ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರಿಸರ ಸಂರಕ್ಷಣೆಯಲ್ಲಿ ಅಮರೇಗೌಡ ಮಲ್ಲಾಪುರ ಅವರ ಕಾರ್ಯ ಶ್ಲಾಘನೀಯ : ಡಾ: ಶರಣಬಸವ ದೇವರಡ್ಡಿ ಗವಿಸಿದ್ದೇಶ್ವರ ಆಸ್ಪತ್ರೆ

ಸಿಂಧನೂರಿನ ವಾರ್ಡ್ ನಂಬರ್ 13 ರಾಜೀವ ನಗರ ಉದ್ಭವ ಮೂರ್ತಿ ಶ್ರೀ ಮಲ್ಲಯ್ಯ ದೇವಸ್ಥಾನ
ಮುಂಭಾಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು
ಎಕ್ಸಲೆಂಟ್ ಪ.ಪೂ. ಕಾಲೇಜ್ ಸಿಂಧನೂರು, ವನಸಿರಿ ಫೌಂಡೇಶನ್, ಪ್ರಾದೇಶಿಕ ಅರಣ್ಯ ವಲಯ, ಮಲ್ಲಯ್ಯ ದೇವಸ್ಥಾನ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಪರಿಸರ ಸಂರಕ್ಷಣೆ ಎಂದರೆ ಕೇವಲ ಪ್ರಕೃತಿಯನ್ನು ರಕ್ಷಿಸುವುದಲ್ಲ, ಬದಲಿಗೆ ಸಮಸ್ತ ಮಾನವಕುಲದ ಮತ್ತು ಜೀವಸಂಕುಲದ ಉಳಿವಿಗಾಗಿ ನಡೆಸುವ ಹೋರಾಟವಾಗಿದೆ. ಪ್ರಸ್ತುತ ದಿನಗಳಲ್ಲಿ ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಾಶವು ಗಂಭೀರ ಸಮಸ್ಯೆಯಾಗಿದ್ದು, ಪ್ರತಿಯೊಬ್ಬರೂ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಅತ್ಯಗತ್ಯವಾಗಿದೆ.ಇಂತಹ ಒಂದು ಜವಾಬ್ದಾರಿ ಕಾರ್ಯವನ್ನು ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರು ಹಗಲಿರುಳು ಎನ್ನದೆ ನಿಭಾಯಿಸುತ್ತಿದ್ದಾರೆ ಅವರಿಗೆ ಸದಾಕಾಲ ನಾವೆಲ್ಲರೂ ಬೆಂಬಲವಾಗಿ ಇರುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಗವಿಸಿದ್ದೇಶ್ವರ ಆಸ್ಪತ್ರೆ ವೈದ್ಯರಾದ ಶ್ರೀ ಶರಣಬಸವರಾಜ ದೇವರಡ್ಡಿ, ನಗರಸಭೆ ಸದಸ್ಯರಾದ ಶ್ರೀ ಛತ್ರಪ್ಪ ವನಸಿರಿ ಅಮರೇಗೌಡ ಮಲ್ಲಾಪುರ ಕರ್ನಾಟಕ ಸರಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರು, ಮತ್ತು ಅರಣ್ಯ ಅಧಿಕಾರಿಗಳಾದ DRFO ಅಮರೇಶ ,BT forest ಪ್ರಕಾಶ, ಎಕ್ಸ್ ಲೆಂಟ್ ಪ. ಪೂ. ಕಾಲೇಜಿನ ಪ್ರಾಚಾರ್ಯ ಮಂಜುನಾಥ ಸೋಮಲಾಪುರ, ರಾಜು ಬಳಗಾನೂರ, ಎನ್ಎಸ್ಎಸ್ ಅಧಿಕಾರಿ ಮೆಹಬೂಬ್ ಕೋಳಬಾಳ ಇತರರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!