ಗಂಗಾವತಿ ತಾಲೂಕಿನಲ್ಲಿ ರೈತರ ಗುರುತಿನ ಚೀಟಿ (FID) ನೋಂದಣಿ ಹಾಗೂ ರಸಗೊಬ್ಬರ ವಿತರಣೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ (KPRS) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಗಂಗಾವತಿ ತಾಲೂಕು ಸಮಿತಿಯು ಮನವಿ ಸಲ್ಲಿಸಿ, ರೈತರಿಗೆ ಸರಿಯಾದ ರೀತಿಯಲ್ಲಿ ಸೇವೆ ದೊರಕುತ್ತಿಲ್ಲ ಎಂದು ಆರೋಪಿಸಿದೆ. ರೈತರು ಎಫ್.ಐ.ಡಿ (Farmer ID) ಮಾಡಿಸಿಕೊಳ್ಳಲು ಹಲವು ದಿನಗಳಿಂದ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಲಾಗಿದೆ.
ಇದೇ ವೇಳೆ, ರಸಗೊಬ್ಬರ ವಿತರಣೆಯಲ್ಲಿಯೂ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ರೈತ ಸಂಘ, ರೈತರಿಗೆ ಅಗತ್ಯವಿರುವ ರಸಗೊಬ್ಬರ ನೀಡುವ ಬದಲು ನ್ಯಾನೋ ಯೂರಿಯಾ ಸೇರಿದಂತೆ ಇತರೆ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸಲು ಒತ್ತಾಯಿಸಲಾಗುತ್ತಿದೆ ಎಂದು ಹೇಳಿದೆ.
ರೈತ ಸಂಘದ ಮನವಿಯಲ್ಲಿ ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಮುಂದಿರಿಸಲಾಗಿದೆ.
ಎಫ್.ಐ.ಡಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿ, ಪ್ರತೀ ಹಳ್ಳಿಯಲ್ಲಿ ಶಿಬಿರ ಆಯೋಜಿಸಿ ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು.
ರಸಗೊಬ್ಬರ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಕ್ಷಣ ನಿಲ್ಲಿಸಿ, ರೈತರಿಗೆ ಬೇಕಾದ ಗೊಬ್ಬರವನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಮಸ್ಯೆಗಳನ್ನು ತಕ್ಷಣ ಪರಿಹರಿಸದಿದ್ದಲ್ಲಿ ರೈತರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಿ.ಎಚ್. ಬೀರಪ್ಪ, ಅನ್ನಪೂರ್ಣ,
ಶರಣಪ್ಪ ಬೀರಪ್ಪ
ಓಂಕಾರಪ್ಪ ರಾಮಪ್ಪ
ತಿಮ್ಮಪ್ಪ ಬಡಿಗೇರ
S.K. ರೇವಣ್ಣಪ್ಪ
ಮುತ್ತಪ್ಪ ದಾಸಪ್ಪ
K. ರೇವಪ್ಪ
ಅಂಜನಯ್ಯ
ಚಿನ್ನಪ್ಪ
ವಿರುಪಣ್ಣ
ಯೋಗೇಶ್ ದಾನಿಗೇರ
ಶಿವರಾಜಪ್ಪ
ಮಂಜುನಾಥ ದಾನಿಗೇರ
ಹನುಮಂತರಾಯ
ಗುರುಪ್ಪ
ನಾಗಪ್ಪ
ದುನಮೇಲ
ಮುತ್ತಣ್ಣ ದಾಸಪ್ಪ
ಬಸಪ್ಪ ಸೇರಿದಂತೆ ಇತರರು
ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















