ಬಳ್ಳಾರಿ / ಕಂಪ್ಲಿ : ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್ ಇವರು ತಮ್ಮ ಪುರಸಭೆ ಆಡಳಿತದ ಅವಧಿಯಲ್ಲಿ ಸಾಕಷ್ಟು ಜನಪರ ಸೇವೆಗೈಯ್ಯುವ ಮೂಲಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಎಂದು ಯುವ ಮುಖಂಡ ಅಕ್ಕಿ ಜಿಲಾನ್ ಹೇಳಿದರು.
ಪಟ್ಟಣದ ಗಂಗಾವತಿ ರಸ್ತೆಯ ಹಜರತ್ ಬಡೇಸಾಹೇಬ್ ದರ್ಗಾದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಜನ್ಮದಿನಾಚರಣೆ ಪ್ರಯುಕ್ತ ಕೇಕ್ ಕತ್ತರಿಸಿ, ಸಿಹಿ ತಿನ್ನಿಸುವ ಮೂಲಕ ಜನ್ಮದಿನ ಆಚರಿಸಿದ ನಂತರ ಮಾತನಾಡಿ, ಜೀವದುದ್ದಕ್ಕೂ ಜನಪರ ಕೆಲಸ ಮಾಡಿಕೊಂಡು ಬಂದಿದ್ದಾರೆ. ಪುರಸಭೆಯ ಅಲ್ಪ ಅವಧಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಆದ್ದರಿಂದ ಇಂತಹ ನಾಯಕರಿಗೆ ಎಲ್ಲಾ ರಂಗದಲ್ಲಿ ಅತ್ಯುತ್ತಮ ಸ್ಥಾನ ಲಭಿಸಬೇಕು. ಇವರಿಗೆ ಆ ದೇವರು ಆಯಸ್ಸು, ಆರೋಗ್ಯದ ಜೊತೆಗೆ ಇನ್ನಷ್ಟು ಸಮಾಜಸೇವೆಗೆ ಶಕ್ತಿ ನೀಡಲಿ ಎಂದು ಹಾರೈಯಿಸಿದರು.
ನಂತರ ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ವಿಜೃಂಭಣೆಯಿಂದ ಜನ್ಮದಿನ ಆಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಲೊಡ್ಡು ಹೊನ್ನೂವರಲಿ, ಆಪ್ತ ಸಹಾಯಕ ಧನ್‌ರಾಜ್, ಮುಖಂಡರಾದ ಇಮ್ರಾನ್, ಮೈನು, ಬೆಳಗೋಡ್ ಜಾವೀದ್, ಬಿ.ಬಾಷಾ, ಬಿ.ಹಸನ್, ಆಟೋ ಮೈನುದ್ದಿನ, ಬಾಲಕೃಷ್ಣ, ಆದಿಶೇಷಯ್ಯ, ಶ್ರೀಧರ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















