ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅವಳ ಕಣ್ಣು

ಅದೆಷ್ಟೋ ದಿನಗಳಿಂದ ಆ ಕಣ್ಣ
ಕಣ್ಣಲಿ ಕಣ್ಣಿಟ್ಟು ಕಣ್ಣೊಳಗಿನ ಪ್ರೀತಿಯ ಕಾಣಲು
ಹವಣಿಸಿತ್ತು ಒಂದು ಕಣ್ಣು

ಆ ದಿನ ಬಂದಿತು ಆ ಕಣ್ಣು ಕೂಡಾ ಎದುರಿಗಿತ್ತು
ಆದರೇನು ಫಲ ಆ ಕಣ್ಣ ಕಂಡೊಡನೆ
ಈ ಕಣ್ಣ ಮೇಲಿನ ರೆಪ್ಪೆ ಯಾಕೋ ಮುಚ್ಚಿತು

ಜೇಬಿನ ಒಳಗೆ ಕೂತಿದ್ದ ಫೋನಿನ
ಕ್ಯಾಮೆರಾ ಕಣ್ಣು ಏನನ್ನೂ ಹೇಳದೆ
ಆ ಕಣ್ಣಿನ ಫೋಟೋ ತೆಗೆದು
ಅಲ್ಲಿಂದ ಹೊರಟಿತು

ಫೋಟೋದೊಳಗಿನ ಆ ಕಣ್ಣನು ಕೂಡಾ
ದಿಟ್ಟಿಸಿ ನೋಡಲಾಗದ ಸ್ಥಿತಿ ಅರಿತ ಕೈ ತಂತಾನೆ
ಆ ಕಣ್ಣನು ಗ್ಯಾಲರಿಯಿಂದಲೇ ತೆಗೆದು ಹಾಕಿತ್ತು

ಎಲ್ಲವನೂ ನೋಡುತ್ತಾ ಸುಮ್ಮನಿದ್ದ
ಮನಸಿಗೇಕೋ ಸಿಟ್ಟು ಬಂದು
ಅದೇ ಕೈಯಿಂದ ಕರೆ ಮಾಡಿಸಿ
ಆ ಕಣ್ಣಿನ ಪಕ್ಕದ ಕಿವಿಗಳ ಜೊತೆಗೆ ಮಾತಾಡಿಸಿ
ಮನಸಿನ ಜೊತೆ ಒಂದಾಗು ಎಂದಿತು

ಮನಸಿನ ಮಾತ ಕೇಳಿ ಹೊರಟ ಕರೆಗೆ
ಆ ಮನಸು ಯಾಕೆ ಇಷ್ಟು ತಡ ಅಂತ ಕೇಳಿತು
ಒಂದು ಪ್ರಶ್ನೆಗೆ ಶುರುವಾದ ಸಂಭಾಷಣೆ
ಸೂರ್ಯ ಹುಟ್ಟಿ ನೆತ್ತಿಗೇರಿ ಗೋಧೂಳಿ ನಂತರ ಕತ್ತಲಾಗಿ
ಲೋಕವೇ ಮಲಗಿದರೂ ಈ ಮನಸುಗಳು
ಮಾತಲ್ಲಿಯೇ ಮನೆ ಕಟ್ಟುತಿಹವು
ಹಾರೈಸಿಬಿಡಿ ಒಮ್ಮೆ ಮನಸಾರೆ
ಸೇರಿಬಿಡಲಿ ಎಂದಾದರೂ ಎಂದು

  • ಬಸವರಾಜ ಬಳಿಗಾರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!