ಬಳ್ಳಾರಿ / ಕಂಪ್ಲಿ: ಜನಪ್ರಿಯ ಶಾಸಕ ಜೆ.ಎನ್.ಗಣೇಶ ಜನ್ಮದಿನದ ಅಂಗವಾಗಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಶುಕ್ರವಾರ ವಿತರಿಸಲಾಯಿತು.
ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಕ್ಷೇತ್ರದ ಜನರ ಮನೆ ಮಾತಾಗಿದ್ದಾರೆ. ಆದ್ದರಿಂದ ಇವರ ಜನ್ಮದಿನದ ಅಂಗವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು. ಶಾಸಕರಿಗೆ ಮುಂದಿನ ದಿನದಲ್ಲಿ ಸಚಿವ ಸ್ಥಾನ ಸಿಗುವ ಜೊತೆಗೆ ಆರೋಗ್ಯ, ಆಯಸ್ಸು ವೃದ್ಧಿಸಲಿ ಎಂದರು.
ಪ್ರಧಾನ ಕಾರ್ಯದರ್ಶಿ ವಾಲ್ಮೀಕಿ ರಘುನಾಯಕ ಮತ್ತು ಪುರಸಭೆ ಮಾಜಿ ಸದಸ್ಯ ವೀರಾಂಜಿನೀಯಲು ಮಾತನಾಡಿ, ಶಾಸಕ ಗಣೇಶ್ ಅವರ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಮೂಲಸೌಕರ್ಯ ಕಲ್ಪಿಸಿದ ಹಿನ್ನಲೆ ಕ್ಷೇತ್ರದ ಜನರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಶಾಸಕರ ಸೇವೆಗಳು ಅನನ್ಯವಾಗಿವೆ. ಕಾಂಗ್ರೆಸ್ ಶಿಸ್ತಿನ ಸಿಪಾಯಿಯಾಗಿ ಶ್ರಮಿಸುತ್ತಿರುವ ಜೆ.ಎನ್.ಗಣೇಶ್‌ಗೆ ಎರಡನೇ ಹಂತದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದರು.
ಇಲ್ಲಿನ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ವೈದ್ಯಾಧಿಕಾರಿ ಡಾ.ರವೀಂದ್ರ ಕನಿಕೇರಿ, ಮುಖಂಡರಾದ ಬಿ.ಸಿದ್ದಪ್ಪ, ಭಟ್ಟ ಪ್ರಸಾದ್, ಕೆ.ಷಣ್ಮುಕಪ್ಪ, ಸಿ.ಆರ್.ಹನುಮಂತ, ಎಲ್.ರಾಮನಾಯ್ಡು, ಕೆ.ಎಸ್.ಚಾಂದ್‌ಬಾಷಾ, ಎಂ.ಉಸ್ಮಾನ್, ಜಾಫರ್ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















