ಬಳ್ಳಾರಿ / ಕಂಪ್ಲಿ : ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗಂಗಾಮತ ಸಮಾಜದ ತಿಪ್ಪಣ್ಣಪ್ಪ ಕಮಕನೂರು ಇವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಂಪ್ಲಿ ತಾಲೂಕು ಗಂಗಾಮತಸ್ಥರ (ಬೆಸ್ತರ) ಸಂಘದ ಅಧ್ಯಕ್ಷ ಎಲೆಗಾರ ನಾಗರಾಜ ಒತ್ತಾಯಿಸಿದರು.
ಅವರು ಸೋಮವಾರ ಪಟ್ಟಣದ ಗಂಗಾನಗರದ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ನಡೆಸಿದ ಗಂಗಾಮತ ಸಮಾಜದ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಲಿ ಸೇರಿದಂತೆ ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಗಂಗಾಮತ (ಬೆಸ್ತರ) ಜನಸಂಖ್ಯೆ ಹೊಂದಿದ್ದು, ಈ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಇಂದಿಗೂ ತಳಮಟ್ಟದಲ್ಲಿರುವ ಈ ಬಲಿಷ್ಠ ಸಮಾಜವು ಪ್ರಗತಿಯ ಪಥದತ್ತ ಮುನ್ನುಗ್ಗಲು, ಸಮಾಜದ ಧ್ವನಿಯಾಗಿ ರಾಜ್ಯ ಮಟ್ಟದಲ್ಲಿ ಕೆಲಸ ನಿರ್ವಹಿಸಲು ರಾಜಕೀಯ ಚತುರನ ಅವಶ್ಯಕತೆ ಇದೆ. ಸಮಾಜವೂ ಎಲ್ಲಾ ಹಂತದಲ್ಲಿ ಅಭಿವೃದ್ಧಿ ಹೊಂದಲು ಮತ್ತು ಸರ್ಕಾರದ ಮಟ್ಟದಲ್ಲಿ ವಿಶೇಷ ಯೋಜನೆಗಳನ್ನು ಸಮಾಜದ ಜನತೆಗೆ ಒದಗಿಸಲು ಮತ್ತು ವಿಧಾನಸೌಧದಲ್ಲಿ ಮಾತನಾಡಬೇಕಾಗಿದೆ. ಈ ದಿಸೆಯಲ್ಲಿ ಸಮಾಜದ ಹಿರಿಯ ಮುತ್ಸದ್ಧಿ ಮತ್ತು ಕಾಂಗ್ರೆಸ್ನ ಧುರಿಣ ನಾಯಕ ತಿಪ್ಪಣ್ಣಪ್ಪ ಕಮಕನೂರ್ ಇವರಿಗೆ ಸಚಿವ ನೀಡಿದರೆ, ಸಮಾಜಕ್ಕೆ ಒಂದೊಳ್ಳೆ ಸ್ಥಾನ ಸಿಕ್ಕಂತಾಗುತ್ತದೆ. ಈಗಾಗಲೇ ಕರ್ನಾಟಕ ವಿಧಾನ ಪರಿಷತ್ನ ನೂತನ ಸದಸ್ಯರಾಗಿ ಹೊರ ಹೊಮ್ಮಿದ್ದು, ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜೋಳಮಾರೋ ಈರಪ್ಪ, ಕರೇಕಲ್ ಮನೋಹರ, ಮಣ್ಣೂರು ನಾಗರಾಜ, ಬಿ.ಈರಪ್ಪ, ಮುದ್ದಾಪುರ ತಾಯಣ್ಣ, ನಡವಿ ಮಲ್ಲಿಕಾರ್ಜುನ, ಕಟ್ಟೆ ದುರುಗಪ್ಪ, ಅಯೋಧ್ಯ ರಮೇಶ, ಟಿ.ಗಂಗಣ್ಣ, ಬಿ.ರಾಘವೇಂದ್ರ, ಇಟಗಿ ಈರಣ್ಣ, ರಾಮಸಾಗರ ದುರುಗಪ್ಪ, ಸುಧಾಕರ, ಮಹೇಶ, ತಳವಾರ ಮಲ್ಲಿಕಾರ್ಜುನ, ಯಲ್ಲಪ್ಪ, ಕರೇಕಲ್ ಪ್ರಕಾಶ, ಲಬೇದ್ ವಿರೇಶ, ಅಯೋಧ್ಯ ಗಣೇಶ, ಇಟಗಿ ವಿರುಪಣ್ಣ, ಬಿ.ಮಲ್ಲಿಕಾರ್ಜುನ, ಸೆರೆಗಾರ ನಾಗರಾಜ, ಚಾಂಗಿ ಮಂಜುನಾಥ, ಸಂದೀಪ್, ಸಣ್ಣೆಪ್ಪ, ಗುರುರಾಜ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















