ಸಾಂಬಾರಿಗೆ ಸಿದ್ಧವಿದ್ದ ನುಗ್ಗೆ ಕೋಡುಗಳು
ಕಸದ ಬುಟ್ಟಿ ಸೇರಲಿದ್ದ ಸಿಪ್ಪೆಯ ನಾರುಗಳು
ಅರಳಿ ಉದುರಿದ್ದ ಕೆಂಗುಲಾಬಿ ದಳಗಳು
ಒಟ್ಟು ಸೇರಿಸಲು ಹರಿಯಿತು ಭಾವ ತರಂಗಗಳು
ಕ್ರಿಯಾಶೀಲ ಕಲೆಯಲಿ ಅರಳಿತು ಸುಲಲಿತ ಚಿತ್ತಾರ
ಪದಪುಂಜಗಳ ಜೋಡಿಸಲಾಯಿತು ಕಾವ್ಯದಾ ಹಾರ
ಸೂರ್ಯೋದಯ ಪ್ರಿಯರಿಗಿದು ಲಘು ಉಪಾಹಾರ
ಸಂಭ್ರಮಿಸಲು ಆಗುವುದು ನಯನ ಮನೋಹರ
- ಲಲಿತಾ ಕೆ ಆಚಾರ್ ಬೆಂಗಳೂರು




















