ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಕಾಚಾಪೂರ ಗ್ರಾಮದ ಸಿನಿಮಾ ನಟ, ಸಾಮಾಜಿಕ ಹೋರಾಟಗಾರ
ಭೀಮಣ್ಣ ನಾಯಕ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳಿಂದ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ವಹಿಸಿದ ಶ್ರೀ ವರದಾನೇಶ್ವರ ಸ್ವಾಮಿಗಳು ವಾಲ್ಮೀಕಿ ಆಶ್ರಮ ಗೊಲಪಲ್ಲಿ ಪೂಜ್ಯರು ಮಾತನಾಡಿ ಭೀಮಣ್ಣ ನಾಯಕ ಒಬ್ಬ ಸಾಧಾರಣ ಕುಟುಂಬದಲ್ಲಿ ಜನಿಸಿ, ಯಾವುದೇ ಶಾಲೆ ಕಲಿತಿಲ್ಲ, ಇಂತಹದರಲ್ಲಿ ಎಂಟು ಸಿನಿಮಾಗಳಲ್ಲಿ ನಟಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ನಮ್ಮ ಭಾಗದಲ್ಲಿ ಸಿನಿಮಾ ಕ್ಷೇತ್ರ ಬಹಳ ದೂರ. ಅಂತಹದರಲ್ಲಿ ಹಿಂದುಳಿದ ಭಾಗದಿಂದ ಸಿನಿಮಾಕ್ಕೆ ದಾಪುಗಾಲು ಹಾಕಿದ್ದು ಹೆಮ್ಮೆಯ ವಿಚಾರ, ಹಾಗೆಯೇ ಸಾಮಾಜಿಕ ಹೋರಾಟಗಾರರಾಗಿ, ಮುಖ್ಯವಾಗಿ ಒಬ್ಬ ಅಪ್ಪಟ ರೈತನಾಗಿ ಸೇವೆ ಮಾಡುತ್ತಿದ್ದು, ಇಂತಹ ದಟ್ಟ ಅಡವಿಯಲ್ಲಿರುವ ಒಂಟಿ ಮನೆಗೆ ಅವರ ಹುಟ್ಟು ಹಬ್ಬಕ್ಕೆ ಅಪಾರ ಜನರು ಬಂದು ಆಶೀರ್ವಾದ ಮಾಡಿದ್ದು, ಭೀಮಣ್ಣ ನಾಯಕ ಅವರ ನಿಜವಾದ ಸಾಮಾಜಿಕ ಕಳಕಳಿ ಎದ್ದು ತೋರಿಸುತ್ತದೆ ಎಂದು ಹೇಳಿದರು.
ಈ ವೇಳೆಯಲ್ಲಿ ಹನುಮಂತ ತಾತ ಪೂಜಾರಿ ಯರಲಗಡ್ಡಿ, ಮಾನ್ವಿಯ ಖ್ಯಾತ ವಕೀಲರಾದ ಶ್ಯಾಮಸುಂದರ ನಾಯಕ, ಮಹಾಂತೇಶ ನಾಯಕ ಜಾಲವಾಡಗಿ, ನಿಂಗಪ್ಪ ಗುತ್ತೇದಾರ ಕವಿತಾಳ, ಚಂದ್ರಶೇಖರ ನಾಯಕ ಉದ್ಬಳ, ಮಸ್ಕಿ ತಾಲ್ಲೂಕ ಶ್ರೀ ವಾಲ್ಮೀಕಿ ಸಮಾಜದ ಅಧ್ಯಕ್ಷ ಚಂದ್ರು ಯಾಪಲಪರ್ವಿ ಸೇರಿದಂತೆ ಇನ್ನೂ ಅನೇಕರು ಇದ್ದರು. ಮಹಿಬೂಬು ಮತ್ತು ತಂಡದಿಂದ ನಡೆದ ಸಂಗೀತ ಕಾರ್ಯಕ್ರಮವು ಜನರಿಂದ ಮೆಚ್ಚುಗೆಯನ್ನು ಪಡೆಯಿತು.
ವರದಿ : ವೆಂಕಟೇಶ ನವಲಕಲ್




















