ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂತೆಯೊಳಗಿದ್ದ ವೇಮನನ್ನು ಸಂತನನ್ನಾಗಿ ರೂಪಿಸಿದ ಹೇಮರಡ್ಡಿ ಮಲ್ಲಮ್ಮ

ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು ಸ್ತ್ರೀ ಕುಲದ ರತ್ನ ಗುರುಮಹಾಂತ ಶ್ರೀಗಳು

ತಿಮ್ಮಾಪುರ: ಸಂಸಾರದಲ್ಲಿದ್ದುಕೊoಡೆ ಕುಟುಂಬದ ಸದಸ್ಯರ ಕಿರುಕುಳ ಸಹಿಸಿ ಅವರ ಅವಗುಣಗಳನ್ನು ಪ್ರೀತಿ,ಸಹನೆಯಿಂದ ತಿದ್ದಿ,ತೀಡಿ ಅವರನ್ನು ಸರಿದಾರಿಗೆ ತರಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ ಏಕೈಕ ಮಹಿಳೆ,ಸ್ತ್ರೀ ಕುಲ ರತ್ನ, ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಎಂದು ಚಿತ್ತರಗಿ ಹಾಗೂ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಹೇಳಿದರು.
ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದಲ್ಲಿ ದಿನಾoಕ 18 ರಂದು ಸೋಮವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯ ನಿಮಿತ್ಯ ಗ್ರಾಮದ ರೆಡ್ಡಿ ಸಮುದಾಯ ಹಾಗೂ ಚಿತ್ತರಗಿ ಗ್ರಾಮಸ್ಥರು ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮಳ ಹಾಗೂ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿಗಳಾದ ಗುರು ಮಹಾಂತ ಶ್ರೀಗಳಿಗೆ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದಿದ್ದಕ್ಕಾಗಿ ಗ್ರಾಮಸ್ಥರ ಪೌರ ಸನ್ಮಾನ ಸ್ವೀಕರಿಸಿ ಆಶೀರ್ವಚನದಲ್ಲಿ ಮಾತನಾಡಿ, ನಾವೆಲ್ಲ ಹೇಮರಡ್ಡಿ ಮಲ್ಲಮ್ಮನವರ ಮೇಲೆ ಶ್ರದ್ದೆ ಮತ್ತು ಭಕ್ತಿಯನ್ನು ಇಟ್ಟುಕೊಂಡು ನಮ್ಮ ಕುಟುಂಬದ ಮಕ್ಕಳಿಗೆ ಅವರ ಆದರ್ಶಮಯ ಜೀವನದ ಕುರಿತು ತಿಳಿಸುವುದರ ಜೊತೆಗೆ ಒಳ್ಳೆಯ ಸಂಸ್ಕಾರ ಸಂಸ್ಕೃತಿ ಬೆಳಸಬೇಕು.ಭಾರತೀಯ ಆಧ್ಯಾತ್ಮಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಸಮಾಜಕ್ಕೆ ಆದರ್ಶಪ್ರಾಯರಾಗಿರುವ ಹಲವಾರು ಶಿವಶರಣೆಯರಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಸಹ ಒಬ್ಬಳು. ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತೆಯಾಗಿ, ತಾಳ್ಮೆ, ಸಹನೆಯ ಗುಣಗಳಿಂದ ಇಡೀ ಮಹಿಳಾ ಕುಲಕ್ಕೆ ಆದರ್ಶಪ್ರಾಯಳಾಗಿರುವ ಮಲ್ಲಮ್ಮ ದೇವತಾ ಸ್ವರೂಪಿಯಾಗಿದ್ದಾಳೆ ಎಂದರು. ಮನಗೂಳಿಯ ವಿರಚಾನಂದ, ಮಹಾಸ್ವಾಮಿಗಳು ಮಾತನಾಡಿ ವ್ಯಸನಿಯಾದ ವೇಮನನನ್ನು ಸಂತನನ್ನಾಗಿ ರೂಪಿಸಿದ ಕೀರ್ತಿ ಮಲ್ಲಮ್ಮನಿಗೆ ಸಲ್ಲುತ್ತದೆ. ಮಲ್ಲಮ್ಮನ ಆಶೀರ್ವಾದದಿಂದ ಸಂತೆಯೊಳಗೆ ಇದ್ದು ಸಂತನನ್ನಾಗಿ ರೂಪಗೊಂಡು ಸಮಾಜದ ಪರಿವರ್ತನೆ ಸಲುವಾಗಿ ಸಾವಿರಾರು ವಚನಗಳನ್ನು ಬರೆದು ಆಧ್ಯಾತ್ಮಿಕ ಇತಿಹಾಸದಲ್ಲಿ ಅಮರತ್ವ ಪಡೆದಿದ್ದಾರೆ. ಎಂದು ತಿಳಿಸಿದರು ಶಿರೂರ ಮಹಾಂತ ತೀರ್ಥದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ ವೇಮನರು ಬರೆದ ವಚನಗಳು ಮಾನವ ಕುಲಕ್ಕೆ ದಾರಿದೀಪಗಳಾಗಿವೆ ಎಂದರಲ್ಲದೆ.
ವೇಮನ ಪದ್ಯಗಳಲ್ಲಿರುವ ಜೀವನ ಪ್ರೀತಿ ಮೂಢನಂಬಿಕೆಗಳ ಮೇಲಿನ ಪ್ರಹಾರ ಮತ್ತು ಮಲ್ಲಮ್ಮನವರ ಭಕ್ತಿ ಜ್ಞಾನದ ಮಾರ್ಗ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದದ್ದಲ್ಲ ಅದು ಇಡೀ ಮಾನವ ಕುಲಕ್ಕೆ ಬೆಳಕು ನೀಡುವಂತದ್ದು ನಮ್ಮ ಮನೆ ಮನಗಳಲ್ಲಿ ಅವುಗಳನ್ನು ಪ್ರತಿದ್ಧಣಿಸುವಂತೆ ಮಾಡಬೇಕು ವೇಮನರು ಹಾಗೂ , ಬಸವಾದಿ ಶರಣರ ವಚನಗಳು ನಮ್ಮ ಬದುಕಿಗೆ ದಾರಿ ದೀಪಗಳಾಗಿವೆ ಎಂದು ಹೇಳಿದರು. ಬಸನಗೌಡ ಬೇವೂರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಡಾ ಗುರು ಮಹಾಂತ ಶ್ರೀಗಳ ಬಗ್ಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಚಿತ್ರದುರ್ಗ ಶಿವಕುಮಾರ ಶ್ರೀಗಳು ಶ್ರೀಮಠದ ಶಾಖ ಮಠ ವಾದ ಸಿದ್ದಯ್ಯನ ಕೋಟೆಯ ಬಸವಲಿಂಗ ಶ್ರೀಗಳು ವೇದಿಕೆಯಲ್ಲಿದ್ದರು

ಅಧ್ಯಕ್ಷತೆಯನ್ನು ಹುನಗುಂದ ರೆಡ್ಡಿ ಸಮಗ್ರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಕಾಮ ಉಪಾಧ್ಯಕ್ಷ ರಾಮನಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು ಸಾನಿಧ್ಯ ವಹಿಸಿದ ಗುರುಮಹಾಂತ ಶ್ರೀಗಳ ಶ್ರೀಗಳನ್ನು ಸನ್ಮಾನಿಸಲಾಯಿತು.
ಬಸವರಾಜ ಬೇವೂರ ಸ್ವಾಗತಿಸಿದರು, ಸಂಗಣ್ಣ ನಿಂಗನಗೌಡರ, ಸ್ವಾಗತಿಸಿ ನಿರೂಪಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!