
ಕಲ್ಬುರ್ಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಜರುಗಿತು.
ಈ ಶುಭ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಶಿಧರ್ ಬಿರಾದರ್ ಅವರು ಎಲ್ಲಾ ಮಕ್ಕಳಿಗೆ ಹೂ ಮತ್ತು ಚಾಕಲೇಟ್ ನೀಡಿ ಸ್ವಾಗತ ಕೋರಿದರು ನಂತರ ಎಲ್ಲಾ ಮಕ್ಕಳಿಗೆ ಊರಿನ ಪ್ರಮುಖರು ಪಿಡಿಒ ಮೇಡಂ ಅವರು ,ಮುಖ್ಯ ಗುರುಗಳು ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು ಎಲ್ಲಾ ಮುದ್ದು ಮಕ್ಕಳಿಗೆ ಸ್ವಾಗತಿಸಿದರು.
2026- 27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವದ ದಿನದಂದು ಸರ್ಕಾರದ ಆದೇಶದಂತೆ ದಾಖಲಾತಿ ಆಂದೋಲನ, ಪಾಲಕರ ಪೋಷಕರ ಶಿಕ್ಷಕರ ಮಹಾಸಭೆ ಹಾಗೂ ಪಠ್ಯ ಪುಸ್ತಕ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಶಿಧರ್ ಬಿರಾದರ್ ಸಮ್ಮುಖದಲ್ಲಿ ಹಾಗೂ ವೇದಿಕೆ ಮೇಲಿರುವ ಮುಖ್ಯ ಗುರುಗಳು ಪಿ ಡಿ ಓ ಅಧಿಕಾರಿಗಳು ಗಣ್ಯರಿಂದ ವಿತರಿಸಲಾಯಿತು.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪೂರ ರವರು ಪಾಲಕ ಪೋಷಕರ ಶಿಕ್ಷಕರ ಮಹಾಸಭೆಯಲ್ಲಿ ದಿನಾಲೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಸರಕಾರಿ ಶಾಲೆಗಳಲ್ಲಿ ಕನ್ನಡ, ಇಂಗ್ಲೀಷ್ ಮಾದ್ಯಮ ಪ್ರಾರಂಭಿಸಲಾಗಿದೆ. ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ದಾಖಲಿಸಿ ಸವಲತ್ತುಗಳು ಪಡೆಯಲು ತಿಳಿಸಿದರು. ಮುಖ್ಯ ಗುರುಗಳು ಎಲ್ಲಾ ಸಹ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಶ್ರೀ ಶ್ರೀಮಂತ ಮುಖ್ಯ ಗುರುಗಳು ” ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ದಾಖಲಿಸಿ ಸವಲತ್ತುಗಳು ಪಡೆಯಲು ಮತ್ತು ಉತ್ತಮ ಶಿಕ್ಷಣ ಕೂಡಲು ಸಮುದಾಯದ ಸಹಕಾರ ಅಗತ್ಯವಾಗಿದೆ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೆಳಗ್ಗೆ ಬೇಗ ಏಳಲು ಸಹಕರಿಸಿ, ಮಕ್ಕಳಿಗೆ ದಿನಾಲೂ ತಪ್ಪದೇ ಶಾಲೆಗೆ ಕಳುಹಿಸಬೇಕು. ಆಗ ಉತ್ತಮ ಶಿಕ್ಷಣ ಕೂಡಲು ಎರಡು ಮಾತಿಲ್ಲ, ಪ್ರಾರಂಭೋತ್ಸವದ ನಿಮಿತ್ಯ, ಸಿರಾ, ಪಲಾವ್, ಸಾಂಬಾರ್ ಬಿಸಿ ಊಟದ ವ್ಯವಸ್ಥೆ ಮಾಡಲಾಗಿದೆ ಮತ್ತು ಭೌತಿಕ ವಾಗಿ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ” ಎಂದು ಪ್ರಾಸ್ತಾವಿಕ ಮಾತನಾಡಿದರು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮಾನ್ಯ ಶ್ರೀ ಶಶಿಧರ್ ಬಿರಾದಾರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧ್ಯಕ್ಷತೆಯನ್ನು ಶ್ರೀ ಶ್ರೀಮಂತ ಮುಖ್ಯ ಗುರುಗಳು ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ದಿಗ್ಗಾಂವ ಮುಖ್ಯ ಅತಿಥಿಗಳಾಗಿ ಶ್ರೀ ಶಿವಾನಂದ ನಾಲವಾರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಚಿತ್ತಾಪೂರ
ಶ್ರೀ ಶಿವಶರಣಪ್ಪ ಮಂಟಾಳೆ ತಾಲೂಕ ದೈಹಿಕ ಪರಿವೀಕ್ಷಣಾ ಅಧಿಕಾರಿಗಳು ಚಿತ್ತಾಪುರ, ಅತಿಥಿಗಳಾಗಿ ಶ್ರೀ ಶಿವಾನಂದ ಕೆಂಪಳರ್ ಸಮೂಹ ಸಂಪನ್ಮೂಲ ಅಧಿಕಾರಿಗಳು ಸಾತನೂರ, ಕುಮಾರಿ ಸಂಗೀತಾ PDO ಗ್ರಾಮ ಪಂಚಾಯತ್ ದಿಗ್ಗಾಂವ, ಶ್ರೀ ಹರಳಯ್ಯ ಬಡಿಗೇರ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ದಿಗ್ಗಾಂವ, ಶ್ರೀ ಶ್ರೀಮಂತ ಗುತ್ತೇದಾರ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ದಿಗ್ಗಾಂವ, ಶ್ರೀ ದೇವೇಂದ್ರಪ್ಪ ಅಚ್ಚೇಲಿ SDMC ಅಧ್ಯಕ್ಷರು ದಿಗ್ಗಾಂವ, ಶ್ರೀಮತಿ ದಾನಮ್ಮ SDMC ಉಪಾಧ್ಯಕ್ಷರು,
ಶ್ರೀಬಸವರಾಜ SDMC ಸದಸ್ಯರುಹಾಗೂ ಪಾಲಕ ಪೋಷಕರು ಎಲ್ಲಾ ಶಿಕ್ಷಕರು ಅಡುಗೆ ಸಿಬ್ಬಂದಿಯವರು ಮುದ್ದು ಮಕ್ಕಳು ಉಪಸ್ಥಿತರಿದ್ದರು.
ನಿರೂಪಣೆ: ಶೀಲಾ ಪಾಟೀಲ ಸ.ಶಿ.ದಿಗ್ಗಾಂವ,
ಸ್ವಾಗತ: ಶ್ರೀ ಜಗನ್ನಾಥ ಕಲಕೇರಿ ಅತಿಥಿ ಶಿಕ್ಷಕರು ದಿಗ್ಗಾಂವ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















