ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ಕಟ್ಟು ನಿಟ್ಟಿನ ಆದೇಶ ಹೊರಡಿಸಬೇಕೆಂದು ವಿಶ್ವ ಹಿಂದೂ ಪರಿಷದ್‌ ಹಾಗೂ ಭಜರಂಗದಳ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ.

ಬಸವಕಲ್ಯಾಣ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿರಂತರವಾಗಿ ಎಗ್ಗಿಲ್ಲದೇ ನಡೆಯುತ್ತಲೇ ಇದೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ (2020 ರ ವಿಧಾನಸಭೆಯ ವಿಧೇಯಕ ಸಂಖ್ಯೆ-69) ಸರಕಾರದ ಆದೇಶವಿದ್ದರೂ ಕೂಡಾ ಸರಕಾರದ ಆದೇಶವನ್ನು ಗಾಳಿಗೆ ತೂರಿ ಗೋ ಹತ್ಯೆ ನಿರಂತರವಾಗಿ ನಡೆಯುತ್ತಲೆ ಇದೆ, ಹಿಂದೂ ಸಂಪ್ರದಾಯದ ಪ್ರಕಾರ ಗೋವನ್ನು 33 ಕೋಟಿ ದೇವಾನುದೇವತೆಗಳ ಸಮಾನವೆಂದು ಪೂಜಿಸಿ, ಆರಾಧಿಸುವ ಸಂಸ್ಕೃತಿ ನಮ್ಮದು ಗೋ ಹತ್ಯೆಯಿಂದ ಹಿಂದೂಗಳ ಭಾವನೆಗೆ ಅಪಾರವಾದ ಹಾನಿಯಾಗುತ್ತಿದ್ದು ಮತ್ತು ನಮ್ಮ ಅಸ್ಮಿತೆಗೆ ಧಕ್ಕೆಯಾಗುತ್ತಿದೆ.

ಆದ ಕಾರಣ ತಾಲೂಕಿನಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಯಾಗದಂತೆ ಸರಕಾರದ ಕಟ್ಟು ನಿಟ್ಟಿನ ಆದೇಶವನ್ನು ಪೋಲಿಸ್ ಇಲಾಖೆಯವರಿಗೆ, ಸಾರಿಗೆ ಇಲಾಖೆಯವರಿಗೆ, ಇನ್ನು ಸಂಬಂಧಪಟ್ಟಂತಹ ಇಲಾಖೆಯವರಿಗೆ ತಾವು ಆದೇಶವನ್ನು ಮಾಡಬೇಕು. ತಮ್ಮ ಮತ್ತು ಸರಕಾರದ ಆದೇಶವನ್ನು ಪಾಲಿಸದ ಗೋ ಹಂತಕರಿಗೆ ಕಾನೂನಿನ ಪ್ರಕಾರ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಮತ್ತು ನಮ್ಮ ಅಸ್ಥಿತಿಯ ಸಂಕೇತವಾದ ತಾಯಿ ಸ್ವರೂಪಿ ಗೋ ಮಾತೆಯ ರಕ್ಷಣೆಗೆ ತಾವು ಪ್ರಮುಖ ಕೇಂದ್ರಗಳಲ್ಲಿ ಪರಿಶಿಲನಾ ತಂಡವನ್ನು ನೇಮಿಸಿ ಪೋಲಿಸ್ ಇಲಾಖೆಯಿಂದ ಚೆಕ್ ಪೊಸ್ಟ್ ನಿರ್ಮಾಣ ಮಾಡಬೇಕು ಮತ್ತು ಬರುವ ಮೇ 29 ರವರೆಗೆ ಗೋ ಮಾರಾಟವನ್ನು ಮತ್ತು ಜಾನುವಾರ ಸಂತೆಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು, ಮತ್ತು ಕಾನೂನಿನ ಅಡಿಯಲ್ಲಿ ಗೋ ರಕ್ಷಕರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಬೇಕೆಂದು ಬಸವಕಲ್ಯಾಣ ತಾಲೂಕಿನ ಸಹಾಯಕ ಆಯುಕ್ತರಾದ ಶ್ರೀ ಪ್ರಕಾಶ ಕುದರಿ ರವರಿಗೆ ಇಂದು ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷದ್‌ ತಾಲೂಕು ಅಧ್ಯಕ್ಷರಾದ ಶ್ರೀ ಶ್ರೀಶೈಲ್‌ ವಾತಡೆ , ಗೋರಕ್ಷಾ ಪ್ರಮುಖರಾದ ವಿನೋದ ಬಡಗೇಕರ್‌ , ಸಾಮಾಜಿಕ ಹೋರಾಟಗಾರ ಶ್ರೀ ಲೋಕೇಶ ಮೋಳಕೇರೆ, ಲೋಕೇಶ ಜಮಖಂಡೆ, ಹಾಗೂ ಇತರರು ಭಾಗಿಯಾಗಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!