ಬಳ್ಳಾರಿ / ಕುರುಗೋಡು : ಸರ್ಕಾರ ನಿಮಗೆ ವಹಿಸಿದ ಇಲಾಖೆಯ ಕೆಲಸ ವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಎಸ್.ಎಸ್. ಬೀಳಗಿ ಸಲಹೆ ನೀಡಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಜರುಗಿದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸಭೆಯಲ್ಲಿ ಅವರು ಮಾತನಾಡಿದರು.
ದಾಖಲೆಗಳ ಕೊರತೆ ಅಥವಾ ತಪ್ಪು ಕಂಡುಬಂದರೆ ಕೂಡಲೇ ಅವರಿಗೆ ಮಾಹಿತಿ ನೀಡಿ. ವಿನಾಕಾರಣ ಕಚೇ ರಿಗೆ ಅಲೆದಾಡಿಸಬೇಡಿ. ಸಾರ್ವಜನಿಕ ರಿಂದ ದೂರುಗಳು ಬಂದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾರ್ವಜನಿಕರಿಂದ ದೂರುಗಳು ಬಂದರೆ ದಿಢೀರ್ ದಾಳಿನಡೆಸಿ ಪ್ರಕರಣ ದಾಖಲಿಸಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಕಳೆದ ಎಂಟು ತಿಂಗಳಿಂದ ತಾಲ್ಲೂಕಿನಿಂದ ಯಾವುದೇ ಗಮನಾರ್ಹ ದೂರುಗಳು ಬಂದಿಲ್ಲ. ಇದರಿಂದ ತಿಳಿಯುತ್ತದೆ. ತಾಲ್ಲೂಕಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಂದಾಯ, ಸರ್ವೆ,ಲೊಕೋಪ ಯೋಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಿಸಿದ ಒಟ್ಟು 8 ಅರ್ಜಿಗಳು ಸಲ್ಲಿಕೆಯಾದವು.
ఎఇఇ ಗವಿಯಪ್ಪ, ರೇಣುಕಾಚಾರ್ಯ ಸ್ವಾಮಿ, ಪಿಎಸ್‌ಐ ಕರಿಯಮ್ಮ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















