ಶಿವಮೊಗ್ಗ : ರಾಜ್ಯದಿಂದ ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರ ಹೆಚ್ಚಾಗಿ ಯುವಕರು ಸೇನೆಗೆ ಸೇರಲು ಆಸಕ್ತ ತೋರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ನಗರದ ಸುಜಯ್ ಅವರು ೪ವರ್ಷಗಳ ಕಾಲ ಮಿಲಿಟರಿಯಲ್ಲಿ ಎನ್‌ಡಿಎ ಮತ್ತು ಐಎಂಎ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ನೇಮಕರಾಗಿ ಮೇಘಾಲಯಕ್ಕೆ ತೆರಳುವ ಮೂಲಕ ಸೇನೆಗೆ ಸೇರ ಬಯಸುವವರಿಗೆ ಮಾದರಿಯಾಗಿದ್ದಾರೆ.
ಈ ಹಿಂದೆ ದ್ವಿತೀಯ ಪಿಯುಸಿ ಯಲ್ಲಿ ಶೇ. 95ರಷ್ಟು ಅಂಕ ಪಡೆದರೂ ಐಟಿ -ಬಿಟಿ, ವೈದ್ಯ, ಇಂಜಿನಿಯರಿಂಗ್ ಮತ್ತಿತರ ಯಾವುದೇ ಉನ್ನತ ಹುದ್ದೆಗೆ ಆಸೆ ಪಡೆಯದೆ ದೇಶ ಕಾಯುವ ಸೇನೆಗೆ ಸೇರಿ ಈ ಸಾಧನೆ ಮಾಡಿರುವ ಶಿವಮೊಗ್ಗದ ಹುಡುಗ ಸುಜಯ್ ಅವರ ಈ ನಿರ್ಧಾರ ನಿಜಕ್ಕೂ ಶ್ಲಾಘನೀಯವಾಗಿದೆ.
ಇವರ ಈ ಸಾಧನೆಗೆ ಶಿವಮೊಗ್ಗದ ಜನತೆ ಸಂತಸ ವ್ಯಕ್ತಪಡಿಸಿದ್ದು, ಈ ಪ್ರತಿಭಾನ್ವಿತರು ಶಿವಮೊಗ್ಗ ನಗರದ ಓಲ್ಡ್ ಬಾರ್ ರಸ್ತೆಯ ಸತ್ಯ ಮೂರ್ತಿ ಮತ್ತು ಶಾರದ ದಂಪತಿಗಳ ಪುತ್ರರಾಗಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ



















