ಕಾಳಗಿ ತಾಲೂಕಿನ ಪತ್ರಕರ್ತರ ವತಿಯಿಂದ ಕಲ್ಯಾಣ ಕರ್ನಾಟಕ ನ್ಯೂಸ್ ಸಂಪಾದಕರು ಹಾಗೂ ಕಲ್ಯಾಣ ಜ್ಯೋತಿ ದಿನ ಪತ್ರಿಕೆ ಪ್ರಧಾನ ಸಂಪಾದಕರಾದ ಮಲ್ಲಿಕಾರ್ಜುನ ಪಗಡೆ ಅವರ ಮೇಲೆ ಸುಳ್ಳು ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು,
ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಪ್ರಾಮಾಣಿಕ ಪತ್ರಕರ್ತರಿಗೆ ರಕ್ಷಣೆಯನ್ನು ಒದಗಿಸಬೇಕು ಎಂದು ಕಾಳಗಿ ಪತ್ರಕರ್ತರು ಹಾಗೂ ಮುಖಂಡರು ವತಿಯಿಂದ ಮಾನ್ಯ ತಹಶೀಲ್ದಾರ್ ಕಾಳಗಿ ಅವರ ವತಿಯಿಂದ,
ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಶರಣು ಪಾಟೀಲ್ ಸಂಜೆವಾಣಿ ವರದಿಗಾರರು, ಶ್ರೀಮಂತ ಮೇಳಕುಂದಿ ವಿಶ್ವವಾಣಿ ವರದಿಗಾರರು, ಶ್ರೀಶೈಲ್ ತೆಗಲತಿಪ್ಪಿ ಯಾದಗಿರಿ ಎಕ್ಸ್‌ಪ್ರೆಸ್, ರಮೇಶ್ ಎಸ್ ಕುಡಹಳ್ಳಿ ಜೆ.ಕೆ. ಕನ್ನಡ ನ್ಯೂಸ್ ಕಾಳಗಿ, ಶಿವಕಿರಣ್ ಪ್ಯಾಟಿಮನಿ ಕಲ್ಯಾಣ ಕರ್ನಾಟಕ ನ್ಯೂಸ್ ಕಾಳಗಿ, ಮಾರುತಿ ತೆಗಲತಿಪ್ಪಿ ದಲಿತ್ ಸೇನೆ ಮುಖಂಡರು ಕಾಳಗಿ, ಇಂದ್ರಜಿತ್ ಕಾಳಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















