ಬಳ್ಳಾರಿ : ತಾಲೂಕಿನ ಮುದ್ದಟನೂರು ಗ್ರಾಮದಲ್ಲಿ ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ಗ್ರಾಮದ ಈದ್ಗಾ ದಲ್ಲಿ ನಡೆದ ವಿಶೇಷ ಪ್ರಾರ್ಥನೆ ಯನ್ನು ಉದ್ದೇಶಿಸಿ ಮಾತನಾಡಿದ ಜಾಮಿಯಾ ಸುನ್ನಿ ಮಸ್ಕಿದ್ ಇಮಾಮ್ ಆಮಿರ್ ಅಶ್ಅರೀ ಬನ್ನೂರು, ಬಕ್ರೀದ್ ಹಬ್ಬ ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇಸ್ಲಾಮಿನ ಪಂಚಸ್ಥಂಭಗಳಲ್ಲಿ ಒಂದಾಗಿರುವ ಹಜ್ ಕರ್ಮವು ಪ್ರಸ್ತುತ ಹಬ್ಬದೊಂದಿಗೆ ಬಕ್ರೀದ್ ಆಚರಣೆಯೊಂದಿಗೆ ಕರ್ಮವು ಸಮಾಪ್ತಿಗೊಳ್ಳುತ್ತದೆ.
ಹಜ್ ಮಹಾತ್ಮರನ್ನು ಸ್ಮರಿಸಿ, ಅಲ್ಲಾಹನನ್ನು ಆರಾಧಿಸುವುದು ಬಕ್ರೀದ್ ಹಬ್ಬದ ವಿಶೇಷ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟರು. ಕುತುಬಾ ಪಾರಾಯಣ, ನಮಾಝ್ ಮತ್ತು ಸಾಮೂಹಿಕ ಪ್ರಾರ್ಥನೆ ಮಾಡಿ ಸರ್ವ ಮನುಷ್ಯರ ಒಳತಿಗಾಗಿ, ವಿಶ್ವಶಾಂತಿಗಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮತ್ತು
ಹಾಗೂ ಯುವಕರು, ಮಕ್ಕಳು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















