
ಕೊಪ್ಪಳ :ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ
ಹಸಿರು ಬಳಗ ಕೆಂಪು ಬಳಗದ ಹನುಮೇಶ ಭಾವಿಕಟ್ಟಿರವರ ಮಗನ ನಾಮಕರಣದ ಅಂಗವಾಗಿ 100 ಸಸಿಗಳ ವಿತರಣೆ ಹಾಗೂ ಹೆಬ್ಬಾಳ ಶ್ರೀಗಳ ರಚಿತ ಮಾನವನಾಗು ಪುಸ್ತಕ ವಿತರಣೆ ನೆರವೇರಿತು.

ಮೊದಲ ಮಗಳು ಕೃಷಿ ನಾಮಕರಣಕ್ಕೆ 100 ಸಸಿಗಳನ್ನು ವಿತರಿಸಿ, ನೆಡಲಾಗಿದೆ ಹಾಗೂ ಮಗಳ ಸವಿನೆನಪಿಗಾಗಿ ಹೆಬ್ಬಾಳ ಶ್ರೀ ನಾಗಭೂಷಣ ಮಹಾಸ್ವಾಮಿಗಳ ಮಾನವನಾಗು ಹೈಕೂ ಸಂಪದ ಗ್ರಂಥವನ್ನು ಕೃಷಿ ನಾಮಕರಣ ಸವಿನೆನಪಿಗಾಗಿ ಮುದ್ರಿಸಿರುತ್ತದೆ. ಬಿಸಿಲಿನ ತಾಪಮಾನ ಹೆಚ್ಚಾಗುವುದರಿಂದ ಅದರ ಕಡಿಮೆಗೆ ಹಾಗೂ ಜನರಲ್ಲಿ ಪರಿಸರ ಕಾಳಜಿ ಮೂಡಲಿ ಎಂದು ಸಸಿಗಳನ್ನು ನೀಡಲಾಗಿದೆ. ನಮ್ಮ ಮನೆಯಲ್ಲಿ ಯಾವುದೆ ಶುಭ ಕಾರ್ಯವಾಗಲಿ ಸಸಿಗಳನ್ನು ನೆಡುವ, ನೀಡುವ ಮೂಲಕ ಆಚರಿಸುತ್ತೇನೆ. ಪುಸ್ತಕ ವಿತರಣೆ ಸಾಹಿತ್ಯವು ಎಲ್ಲರ ಮನದಲ್ಲಿ ಮನೆ ಮಾಡಲಿ ಪುಸ್ತಕವನ್ನು ಓದುವಂತಾಗಲಿ ಎಂಬ ಆಶಾ ಭಾವನೆಯಿಂದ ಪುಸ್ತಕ ನೀಡಲಾಗುತ್ತಿದೆ, ಕೃಷಿ ನಾಮಕರಣಕ್ಕೆ 100 ಸಸಿಗಳನ್ನು ಹಾಗೂ ಕೃಷಿ ಮೊದಲ ವರ್ಷದ ಹುಟ್ಟು ಹಬ್ಬದ ಸವಿನೆನಪಿಗೆ ಸರಕಾರಿ ಶಾಲೆಯ ಎಲ್ ಕೆ ಜಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಗಿದೆ, ಈಗ ನಮ್ಮ ಸಮಾಜದೊಡನೆ ಸಡಗರದಿಂದ ಆಚರಿಸಲು ಸಂತೋಷವಾಗುತ್ತದೆ.
ಈ ಸಂದರ್ಭದಲ್ಲಿ 100 ಸಸಿಗಳನ್ನು ಹಾಗೂ 200 ಪುಸ್ತಕಗಳನ್ನು ವಿತರಣೆ ಮಾಡುವ ಮೂಲಕ
ವೃಷಾಂಕ ನಾಮಕರಣ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಅಮರ್ , ಪ್ರಭಾಕರ್ , ಡಾ. ಶಿವುಕುಮಾರ ಕುಲಕರ್ಣಿ , ಕರಿಗೂಳಿ ಪ್ರಾಚಾರ್ಯರು ಸಿ.ಎನ್.ಆರ್. ಶ್ರೀರಾಮನಗರ , ಪರಿಸರ ಪ್ರೇಮಿ ರಫೀ, ಯೋಗ ಹಾಗೂ ಆಯುಷ್ಯ ಜಿಲ್ಲಾಧಿಕಾರಿಗಳ ತಂಡ , ಮಲ್ಲಯ್ಯ ಕಂದ ಸಹಕಾರ ಇಲಾಖೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ರಾಘವೇಂದ್ರ , ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರು, ಗ್ರಾಮದ ಹಿರಿಯರು , ಈರಪ್ಪ , ರಾಮಣ್ಣ , ಆನಂದಪ್ಪ , ಬಸಪ್ಪ , ಹನುಮೇಶ ಡೊಳ್ಳು ಹಾಗೂ ತಾಯಂದಿರು ಸೇರಿದಂತೆ ಕುಟುಂಬದ ಸದಸ್ಯರು ಭಾಗಿ ಇದ್ದರು.
- ಕರುನಾಡ ಕಂದ ಸುದ್ದಿ




















