ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾರುಣ್ಯಾಶ್ರಮದ ಸೇವೆ ಪುಸ್ತಕದಲ್ಲಿ ಬರೆಯುವಂತದ್ದಲ್ಲ ಮಸ್ತಕದಲ್ಲಿ ಉಳಿಯುವಂತದ್ದು : ವೀರೇಶ ದೇವರಮನಿ

ರಾಯಚೂರು/ ಸಿಂಧನೂರು : ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪ್ರಸ್ತುತ ಸಂಸ್ಥೆಯಾದ ಶ್ರೀ ಮಠ ಸೇವಾ ಟ್ರಸ್ಟ್ (ರಿ.) ಹರೇಟನೂರು ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆರ್. ಜಿ. ಕಲಾ ಟ್ರಸ್ಟ್ (ರಿ.) ನ ಸಂಸ್ಥಾಪಕ ಅಧ್ಯಕ್ಷರಾದ ವೀರೇಶ ದೇವರಮನಿ ಇವರ ನೇತೃತ್ವದಲ್ಲಿ ” ಸಂಗೀತ ಸುಧಾ” ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ಖ್ಯಾತ ಗಾಯಕರಾದ ಮಲ್ಲಮ್ಮ ಪೋತ್ನಾಳ ಇವರ ಜನ್ಮ ಸಾರ್ಥಕ ದಿನವನ್ನು ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಮಲ್ಲಮ್ಮ ಅವರನ್ನು ಕಾರುಣ್ಯ ಆಶ್ರಮದ ವತಿಯಿಂದ ಗೌರವಿಸಿ ಸನ್ಮಾನಿಸಿ ಆಶೀರ್ವದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿದ್ದ ಆರ್. ಜಿ.ಕಲಾ ಟ್ರಸ್ಟ್ (ರಿ.)ನ ವ್ಯವಸ್ಥಾಪಕರಾದ ಗಾಯಕ ವೀರೇಶ ದೇವರಮನಿ ಮಾತನಾಡಿ ಆತ್ಮೀಯ ಸಹೋದರಿಯಾದ ಮಲ್ಲಮ್ಮ ಅವರ ಜನ್ಮ ಸಾರ್ಥಕ ದಿನವು ಇಂತಹ ಕರುಣೆಯ ಕುಟುಂಬದಲ್ಲಿ ನೆರವೇರಿ ಇಲ್ಲಿರುವ ಎಲ್ಲಾ ಶರಣರ ಆಶೀರ್ವಾದ ಸ್ವೀಕರಿಸಿದ ಈ ಕಾರ್ಯಕ್ರಮ ನಮ್ಮೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ. ಈ ನಮ್ಮ ಕಾರುಣ್ಯಾಶ್ರಮದ ಸೇವೆ ಪುಸ್ತಕದಲ್ಲಿ ಬರೆಯುವಂತದ್ದಲ್ಲ ಮಸ್ತಕದಲ್ಲಿ ಉಳಿಯುವಂತದ್ದು. ಸುಮಾರು ವರ್ಷಗಳ ಹಿಂದೆ ಹುಟ್ಟಿಕೊಂಡಿರುವ ಈ ಕಾರುಣ್ಯ ಆಶ್ರಮವು ಅದೆಷ್ಟೋ ಟೀಕೆ ಟಿಪ್ಪಣಿ ಅವಮಾನ ಅಪಪ್ರಚಾರ ಹಿತ ಶತ್ರುಗಳನ್ನು ಎದುರಿಸುತ್ತಾ ಸ್ವಚ್ಛ ಸುಂದರ ಮನಸ್ಸಿನಿಂದ ಮಾಡುವ ಸೇವೆಗೆ ಯಾರೇ ಏನು ಮಾಡಿದರು ಸಹ ಏನನ್ನು ಮಾಡಲಾಗುವುದಿಲ್ಲ. ಕಲಾವಿದರನ್ನು ಹೆಚ್ಚು ಗೌರವದಿಂದ ಕಾಣುತ್ತಿರುವ ಈ ಕಾರುಣ್ಯ ಆಶ್ರಮ ನಮ್ಮ ನಾಡಲ್ಲದೆ ವಿವಿಧ ರಾಜ್ಯದ ಕಲಾವಿದರ ಪ್ರೀತಿಗೆ ಪಾತ್ರವಾಗಿದೆ. ಕೇವಲ ಬಡಜಂಗಮರಾಗಿ ಹರೇಟನೂರಿನ ಆದಿಶಕ್ತಿ ಶ್ರೀ ಚಾಮುಂಡಿ ಅರ್ಚಕರಾದ ಅಮರಯ್ಯ ಸ್ವಾಮಿಯವರು ಅನಾಥಾಶ್ರಮ ಮಾಡಿದ್ದು ಇತಿಹಾಸವೇ ಸರಿ. ನಾವು ನಮ್ಮ ಜೀವನದಲ್ಲಿ ಅರ್ಚಕರಾದಂತವರು ಇಂತಹ ಸೇವೆ ಮಾಡುತ್ತಿರುವುದು ಆ ದೇವಿಯ ಆಶೀರ್ವಾದದಿಂದ ಇವರಕ್ಕಾಗಿ ನಿಜವಾದ ಅನಾಥರಿಗೆ ಹುಟ್ಟಿಕೊಂಡಿರುವ ಈ ಸಂಸ್ಥೆಗೆ ನಾವೆಲ್ಲರೂ ಬೆನ್ನೆಲುಬಾಗಿರುತ್ತೇವೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ನಂತರ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಸಮಾಜದಲ್ಲಿ ಹಲವಾರು ಅನುಭವಗಳನ್ನು ಅನುಭವಿಸುತ್ತಾ ಮಾಡುತ್ತಿರುವ ನಮ್ಮ ಈ ಸೇವೆ ನಮ್ಮ ಅಂತರಾತ್ಮ ಹಾಗೂ ಪರಮಾತ್ಮನಿಗೆ ಗೊತ್ತಿದ್ದರೆ ಸಾಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಲಾವಿದರುಗಳಾದ ಮಲ್ಲಮ್ಮ
ವಿಶಾಲಾಕ್ಷಿ ವಿಶ್ವನಾಥ ಹಿರೇಮಠ. ಲಕ್ಷ್ಮೀ. ಗಣೇಶ ಗ್ರಾಮ ಲೆಕ್ಕಾಧಿಕಾರಿಗಳು. ಬಸವರಾಜ ಹಾಸ್ಯ ಕಲಾವಿದ. ರಾಘವೇಂದ್ರ.ರಂಗನಾಥರಾವ್. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ. ಮರಿಯಪ್ಪ ಜ್ಯೋತಿ. ಹಾಗೂ ಅನೇಕ ಕಲಾವಿದರುಗಳು ಭಾಗವಹಿಸಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!