾಥ ಪಾಟೀಲ್, ಎಮ್. ವೀರಯ್ಯ ಸ್ವಾಮಿ, ಭಗವಂತ ಖೂಬಾ, ಡಾ. ಉಮೇಶ ಜಾಧವ್, ರಾಜಕುಮಾರ ಪಾಟೀಲ್ ತೇಲ್ಕೂರ, ಸುಭಾಷ ರಾಠೋಡ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿಡಗುಂದಾ ಕಂಚಾಳಕುಂಠಿ ನಂದೀಶ್ವರ ಮಠದ ಷ.ಬ್ರ ಶ್ರೀ ಕರುಣೇಶ್ವರ ಶಿವಾಚಾರ್ಯ, ಗೌರವ ಅಧ್ಯಕ್ಷರಾದ ವೀರಣ್ಣ ಗಂಗಾಣ್ಣಿ, ವಿರೇಶ ಯಂಪಳ್ಳಿ, ಶಿವಕುಮಾರ ಸ್ವಾಮಿ, ರೇವಣಸಿದ್ದ ಮೋಘಾ, ಸಿದ್ದಯ್ಯ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಉಡಪಿ, ಗುಂಡಯ್ಯ ಸ್ವಾಮಿ, ವೀರಶೇಟ್ಟಿ ಪಾಟೀಲ್, ಕಾಶಿನಾಥ ಸ್ವಾಮಿ, ಬಸಯ್ಯ ಸ್ವಾಮಿ, ಸಂಕೇತ ಬಬಲಾದಿ, ಸಂತೋಷ ಕಡಗದ, ರಾಜಶೇಖರ್ ಸಾಲಿ, ಮಹಾಂತಯ್ಯ ಮಠಪತಿ, ಲೋಕೇಶ ಶೆಳ್ಳಗಿ, ನಾಗರಾಜ ಮಲಕೂಡ ಸೇರಿದಂತೆ ಇತರರು ಇದ್ದರು.

ಕಾಯಕ ರತ್ನ ಪ್ರಶಸ್ತಿ ಪ್ರಧಾನ :

2026 ನೇ ಸಾಲಿನ ಕಾಯಕ ರತ್ನ ಪ್ರಶಸ್ತಿಯನ್ನು ಶರಣಪ್ಪ ಯಲಾಲ ಬೆನಕೆಪಳ್ಳಿ, ಗುರುಪಾದ ಸ್ವಾಮಿ ಕನಕಪುರ, ವೆಂಕಟರಾಮರೆಡ್ಡಿ ಪಾಟೀಲ್ ಕಲ್ಲೂರ ರೋಡ, ಡಾ. ಶಿವರಾಜ ಸಜ್ಜನಶೇಟ್ಟಿ ಐನೋಳ್ಳಿ, ಡಾ. ಬಸವೇಶ ಪಾಟೀಲ್ ಚಿಂಚೋಳಿ. ರಾಜಶೇಖರ ನಿಪ್ಪಾಣಿ, ರಾಜೇಂದ್ರ ಎಸ್ ಪಾಟೀಲ್ ಚಂದಾಪುರ, ರಾಮನಗೌಡ ಪಾಟೀಲ್ ಯತ್ನಾಳ ಇವರನ್ನು ಹರಗುರು ಚರಮೂರ್ತಿಗಳು ಸತ್ಕರಿಸಲಿದ್ದಾರೆ.

ಪುರೋಹಿತ, ಸಂಗೀತ, ಆಚಾರ್ಯ ಸೇವಾ ರತ್ನ ಪ್ರಶಸ್ತಿ ಪ್ರಧಾನ :
ಶಿವಬಸಯ್ಯ ಸ್ವಾಮಿ ಅವರಿಗೆ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ಪಂಚಾಚಾರ್ಯರ ಯುಗಮಾನೋತ್ಸ ಹಾಗೂ ಮಹಾತ್ಮ ಬಸವೇಶ್ವರ ಜಯಂತಿ ಸಮಿತಿ ಪ್ರಶಸ್ತಿ ಪ್ರಧಾನ ಮಾಡಲಿದೆ.
ಜಂಗಮ ವಟುಗಳ ಅಯ್ಯಾಚಾರ ಹಾಗೂ ಭಕ್ತರಿಗೆ ಲಿಂಗದೀಕ್ಷೆ ನಾಡಿನ ಹರಗುರು ಚರಮೂರ್ತಿಗಳಿಂದ ಜರುಗಲಿದೆ.

ವರದಿ ಎಸ್. ವಿ. ಗಂಗಾಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!