ಬಾಗಲಕೋಟೆ : ಕಲೆಯು ಸಾಧಕನ ಸ್ವತ್ತು. ಪರಿಶ್ರಮ ಪಟ್ಟವರಿಗೆ ಕಲೆಯು ಸಿದ್ದಿಯಾಗುತ್ತದೆ. ತಮ್ಮ ಆಯುಷ್ಯವನ್ನೆಲ್ಲ ಕಲೆಗಾಗಿಯೇ ಮುಡುಪಾಗಿಟ್ಟಿರುವ ಕಲಾವಿದರೆಲ್ಲರೂ ನಮ್ಮ ಕನ್ನಡ ನಾಡಿನ ನಿಜವಾದ ಆಸ್ತಿ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರು. ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು. ಅವರು ಗದ್ದನಕೇರಿಯ ಸದ್ಗುರು ಲಡ್ಡು ಮುತ್ಯಾರ ಮಠದಲ್ಲಿ ರವಿವಾರ ದಿ. 21 ರಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಆಶ್ರಯದಲ್ಲಿ ನಡೆದ ವಿಶ್ವ ಸಂಗೀತ ದಿನಾಚರಣೆ ಸಂಭ್ರಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಲೆಯಿಂದಲೇ ಬದುಕು ನಡೆಸುತ್ತಿರುವ ಕಲಾವಿದರೆಲ್ಲರಿಗೂ ಸರ್ಕಾರದ ಯೋಜನೆಗಳು ದೊರೆಯಬೇಕು ಎಂಬ ಉದ್ದೇಶದಿಂದ ಇವತ್ತು ಒಕ್ಕೂಟವು ನಿರಂತರ ಸಾಂಸ್ಕೃತಿಕ ಹೋರಾಟದ ಅಭಿಯಾನವನ್ನು ಪ್ರಾರಂಭಿಸಿದೆ. ಯಾವತ್ತೂ ನೊಂದು ಬೆಂದು ಕಷ್ಟ ಪರಿಸ್ಥಿತಿಯಲ್ಲಿರುವ ಕಲಾವಿದರ ಪರ ಧ್ವನಿ ಎತ್ತುವುದೆ ಒಕ್ಕೂಟದ “ಧ್ಯೇಯ ಎಂದರು.
ಇಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಮಟ್ಟದಲ್ಲಿ ಅನೇಕ ನ್ಯೂನ್ಯತೆಗಳು ಕಂಡು ಬರುತ್ತಿವೆ. ಅದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಾಗಿಲ್ಲ ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಕಲಾವಿದರಿಗೆ ಸಂಬಂಧಪಟ್ಟಂತೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರನ್ನು ಬಾಗಲಕೋಟೆ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಹಾಗೂ ಒಕ್ಕೂಟದ ಕಲಾವಿದರ “ಸಂಪರ್ಕಸಭೆ” ನಡೆಸಿ ಕಲಾವಿದರ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು ಮುಂದುವರಿದು ಮಾತನಾಡುತ್ತಾ ತಕ್ಷಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಾಯಂ ಸಹಾಯಕ ನಿರ್ದೇಶಕರನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಅಧಿಕಾರಿಗಳ ಮಟ್ಟದಲ್ಲಿ ಆಗುತ್ತಿರುವ ನೂನ್ಯತೆಗಳನ್ನು ಮನವರಿಕೆ ಮಾಡಿಕೊಳ್ಳಲು ಕಲಾವಿದರ ಪರ ನಿರಂತರ ಹೋರಾಟವನ್ನು ಒಕ್ಕೂಟವು ಮಾಡುತ್ತದೆ ಎಂದು ಹೇಳಿದರು. ಪ್ರಸಕ್ತ ಸಾಲಿನಲ್ಲಿ ಕಾರ್ಯಕ್ರಮಗಳ ಮೊತ್ತವನ್ನು ಹೆಚ್ಚಿಸಬೇಕೆಂದು ಘನ ಸಕಾ೯ರಕ್ಕೆ ಒತ್ತಾಯಿಸಿದರು.
ಶೀಘ್ರದಲ್ಲಿ ಹತ್ತು ಹಳ್ಳಿಗಳಲ್ಲಿ ಶ್ರೀ ಸಿದ್ಧಾರೂಢರ ತತ್ವ-ಚಿಂತನ. ಶ್ರೀಮನ್ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಪ್ರಾರಂಭಿಸುವದಾಗಿ ಹೇಳಿ ಎಲ್ಲ ಕಲಾವಿದರು ಕೈಜೋಡಿಸಬೇಕೆಂದು ಕೇಳಿಕೊಂಡರು. ಕಾರ್ಯಕ್ರಮದ ಸಾನಿಧ್ಯವನ್ನು ನಾದೋಪಾಸಕ ಪೂಜ್ಯರಾದ ಮಳೆರಾಜೇಂದ್ರ ಶ್ರೀಗಳು ವಹಿಸಿದ್ದರು.ತುಳಸಿಗಿರಿಯ ಪೂಜ್ಯ ಶ್ರೀ ರಾಮಾನಂದ ಶ್ರೀಗಳು ಸಮ್ಮುಖತ್ವ ವಹಿಸಿದ್ದರು.ಹಿಂದಿನ ಸಹಾಯಕ ನಿದೇ೯ಶಕ ಶ್ರೀಶೈಲ ಕರಿಶಂಕರಿ ಉದ್ಘಾಟಕರಾಗಿ ಪಾಲ್ಗೊಂಡಿದ್ದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಚಿನ್ನಪ್ಪಗೌಡ ಗಿಡ್ಡಪ್ಪಗೋಳ .ಉಪಾಧ್ಯಕ್ಷ ಶಂಕ್ರಪ್ಪ ತಂಬಾಕದ. ಉಪಸ್ಥಿತರಿದ್ದರು. ಸಿತಾರ ವಾದನ. ಸುಗಮ ಸಂಗೀತ. ಡೊಳ್ಳಿನ ಪದ. ತತ್ವ ಪದಗಳು. ಭಜನೆ ಮುಂತಾದ ಕಲಾತಂಡಗಳು ಪ್ರದರ್ಶನ ನೀಡಿದವು. ಸುಮಾರು 100 ತಂಡಗಳು ವಿಶ್ವ ಸಂಗೀತ ದಿನಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದವು. ಸಹಸ್ರ ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು.ಹಿರಿಯ ಕಲಾವಿದರಾದ ಶಂಕರ್ ಲಮಾಣಿ. ಕಾರ್ಯದರ್ಶಿ ಪವಿತ್ರ ಜಕ್ಕಪ್ನವರ್ ಮುಖಂಡರಾದ ಯಲ್ಲಪ್ಪ ಪೂಜಾರ. ಸದಾಶಿವ ಅಗೋಜಿ. ಲಕ್ಕವ್ವ ಕಪರಟ್ಟಿ.ರಾಮಣ್ಣ ಗಲಗಲಿ ಮುಂತಾದವರು ಕಾರ್ಯ ನಿರ್ವಹಿಸಿದರು.
- ಕರುನಾಡ ಕಂದ ಸುದ್ದಿ




















