
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಲಾಗಿದೆ ಈ ನಿಟ್ಟಿನಲ್ಲಿ ಮಹಿಳೆಯರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ತಿಮ್ಮಾಪುರ ಗ್ರಾಮದ ವೇದಮೂರ್ತಿ ನಿವೃತ್ತ ಶಿಕ್ಷಕ ಬಸಯ್ಯನವರು ಹಿರೇಮಠ ಹೇಳಿದರು.
ಅವರು ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ಗ್ರಾಮದಲ್ಲಿ ಅದಿಕ ಮಾಸದ ನಿಮಿತ್ಯ ಗ್ರಾಮದ ಗ್ರಾಮ ದೇವತೆಗಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಲಿಂಗಸುಗೂರ ಗ್ರಾಮದ ಶ್ರೀಮತಿ ಸರೋಜಿನಿ ದೇವಿ ಶೇಖರಗೌಡ ಪಾಟೀಲ್ ರವರ ತವರು ಗ್ರಾಮವಾದ ತಿಮ್ಮಾಪುರದ ಎಲ್ಲಾ ಮಹಿಳೆಯರಿಗೆ ಹಾಗೂ ಕುಟುಂಬದವರು ಹೇಮರೆಡ್ಡಿ ಮಲ್ಲಮ್ಮಳ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಅವರು ಮುಂದುವರೆದು ಅಂತಹ ಸಂಪ್ರದಾಯವನ್ನು ಎಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಶುಭ ಕಾರ್ಯಗಳಲ್ಲಿ ಅಥವಾ ವಿಶೇಷ ಪೂಜೆಗಳಲ್ಲಿ ನೆರೆದ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ಹುಡಿ ತುಂಬಿ ಗೌರವಿಸುವುದು, ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿವೆ ಮಂಗಳವಾಗಲಿ ಎಂದು ಹಾರೈಸಲಾಗುವುದು.
ಹಿಂದೂ ಸಂಪ್ರದಾಯಗಳಲ್ಲಿ ಅತ್ಯಂತ ಮಂಗಳಕರ ಮತ್ತು ಪವಿತ್ರವಾದ ಆಚರಣೆಯಾಗಿದೆ ಇದು ಸಮೃದ್ಧಿ ಸಂತಾನ ಮತ್ತು ಒಳಿತನ್ನು ಆಶಿಸುವ ಸಂಕೇತವಾಗಿದೆ ದೇವಸ್ಥಾನಗಳಲ್ಲಿ ವಿಶೇಷ ಹಬ್ಬಗಳು ಅಥವಾ ಅಧಿಕಮಾಸ ಜಾತ್ರೆ ಗ್ರಾಮ ದೇವತೆಯ ಪೂಜೆ ಮುಂತಾದ ಸಂದರ್ಭಗಳಲ್ಲಿ ಉಡಿ ತುಂಬಲಾಗುತ್ತಿದೆ, ಎಂದು ಹೇಳಿದರು ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಉಡಿ ತುಂಬಿಸಿಕೊಂಡರು, ವೇದಿಕೆಯಲ್ಲಿ ಗಿರೀಶ್ ಗೌಡ ದಾದ್ಮಿ ಇತರರು ಇದ್ದರು ಸರೋಜಿನಿದೇವಿ ಪಾಟೀಲ್ ಸ್ವಾಗತಿಸಿದರು ಜಯಶ್ರೀ ದಾದಮಿ ವಂದಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಮಹಿಳೆಯರ ಪರವಾಗಿ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸರೋಜಿನಿ ದೇವಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
- ಕರುನಾಡ ಕಂದ ಸುದ್ದಿ




















