ಹುನಗುಂದ ‘ವಿಶ್ವ ತಂಬಾಕು ನಿಷೇಧ ದಿನದಂದು ತಂಬಾಕು ಸೇವನೆಯ ದುಷ್ಪರಿಣಾಮದ ಕಾರ್ಯಕ್ರಮದಲ್ಲಿ ವಿ ಎಮ್ ಎಸ್ ಆರ್ ವಿ ಮಹಾವಿದ್ಯಾಲಯದ ಕ್ರೀಡಾ ನಿರ್ದೇಶಕರಾದ ಎಸ್ ಬಿ ಚಳಗೇರಿ ಅವರು ಮಾತನಾಡುತ್ತಾ ವ್ಯಸನಮುಕ್ತ ಆರೋಗ್ಯಕರ ಸಮಾಜ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.
ಅವರು ಹುನಗುಂದದ ಗೌರಮ್ಮ ಚರಂತಿಮಠ ನರ್ಸಿಂಗ್ ಕಾಲೇಜದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದರು.
ಹಾನಿಕಾರಕ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಹಾನಿಯ ಬಗ್ಗೆ ಸಾಕಷ್ಟು ಮಾಹಿತಿ ಇದೆ. ನೆರೆಹೊರೆಯಲ್ಲಿ ತಂಬಾಕು ಸೇವಿಸಿ ಅನಾರೋಗ್ಯ ಹಾಗೂ ಸಾವಿಗಿಡಾದ ಸಾಕಷ್ಟು ಜನರನ್ನು ನೋಡುತ್ತೇವೆ. ಆದರೂ ಪಾಠ ಕಲಿಯದಿರುವುದು ಮೂರ್ಖತನ. ಕೆಟ್ಟ ಸ್ನೇಹಿತರ ಸಹವಾಸ, ಒತ್ತಡದ ಜೀವನಶೈಲಿ, ಕುತೂಹಲ ಮತ್ತು ತಪ್ಪು ಕಲ್ಪನೆಗಳಿಂದ ಅನೇಕ ಯುವಕರು ವ್ಯಸನಿಗಳಾಗುತ್ತಿದ್ದಾರೆ. ಕ್ಷಣಿಕ ಸಂತೋಷ ನೀಡಬಹುದಾದ ತಂಬಾಕು, ಜೀವನಪೂರ್ತಿ ನೋವು, ಸಾವು ಉಂಟುಮಾಡುತ್ತದೆ’ ಎಂದು ಎಚ್ಚರಿಸಿದರು.
ನರ್ಸಿಂಗ್ ವಿದ್ಯಾರ್ಥಿಗಳಾಗಿ ತಾವು ಕೇವಲ ತಮ್ಮ ಆರೋಗ್ಯವನ್ನಷ್ಟೇ ಅಲ್ಲ, ಸಮಾಜದ ಆರೋಗ್ಯವನ್ನೂ ಕಾಪಾಡುವ ಜವಾಬ್ದಾರಿ ಹೊಂದಿದ್ದೀರಿ. ನಾಳೆಯ ಆರೋಗ್ಯ ಸೇವೆಗೆ ನಾಯಕರಾಗುವ ನೀವು ಜನರಿಗೆ ಆರೋಗ್ಯ ಶಿಕ್ಷಣ ನೀಡಬೇಕು’ ಎಂದರು.
ಜೀವನ ಅಮೂಲ್ಯವಾದದ್ದು. ವ್ಯಸನಗಳಾಗಿ ಅದನ್ನು ವ್ಯರ್ಥ ಮಾಡಬಾರದು. ನಿಮ್ಮ ಕನಸು, ಗುರಿ ಈಡೇರಬೇಕಾದರೆ ದುಶ್ಚಟಗಳಿಂದ ದೂರವಿದ್ದು, ಉತ್ತಮ ಹವ್ಯಾಸಗಳಿರಬೇಕು. ಆರೋಗ್ಯಕರ ಜೀವನವೇ ಯಶಸ್ಸಿನ ಮೊದಲ ಮೆಟ್ಟಿಲು’ ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುನಗುಂದದ ವಿ ಎಂ ಎಸ್ ಆರ್ ವಸ್ತ್ರದ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್ ಆರ್ ಗೋಲಗೊಂಡ ಮಾತನಾಡಿ ತಂಬಾಕು ಮತ್ತು ನಿಕೋಟಿನ್ ವ್ಯಸನದ ದುಷ್ಪರಿಣಾಮಗಳ ಕುರಿತು ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಶ್ವಾಸಕೋಶದ ಸಮಸ್ಯೆಗಳ ಬಗ್ಗೆ, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮಹತ್ವದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಪ್ರಾಚಾರ್ಯ ಸಂಗಮೇಶ ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಬೇಗನೆ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ ಶಾಲಾ ಕಾಲೇಜಿನ ಮಕ್ಕಳಿಗೂ ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ ಈ ವರ್ಷದ ಘೋಷವಾಕ್ಯ ಆಕರ್ಷಕ ಉತ್ಪನ್ನಗಳು ಕರಾಳ ಉದ್ದೇಶಗಳು ಎಂದಾಗಿದೆ. ಸಾರ್ವಜನಿಕರು ದುಷ್ಟಗಳಿಂದ ಹೊರಬಂದು ಕುಟುಂಬದ ಘೋಷಣೆ ಕಡೆ ಗಮನಹರಿಸಿ ಉತ್ತಮ ಜೀವನ ನಡೆಸುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ವಾಗಿದೆವಾಗಿದೆ ಎಂದು ಹೇಳಿದರು.
ಉಪನ್ಯಾಸಕ ವಾಸು ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಸುನಿಲ್ ಕೋಳಿ, ಸ್ವಾಗತಿಸಿದರು. ಪ್ರೊ. ಮೀನಾಕ್ಷಿ ವಂದಿಸಿದರು.
- ಕರುನಾಡ ಕಂದ ಸುದ್ದಿ




















