ದೇಶಸೇವೆಗೆ ಬದುಕನ್ನೇ ಮುಡಿಪಿಟ್ಟ ನೀಲಕಂಠಜಿ
ಬಾಗಲಕೋಟೆ : ಕರ್ನಾಟಕದ ಸರ್ವೋದಯ ಕಾರ್ಯಕರ್ತ ನೀಲಕಂಟಠಜಿ ಗಣಾಚಾರಿ ಅವರು ಮಹಾತ್ಮಾ ಗಾಂಧೀಜಿ ಮತ್ತು ಆಚಾರ್ಯ ವಿನೋಬಾ ಭಾವೆ ಅವರಿಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಕರ್ನಾಟಕದ ಒಬ್ಬ ಶ್ರೇಷ್ಠ ಸಂತರಾಗಿದ್ದರು’ ಎಂದು ಕಪ್ಪತಗುಡ್ಡ ಸಂದಿವೇರಿಮಠ ಶಿವಕುಮಾರ ಕುಮಾರೇಶ್ವರ ಸಭಾ ಭವನದಲ್ಲಿ ಭಾನುವಾರ ಮುಖ್ಯ ಶಿಕ್ಷಕಿ ಜಯಶ್ರೀ (ಭಂಡಾರಿ) ಸೇವಾ ನಿವೃತ್ತಿ ಮತ್ತು ‘ಗಾಂಧೀಜಿಯವರ ಅನುಯಾಯಿ ನೀಲಕಂಠಜಿ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಮಹಾತ್ಮಾ ಗಾಂಧೀಜಿಯವರು ,1924ರಲ್ಲಿ ಬೆಳಗಾವಿಗೆ ಬಂದಾಗ ನೀಲಕಂಠ ಗಣಾಚಾರಿ ಸ್ವಾತಂತ್ರ್ಯ ಕೋರಾಟದಲ್ಲಿ ಧುಮುಕಿದರು. ಸಾಬರಮತಿ ಮತ್ತು ವರ್ಧಾ ಅಕ್ರಮದಲ್ಲಿ ನೆಲೆಸಿ ಬ್ರಿಟಿಷರ ವಿರುದ್ಧ ಹೋರಾಟದ ರೂಪ ನೀಯಗಳನ್ನು ತಯಾರಿಸುತ್ತಿದ್ದರು. ಸ್ವತಂತ್ರ್ಯ ಹೋರಾಟದ ಸಲುವಾಗಿ ಕರ್ನಾಟಕದಿಂದ ಒಬ್ಬ ಸಂಪನ್ಮೂಲ ಪಾತ್ರವಾಗಿದ್ದರು’ ಎಂದು ಹೇಳಿದರು. ‘ಸ್ವಾತಂತ್ರ್ಯದ ನಂತರವೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ನೀಲಕಂಠಜಿ ಅವರು ಬರಿ ಮೈಯಲ್ಲಿ ಮತ್ತು ಬರಿಗಾಲಿನಿಂದ ಗ್ರಾಮಗಳಿಗೆ ತೆರಳುತ್ತಾ ಗ್ರಾಮೋದ್ಯೋಗ, ಗೋಹತ್ಯೆ ನಿಷೇಧ. ಮದ್ಯಪಾನ ನಿರ್ಮೂಲನೆ, ಕೃಷಿ ಅಭಿವೃದ್ಧಿ, ಹೈನುಗಾರಿಕೆ, ಸಹಕಾರ ಸಂಘಗಳ ಸ್ಥಾಪನೆ, ಶಿಕ್ಷಣಕ್ಕಾಗಿ ಶಾಲೆಗಳ ಆರಂಭ ಮುಂತಾದ ಕಾರ್ಯಗಳಿಗೆ ಜನಜಾಗೃತಿಯನ್ನುಂಟು ಮಾಡುತ್ತಿದ್ದರು’ ಎಂದರು. ‘ನೀಲಕಂಠಜಿ ಅವರಿಗೆ ಆರು ಮಕ್ಕಳು ಇದ್ದರು. ಸ್ವಾತಂತ್ರ್ಯದ ಹೋರಾಟದ ಸಲುವಾಗಿ ಮತ್ತು ಸ್ವಾತಂತ್ರ್ಯದ ನಂತರವೂ ಕುಟುಂಬದತ್ತ ತಿರುಗಿ ನೋಡಲಿಲ್ಲ. ಮಹಾತ್ಮಾ ಗಾಂಧೀಜಿಯವರಂತೆ ಜನ ಜಾಗೃತಿಗೆ ನಾಡನ್ನು ಸುತ್ತು ಹಾಕುತ್ತ ವೈರಾಗ್ಯ ಮೂರ್ತಿಯಾಗಿದ್ದರು’ ಎಂದು ‘ನಾಡಿನ ಸರ್ವೋದಯ ಕಾರ್ಯಕರ್ತ ನೀಲಕಂಠಜಿ ಗಣಾಚಾರಿ ಸೇವೆಯನ್ನು ಯುವಕರು ಅರಿತು ಅವರ ದೇಶಾಭಿಮಾನ, ನಿಸ್ವಾರ್ಥಕೊಳ್ಳಬೇಕಿದೆ. ಅವರ ಚರಿತ್ರೆಯನ್ನು ಅಧ್ಯಯನ ಮಾಡಬೇಕು ‘ ಎಂದು, ತಿಳಿಸಿದರು ಪ್ರಾಧ್ಯಾಪಕ ಚಂದ್ರಶೇಖರ್ ಹೆಗಡೆ ಹೇಳಿದರು. ‘ಭಾರತೀಯ ಪರಂಪರೆಯಲ್ಲಿ ಅನೇಕ ಶರಣರು, ದಾರ್ಶನಿಕರು ಜೀವನದ ಮೌಲ್ಯಗಳನ್ನು ಸಮಾಜಕ್ಕೆ ಕೊಟ್ಟಿರುವಂತೆ ಕರ್ನಾಟಕದ ಸರ್ವೋದಯ ಕಾರ್ಯಕರ್ತ ನೀಲಕಂಠಜಿ ಅವರು ದೇಶಾಭಿಮಾನ ಮತ್ತು ಸಾಮಾಜಿಕ ಮೌಲ್ಯಗಳನ್ನು ಕೊಟ್ಟಿದ್ದಾರೆ ಅವರ ಆದರ್ಶಗಳನ್ನು ತಿಳಿದುಕೊಳ್ಳಬೇಕು’ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ಎಸ್. ಆರ್.ಮನಹಳ್ಳಿ ಹೇಳಿದರು.
ಎಂ.ಬಿ. ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ಎಲ್.ಬಿ. ಕುರ್ತಕೋಟಿ, ಅಜೀಜ್ ಮುಲ್ಲಾ ವೇದಿಕೆಯಲ್ಲಿ ಇದ್ದರು.
ಸೇವಾ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕಿ ಮತ್ತು ಪುಸ್ತಕ ಸಂಪಾದಕಿ ಜಯಶ್ರೀ ಗಣಾಚಾರಿ( ಭಂಡಾರಿ) ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃತಿ ಮಾಹಿತಿ :
ಪುಸ್ತಕದ ಹೆಸರು: ಗಾಂಧೀಜಿಯವರ ತತ್ವಾನುಯಾಯಿ ನೀಲಕಂಠಜಿ ಗಣಾಚಾರಿ ಸಂಸ್ಮರಣ ಗ್ರಂಥ. ಸಂಪಾದನೆ: ಜಯಶ್ರೀ ಭಂಡಾರಿ
₹ 250.
ಪ್ರಕಾಶಕರು: ಚೇತನ್ ಬುಕ್ಸ್, ಹಂಪಿನಗರ, ಬೆಂಗಳೂರು 66: .




















